
ಸದ್ಯ ವಿಶ್ವ ಕ್ರಿಕೆಟ್ ಆಳುತ್ತಿರುವ ಕಿಂಗ್ ಕೊಹ್ಲಿ (Virat Kohli) ಬಗ್ಗೆ ಮಾತಿಗಿಳಿದಾಗಲೆಲ್ಲ ಮೊದಲು ಪ್ರಸ್ತಾಪವಾಗುವುದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಬಾರಿಸಿದ ಶತಕಗಳ ಬಗ್ಗೆ. ಅವರ ಬ್ಯಾಟ್‌ನಿಂದ ಹೊರಬಂದ ರನ್‌ಗಳ ಬಗ್ಗೆ.ಪ್ರತಿ ಪಂದ್ಯದಲ್ಲೂ ನಿರ್ಮಿಸಿದ ದಾಖಲೆಗಳ ಬಗ್ಗೆ ಮಾತನಾಡಲಾಗುತ್ತದೆ. ಅದೇ ರೀತಿ ಮೈದಾನದ ಹೊರಗೆ ಕೊಹ್ಲಿ ಬಗ್ಗೆ ಮಾತನಾಡಿದರೆ, ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿ ಹೊಂದಿರುವ ಫಾಲೋವರ್ಸ್, ಐಷರಾಮಿ ಜೀವನ, ದುಬಾರಿ ಬೆಲೆಯ ಕಾರುಗಳು ಎದುರಾಗುತ್ತವೆ. ಆದರೆ ಇದೇ ಕೊಹ್ಲಿ ಐಪಿಎಲ್ (IPL 2023) ಆರಂಭಕ್ಕೂ ಮುನ್ನ ತನ್ನ ಬಳಿ ಇದ್ದ ದುಬಾರಿ ಬೆಲೆಯ ಕಾರುಗಳನ್ನು ಮಾರಿರುವ ಶಾಕಿಂಗ್ ಸುದ್ದಿಯೊಂದನ್ನು ಹೊರಹಾಕಿದ್ದಾರೆ. ಇದಕ್ಕೆ ಕೊಹ್ಲಿ ಸೂಕ್ತ ಕಾರಣವನ್ನು ನೀಡಿದ್ದು,ಇದೀಗ ಕೊಹ್ಲಿಯ ಸರಳತೆಗೆ ನೆಟ್ಟಿಗರು ಸಲಾಂ ಹೊಡೆಯುತ್ತಿದ್ದಾರೆ.
ವಾಸ್ತವವಾಗಿ ವೃತ್ತಿಬದುಕು ಆರಂಭವಾದಗಿನಿಂದಲೂ ವಿರಾಟ್‌ಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ಜಾಗ್ವಾರ್, ಲ್ಯಾಂಡ್ ರೋವರ್, ಬೆಂಟ್ಲಿ ಮತ್ತಿತರ ಸೂಪರ್ ಮತ್ತು ಐಷಾರಾಮಿ ಕಾರುಗಳು ಕೊಹ್ಲಿ ಗ್ಯಾರೇಜ್‌ನಲ್ಲಿದ್ದವು. ಆದರೆ ಐಪಿಎಲ್ ಸೀಸನ್‌ಗೂ ಮುನ್ನ ವಿರಾಟ್ ಹಲವು ಕಾರುಗಳನ್ನು ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ಹೇರ್ ಸ್ಟೈಲ್ ಬದಲಿಸಿ ಹೊಸ ಟ್ಯಾಟೂ ಹಾಕಿಸಿಕೊಂಡ ಕೊಹ್ಲಿ; ಫೋಟೋ ನೋಡಿ
ಆರ್‌ಸಿಬಿ ಜೊತೆಗಿನ ಹೊಸ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ವಿಡಿಯೋವೊಂದರಲ್ಲಿ ಈ ಕುರಿತು ಮಾತನಾಡಿರುವ ಕೊಹ್ಲಿ, ತನ್ನ ಬಳಿ ಇದ್ದ ಹಲವು ದುಬಾರಿ ಬೆಲೆಯ ಕಾರುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕೊಹ್ಲಿ ನೀಡಿರುವ ಕಾರಣ ಕೊಂಚ ಅಚ್ಚರಿ ಮೂಡಿಸಬಹುದು. ಆರ್‌ಸಿಬಿಯ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೊಹ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ನನ್ನ ಗ್ಯಾರೇಜ್‌ನಲ್ಲಿರುವ ಹೆಚ್ಚಿನ ಕಾರುಗಳನ್ನು ನಾನು ಹಿಂದೆ ಮುಂದೆ ಯೋಚಿಸದೆ ಖರೀದಿಸಿದ್ದೆ. ಆದರೆ ನಾನು ಖರೀದಿಸಿದ ಕಾರುಗಳನ್ನು ಹೆಚ್ಚಾಗಿ ಬಳಸಲಿಲ್ಲ. ಹೀಗಾಗಿ ಸ್ವಲ್ಪ ಸಮಯದ ನಂತರ ನಾನು ಅವುಗಳನ್ನು ಅನಗತ್ಯವಾಗಿ ಖರೀದಿಸಿದೆ ಎಂದು ನನಗೆ ಅನಿಸಿತು. ಅದಕ್ಕಾಗಿಯೇ ನಾನು ಅವುಗಳನ್ನು ಮಾರಾಟ ಮಾಡಿದೆ. ಈಗ ನನ್ನ ಬಳಿ ಸಂಪೂರ್ಣವಾಗಿ ಅಗತ್ಯವೆಂದು ಭಾವಿಸುವ ಕಾರುಗಳಷ್ಟೇ ಇವೆ ಎಂದು ಕೊಹ್ಲಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
Behind the Scenes with Virat Kohli at RCB Team Photoshoot
Current playlist, new tattoo, trump cards and more… Know more about the personal side of @imVKohli, on Bold Diaries.#PlayBold #ನಮ್ಮRCB #IPL2023 pic.twitter.com/nCatZhgFAQ
— Royal Challengers Bangalore (@RCBTweets) March 29, 2023
ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ತಮ್ಮ ಮನೆಯಿಂದ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಬಂದಿದ್ದರು. ಆ ವೇಳೆ ಅವರು ಜಾಗ್ವಾರ್ ಕಾರಿನಲ್ಲಿ ಬಂದಿದ್ದರು, ಇದನ್ನು ನೋಡಲು ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಆದರೆ, ಈ ಕಾರು ಅವರ ಸಹೋದರ ವಿಕಾಸ್ ಕೊಹ್ಲಿಗೆ ಸೇರಿದ್ದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Thu, 30 March 23