ಕೊಲಂಬೊದಲ್ಲಿ ನಡೆದ ಏಷ್ಯಾಕಪ್ನ ಸೂಪರ್-4 ಹಂತದ 3ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಹಾಗೂ ಕೆಎಲ್ ರಾಹುಲ್ (KL Rahul) ಭರ್ಜರಿ ಶತಕಗಳನ್ನು ಬಾರಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದು ವಿಶೇಷ.
ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕಿಂಗ್ ಕೊಹ್ಲಿ 94 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 122 ರನ್ ಬಾರಿಸಿದರೆ, 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದರೆ ಕೆಎಲ್ ರಾಹುಲ್ 106 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ ಅಜೇಯ 111 ರನ್ ಸಿಡಿಸಿದರು.
13,000 reasons why we love him ❤️
77th 💯 for #ViratKohli 👑#INDvPAK live now only on #DisneyPlusHotstar, free on the mobile app.#FreeMeinDekhteJaao #AsiaCupOnHotstar #Cricket pic.twitter.com/duTRFR7Ffy— Disney+ Hotstar (@DisneyPlusHS) September 11, 2023
ಈ ಅತ್ಯುತ್ತಮ ಜುಗಲ್ಬಂದಿಯೊಂದಿಗೆ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ಗಳ ಜೊತೆಯಾಟವಾಡಿದ ವಿಶೆಷ ದಾಖಲೆಯನ್ನು ನಿರ್ಮಿಸಿದರು. ಇದರ ಜೊತೆಗೆ ಇನ್ನೂ ಕೆಲ ರೆಕಾರ್ಡ್ಗಳನ್ನು ಬರೆದರು. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಭಾರತ-ಪಾಕ್ ಪಂದ್ಯದಲ್ಲಿ ಅತ್ಯುತ್ತಮ ಜೊತೆಯಾಟ: ಈ ಪಂದ್ಯದಲ್ಲಿ ಮೂರನೇ 3ನೇ ವಿಕೆಟ್ಗೆ ಜೊತೆಗೂಡುವ ಮೂಲಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅಜೇಯ 233 ರನ್ಗಳ ಜೊತೆಯಾಟವಾಡಿದರು. ಇದರೊಂದಿಗೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಅತ್ಯಧಿಕ ರನ್ಗಳ ಜೊತೆಯಾಟವಾಡಿದ ಜೋಡಿ ಎಂಬ ದಾಖಲೆ ಕಿಂಗ್ ಕೊಹ್ಲಿ ಹಾಗೂ ಕ್ಲಾಸ್ ರಾಹುಲ್ ಪಾಲಾಯಿತು.
ಏಷ್ಯಾಕಪ್ನ ಅತ್ಯುತ್ತಮ ಜೊತೆಯಾಟ: 233 ರನ್ಗಳ ಜೊತೆಯಾಟದೊಂದಿಗೆ ಏಷ್ಯಾಕಪ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳ ಪಾಲುದಾರಿಕೆ ಪ್ರದರ್ಶಿಸಿದ ಜೋಡಿ ಎಂಬ ಹೆಗ್ಗಳಿಕೆಗೂ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಪಾತ್ರರಾದರು.
ಇದನ್ನೂ ಓದಿ: Virat Kohli: ಭರ್ಜರಿ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ
ಭಾರತದ ಪರ 3ನೇ ಮತ್ತು 4ನೇ ಕ್ರಮಾಂಕದಲ್ಲಿ ಶತಕ: ಟೀಮ್ ಇಂಡಿಯಾ ಪರ 3ನೇ ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಬಾರಿಸಿದ 3ನೇ ಜೋಡಿ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಪಾಲಾಗಿದೆ.