AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ishan Kishan: ಇಶಾನ್ ಕಿಶನ್​ಗಾಗಿ ತನ್ನ ಬ್ಯಾಟಿಂಗ್ ಕ್ರಮಾಂಕವನ್ನೇ ತ್ಯಾಗ ಮಾಡಿದ ವಿರಾಟ್ ಕೊಹ್ಲಿ

Virat Kohli, IND vs WI 2nd T20I: ಇಶಾನ್ ಕಿಶನ್ ಟಿ20 ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 34 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್​ನಿಂದ ಅಜೇಯ 52 ರನ್ ಚಚ್ಚಿದರು. ಟೆಸ್ಟ್ ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಕಿಶನ್ ಅವರು ವಿರಾಟ್ ಕೊಹ್ಲಿ ಅವರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದು ವಿಶೇಷ.

Ishan Kishan: ಇಶಾನ್ ಕಿಶನ್​ಗಾಗಿ ತನ್ನ ಬ್ಯಾಟಿಂಗ್ ಕ್ರಮಾಂಕವನ್ನೇ ತ್ಯಾಗ ಮಾಡಿದ ವಿರಾಟ್ ಕೊಹ್ಲಿ
Virat Kohli and Ishan Kishan
Vinay Bhat
|

Updated on: Jul 24, 2023 | 10:21 AM

Share

ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್ ಓವಲ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ಅಂತಿಮ ಎರಡನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇಂದು ಕೊನೆಯ ದಿನದಾಟ ಮಾತ್ರ ಬಾಕಿ ಉಳಿದಿದ್ದು ಕೆರಿಬಿಯನ್ನರ ಗೆಲುವಿಗೆ 289 ರನ್​ಗಳ ಅವಶ್ಯಕತೆಯಿದ್ದರೆ, ಭಾರತದ ಜಯಕ್ಕೆ ವಿಂಡೀಸ್​ನ 8 ವಿಕೆಟ್​ಗಳು ಕೀಳಬೇಕಿದೆ. ಮೊದಲ ಇನ್ನಿಂಗ್ಸ್​ನಲ್ಲಿ ವಿಂಡೀಸ್ ತಂಡವನ್ನು 255 ರನ್​ಗಳಿಗೆ ಆಲೌಟ್ ಮಾಡಿ ತನ್ನ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ (Team India) ಭರ್ಜರಿ ಬ್ಯಾಟಿಂಗ್ ನಡೆಸಿತು. ಅದರಲ್ಲೂ ಇಶಾನ್ ಕಿಶನ್ (Ishan Kishan) ಟಿ20 ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 34 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್​ನಿಂದ ಅಜೇಯ 52 ರನ್ ಚಚ್ಚಿದರು.

ಟೆಸ್ಟ್ ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಕಿಶನ್ ಅವರು ವಿರಾಟ್ ಕೊಹ್ಲಿ ಅವರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದು ವಿಶೇಷ. ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿಯದ್ದು ನಾಲ್ಕನೇ ಕ್ರಮಾಂಕ. ಈ ಸ್ಥಾನವನ್ನು ಅವರು ಯಾರಿಗೂ ಬಿಟ್ಟುಕೊಡುವುದಿಲ್ಲ. ಆದರೆ, ಈ ಬಾರಿ ತಂಡದ ಹಿತಕ್ಕಾಗಿ ಕೊಹ್ಲಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಕಿಶನ್​ಗೆ ತ್ಯಾಗ ಮಾಡಿದರು. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಇಶಾನ್ ಕಿಶನ್ ಮಾಹಿತಿ ನೀಡಿದ್ದಾರೆ.

IND vs WI: ಅತ್ಯಲ್ಪ ಓವರ್​ಗಳಲ್ಲಿ ಶತಕ ಸಿಡಿಸಿ ಹಲವು ದಾಖಲೆ ಬರೆದ ಟೀಂ ಇಂಡಿಯಾ

ಇದನ್ನೂ ಓದಿ
Image
WTC Standings 2023-25: ಮುಂದುವರೆದ ಭಾರತದ ನಾಗಾಲೋಟ; ಆಸೀಸ್​ಗೆ 3ನೇ ಸ್ಥಾನ
Image
Ishan Kishan: ರಿಷಭ್ ಪಂತ್ ಬ್ಯಾಟ್ ಹಿಡಿದು ಸ್ಫೋಟಕ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್: ಪಂದ್ಯದ ಬಳಿಕ ಏನಂದ್ರು ನೋಡಿ
Image
IND vs WI: ಸತತ 30ನೇ ಬಾರಿ; ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ರೋಹಿತ್..!
Image
IND vs WI: 500 ವಿಕೆಟ್! ವಿಂಡೀಸ್ ನೆಲದಲ್ಲಿ ಹೀಗೊಂದು ದಾಖಲೆ ಬರೆದ ಅಶ್ವಿನ್- ಜಡೇಜಾ ಜೋಡಿ

”ಈ ಆಟ ನಿಜಕ್ಕೂ ವಿಶೇಷವಾಗಿತ್ತು. ತಂಡಕ್ಕೆ ನನ್ನಿಂದ ಏನು ಕೊಡುಗೆ ಬೇಕು ಎಂಬುದು ನನಗೆ ತಿಳಿದಿತ್ತು. ಎಲ್ಲರೂ ನನ್ನನ್ನು ಬೆಂಬಲಿಸಿದರು. ಮುಖ್ಯವಾಗಿ ವಿರಾಟ್ ಕೊಹ್ಲಿ ನನ್ನನ್ನು ಬೆಂಬಲಿಸಿ, ಹೋಗಿ ನಿನ್ನ ಆಟ ಆಡು ಎಂದು ಹೇಳಿದರು. ವಿರಾಟ್ ಭಾಯ್ ಅವರು ನೀನು ನನ್ನ ಕ್ರಮಾಂಕದಲ್ಲಿ ಆಡು ಎಂದು ಹೇಳಿದರು. ನಾವು ಮಳೆಯ ವಿರಾಮನದ ನಂತರ ಯೋಜನೆ ರೂಪಿಸಿದ್ದೆವು. ನಮಗೆ 10-12 ಓವರ್‌ಗಳು ಸಿಗುತ್ತದೆ. ಇದರಲ್ಲಿ 70-80 ರನ್ ಗಳಿಸಬೇಕು ಎಂಬುದು ಪ್ಲಾನ್ ಆಗಿತ್ತು. ಅದರಂತೆ ನಾವು ಆಡಿದೆವು,” ಎಂದು ಕಿಶನ್ ಹೇಳಿದ್ದಾರೆ.

ರಿಷಭ್ ಪಂತ್ ಬ್ಯಾಟ್​ನಲ್ಲಿ ಕಿಶನ್ ಆಟ:

ವಿಶೇಷ ಎಂದರೆ ಕಿಶನ್ ಅವರು ಥೇಟ್ ರಿಷಭ್ ಪಂತ್ ಮಾದರಿಯಲ್ಲಿ ಒಂದೇ ಕೈಯಲ್ಲಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರ್ಣಗೊಳಿಸಿದರು. ಮತ್ತೊಂದು ಅಚ್ಚರಿ ಎಂದರೆ ಕಿಶನ್ ಅವರು ಆಟವಾಡಿದ್ದು ಪಂತ್ ಅವರ ಬ್ಯಾಟ್​ನಲ್ಲಿ. ಇಶಾನ್ ಕಿಶನ್ ಆಡುತ್ತಿದ್ದ ಬ್ಯಾಟ್​ನಲ್ಲಿ RP 17 ಎಂದು ಬರೆದಿರುವುದು ಕಂಡು ಬಂದಿದೆ. ಇದು ರಿಷಭ್ ಪಂತ್ ಅವರ ಬ್ಯಾಟ್ ಆಗಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಕಿಶನ್, ”ನಾನು ಇಲ್ಲಿಗೆ ಬರುವ ಮುನ್ನ ಎನ್​ಸಿಎಗೆ ತೆರಳಿದ್ದೆ. ಅಲ್ಲಿ ಪಂತ್​ರನ್ನು ಭೇಟಿ ಮಾಡಿದೆ. ಅವರು ಕೆಲ ಬ್ಯಾಟಿಂಗ್ ಟಿಪ್ಸ್ ನೀಡಿದರು. ನಾನು ಮತ್ತು ರಿಷಭ್ ಪಂತ್ ಅಂಡರ್-19 ದಿನಗಳಿಂದ ಜೊತೆಗಿದ್ದೇವೆ. ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ. ನಾನು ಹೇಗೆ ಆಡುತ್ತೇನೆ ಎಂಬುದು ಪಂತ್​ಗೆ ಚೆನ್ನಾಗಿ ತಿಳಿದಿದೆ,” ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ