Virat Kohli’s Net Worth: ಗಳಿಕೆಯಲ್ಲಿ ಸಾಮ್ರಾಟನಾದ ವಿರಾಟ: ಕೊಹ್ಲಿಯ ಒಟ್ಟು ಗಳಿಕೆ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿಯೊಂದು ಪ್ರಮೋಷನಲ್ ಪೋಸ್ಟ್​ಗೆ ಬರೋಬ್ಬರಿ 5 ಕೋಟಿ ಹಣ ಗಳಿಸುತ್ತಾರೆ. ಬಿಸಿಸಿಐಯ A+ ಕೆಟಗರಿ ಹೊಂದಿರುವ ಕೊಹ್ಲಿ ವರ್ಷಕ್ಕೆ 7 ಕೋಟಿ ಸಂಬಳ ಪಡೆಯುತ್ತಾರೆ.

Virat Kohlis Net Worth: ಗಳಿಕೆಯಲ್ಲಿ ಸಾಮ್ರಾಟನಾದ ವಿರಾಟ: ಕೊಹ್ಲಿಯ ಒಟ್ಟು ಗಳಿಕೆ ಎಷ್ಟು ಗೊತ್ತಾ?
Virat Kohli
Edited By:

Updated on: Jul 22, 2021 | 10:44 AM

ವಿರಾಟ್ ಕೊಹ್ಲಿ (Virat Kohli), ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಭಾರತದ ಹೆಮ್ಮೆಯ ಕ್ರಿಕೆಟಿಗ. ಅತಿ ಚಿಕ್ಕ ವಯಸ್ಸಿನಲ್ಲಿ ಬೆಟ್ಟದಂತಹ ಸಾಧನೆ ಗೈದು ಕ್ರಿಕೆಟ್ (Cricket) ವೃತ್ತಿ ಜೀವನಕ್ಕೆ ನಿವೃತ್ತಿ ನೀಡುವ ಮುನ್ನವೇ ಲೆಜೆಂಡ್ ಎಂದು ನಿರೂಪಿದ ಅಪರೂಪದ ಪ್ಲೇಯರ್. ಕೊಹ್ಲಿ ಕೇವಲ ರನ್ ಮೆಷಿನ್ ಮಾತ್ರವಲ್ಲ. ಮನಿ ಮೇಕಿಂಗ್ ಮಿಷನ್ ಕೂಡ ಹೌದು. ಯಾಕೆಂದರೆ ಜಾಹೀರಾತು ಕಂಪನಿಗಳ ಹಾಟ್ ಫೇವರಿಟ್ ಕೊಹ್ಲಿ ಸಂಪಾದನೆಯಲ್ಲೂ ದಾಖಲೆ ಬರೆಯುತ್ತಿದ್ದಾರೆ.

ಪ್ರತಿ ವರ್ಷ ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡುವ ಅತೀ ಹೆಚ್ಚು ಆದಾಯ ಗಳಿಸಿದ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಟಾಪ್ ಮೂರರಲ್ಲಿ ಸ್ಥಾನ ಇದ್ದೇ ಇರುತ್ತದೆ. ನೀರು ಕುಡಿದಂತೆ ದಾಖಲೆಗಳನ್ನು ಅಳಿಸಿ ಹಾಕುವ ಟೀಮ್ ಇಂಡಿಯಾ ನಾಯಕ ಸಾಮಾಜಿಕ ಜಾಲತಾಣಗಳಲ್ಲೂ ಕಿಂಗ್. ಇನ್​ಸ್ಟಾಗ್ರಾಮ್​ನಲ್ಲಿ 100 ಮಿಲಿಯನ್​ಗೂ ಅಧಿಕ ಪಾಲೋವರ್ಸ್ ಹೊಂದಿರುವ ಏಕೈಕ ಕ್ರಿಕೆಟಿಗ.

ವಿರಾಟ್ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿಯೊಂದು ಪ್ರಮೋಷನಲ್ ಪೋಸ್ಟ್​ಗೆ ಬರೋಬ್ಬರಿ 5 ಕೋಟಿ ಹಣ ಗಳಿಸುತ್ತಾರೆ. ಬಿಸಿಸಿಐಯ A+ ಕೆಟಗರಿ ಹೊಂದಿರುವ ಕೊಹ್ಲಿ ವರ್ಷಕ್ಕೆ 7 ಕೋಟಿ ಸಂಬಳ ಪಡೆಯುತ್ತಾರೆ. ಇನ್ನೂ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಪ್ರತಿ ಸೀಸನ್​ನಲ್ಲಿ 17 ಕೋಟಿ ಸಂಪಾದಿಸುತ್ತಾರೆ.

ಇದುಬಿಟ್ಟರೆ ಕೊಹ್ಲಿಗೆ ಪ್ರಾಯೋಜಕತ್ವದಿಂದ ಬರುಹ ಹಣ ಬೇರೆಯೆ. ಪುಮಾ, ಮಿಂತ್ರ, ಊಬರ್ ಇಂಡಿಯಾ, ಆಡಿ, ಎಂಆರ್​ಎಫ್, ಎಂಪಿಎಲ್, ಪಿಲಿಪ್ಸ್ ಇಂಡಿಯಾ, ಹೀರೋ, ವಿಕ್ಸ್ ಸೇರಿದಂತೆ ಅನೇಕ ಬ್ರ್ಯಾಂಡ್​ಗಳ ಪ್ರಾಯೋಜಕತ್ವದಿಂದ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ. ಹಾಪರ್ ಹೆಚ್​ಕ್ಯೂ ಪ್ರಕಟಿಸಿರುವ ಪ್ರಕಾರ, ವಿರಾಟ್ ಕೊಹ್ಲಿಯ ವಾರ್ಷಿಕ ಆದಾಯ ಬರೋಬ್ಬರಿ 450 ಕೋಟಿಯಂತೆ.

ವಿರಾಟ್ ಕೊಹ್ಲಿ ಸದ್ಯ ಆಂಗ್ಲರ ನಾಡಿನಲ್ಲಿ ಬೀಡುಬಿಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್​ ಸರಣಿ ಪೈಕಿ ಆಗಸ್ಟ್ 4 ರಿಂದ ಮೊದಲ ಪಂದ್ಯ ಆರಂಭವಾಗಲಿದೆ.

Virat Kohli: ವಾವ್: ವಿರಾಟ್ ಕೊಹ್ಲಿಯಿಂದ ನೆಟ್​ನಲ್ಲಿ ಮನಮೋಹಕ ಹೊಡೆತ: ಭರ್ಜರಿ ಅಭ್ಯಾಸ

‘ಎಬಿ ಡಿವಿಲಿಯರ್ಸ್​ ನನ್ನ ಕ್ರಿಕೆಟ್ ಜೀವನವನ್ನೇ ಹಾಳು ಮಾಡಿದರು’: ಹೀಗೆ ಹೇಳಿದ್ದು ಯಾರು ಗೊತ್ತಾ?

(Virat Kohli net worth: Here is the Indian skipper virat kohlis earnings and his sponsorship deals)