Virat Kohli: ವಿರಾಟ್ ಕೊಹ್ಲಿ ನೆಲೆಸಿರುವ ಖಾಸಗಿ ರೂಮ್​ನ ವಿಡಿಯೋ ಸೋರಿಕೆ: ಇನ್​ಸ್ಟಾಗ್ರಾಮ್​ನಲ್ಲಿ ಕೋಪಗೊಂಡ ಕಿಂಗ್

| Updated By: Vinay Bhat

Updated on: Oct 31, 2022 | 11:46 AM

ಭಾನುವಾರ ಪರ್ತ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ಆಯೋಜಿಸಲಾಗಿತ್ತು. ಈ ಸಂದರ್ಭ ಹೋಟೇಲ್​ನಲ್ಲಿರುವ ಕೊಹ್ಲಿಯ ರೂಮ್​ಗೆ ಅನಾಮಿಕ ವ್ಯಕ್ತಿ ತೆರಳಿದ್ದು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.

Virat Kohli: ವಿರಾಟ್ ಕೊಹ್ಲಿ ನೆಲೆಸಿರುವ ಖಾಸಗಿ ರೂಮ್​ನ ವಿಡಿಯೋ ಸೋರಿಕೆ: ಇನ್​ಸ್ಟಾಗ್ರಾಮ್​ನಲ್ಲಿ ಕೋಪಗೊಂಡ ಕಿಂಗ್
Virat Kohli Room Video
Follow us on

ಐಸಿಸಿ ಟಿ20 ವಿಶ್ವಕಪ್​ಗಾಗಿ (T20 World Cup) ಆಸ್ಟ್ರೇಲಿಯಾದಲ್ಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅವಮಾನ ಕಾಡುತ್ತಿದೆ. ಇತ್ತೀಚೆಗಷ್ಟೆ ಟೀಮ್ ಇಂಡಿಯಾ ಆಟಗಾರರಿಗೆ ಬೇಕಾದ ಆಹಾರ ವ್ಯವಸ್ಥೆ ಇರಲಿಲ್ಲ ಎಂಬುದು ದೊಡ್ಡ ಸುದ್ದಿಯಾಗಿತ್ತು. ಅಲ್ಲದೆ ಸ್ಟೇಡಿಯಂನಿಂದ ತಂಗಿರುವ ಹೋಟೆಲ್​ಗೆ ಸಾಕಷ್ಟು ದೂರ ಪ್ರಯಾಣಿಸ ಬೇಕಿತ್ತು. ಇವುಗಳ ನಡುವೆ ಇದೀಗ ಟೀಮ್ ಇಂಡಿಯಾದ (Team India) ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ (Virat Kohli) ಕೋಪ ಬಂದಂತಹ ಮತ್ತೊಂದು ಘಟನೆ ನಡೆದಿದೆ. ಯಾರೂ ಇಲ್ಲದ ಸಮಯದಲ್ಲಿ ಹೋಟೇಲ್​ನಲ್ಲಿರುವ ಕೊಹ್ಲಿಯ ರೂಮ್​ಗೆ ಅನಾಮಿಕ ವ್ಯಕ್ತಿ ತೆರಳಿದ್ದು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.

ಭಾನುವಾರ ಪರ್ತ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ಆಯೋಜಿಸಲಾಗಿತ್ತು. ಹೀಗಾಗಿ ಭಾರತದ ಆಟಗಾರರು ಪರ್ತ್​ನಲ್ಲಿ ನೆಲೆಸಿದ್ದ ಹೋಟೆಲ್​ನಿಂದ ಸ್ಟೇಡಿಯಂಗೆ ತೆರಳಿದ್ದರು. ಈ ಸಂದರ್ಭ ವ್ಯಕ್ತಿಯೊಬ್ಬರು ಹೊಟೇಲ್​ನಲ್ಲಿ ಕೊಹ್ಲಿ ನೆಲೆಸಿರುವ ಕೊಠಡಿಯೊಳಗೆ ಪ್ರವೇಶಿಸಿ ವಿಡಿಯೋ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕೋಪಗೊಂಡ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
R Ashwin: ಮಂಕಡಿಂಗ್ ಮಾಡುವ ಸುಲಭ ಅವಕಾಶವಿದ್ದರೂ ಕೈಚೆಲ್ಲಿದ ಆರ್. ಅಶ್ವಿನ್: ವೈರಲ್ ವಿಡಿಯೋ ನೋಡಿ
Dinesh Karthik Injury: ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಶಾಕ್: ಸ್ಟಾರ್ ಆಟಗಾರನಿಗೆ ಇಂಜುರಿ
Rohit Sharma: ಪಂದ್ಯ ಮುಗಿದ ಬಳಿಕ ತಂಡದ ಸೋಲಿಗೆ ನಾಯಕ ರೋಹಿತ್ ಶರ್ಮಾ ದೂರಿದ್ದು ಯಾರನ್ನು ಗೊತ್ತೇ?
T20 World Cup 2022 Point Table: ಟೀಮ್ ಇಂಡಿಯಾಗೆ ಸೋಲು: ಪಾಯಿಂಟ್ ಟೇಬಲ್​ನಲ್ಲಿ ಮಹತ್ವದ ಬದಲಾವಣೆ

”ಅಭಿಮಾನಿಗಳಿಗೆ ತನ್ನ ಮೆಚ್ಚಿನ ಕ್ರಿಕೆಟಿಗನನ್ನು ನೋಡಬೇಕು, ಬೇಟಿಯಾಗಬೇಕು ಎಂಬ ಆಸೆ ಇರುತ್ತದೆ ನಿಜ. ಆ ಭಾವನೆ ನನಗೆ ಅರ್ಥವಾಗುತ್ತದೆ. ಅದನ್ನು ನಾನು ಗೌರವಿಸುತ್ತೇನೆ ಕೂಡ. ಆದರೆ, ಈ ವಿಡಿಯೋ ಮಾತ್ರ ನನ್ನ ಖಾಸಗಿ ವಿಚಾರಕ್ಕೆ ದಕ್ಕೆ ಬಂದಂತಿದೆ. ನನ್ನ ವೈಯಕ್ತಿಕ ಹೋಟೆಲ್ ರೂಮ್​ನಲ್ಲೇ ನನಗೆ ಪ್ರೈವಸಿ ಇಲ್ಲ ಎಂದಾದರೆ ನನಗೆ ಪರ್ಸನಲ್ ಸ್ಪೇಸ್ ಎಂಬುದು ಎಲ್ಲಿ ಸಿಗುತ್ತದೆ. ಈ ವಿಚಾರದಿಂದ ನಾನು ಸಂತಸವಾಗಿಲ್ಲ. ದಯವಿಟ್ಟು ಜನರ ಖಾಸಗಿ ವಿಚಾರಕ್ಕೆ ಗೌರವ ನೀಡಿ. ಅವರನ್ನು ಮನೋರಂಜನೆ ನೀಡುವ ರೀತಿ ಕಾಣಬೇಡಿ,” ಎಂದು ಬರೆದುಕೊಂಡಿದ್ದಾರೆ.

ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಪ್ರತಿಕ್ರಿಯೆ ನೀಡಿದ್ದು ಬೇಸರ ಹೊರಹಾಕಿದ್ದಾರೆ. ಕೆಲ ಅಭಿಮಾನಿಗಳು ಈ ಹಿಂದೆ ಕೂಡ ಇದೇರೀತಿ ನಡೆದುಕೊಂಡಿದ್ದಾರೆ. ಇದು ನಿಜವಾಗಿಯೂ ಒಳ್ಳೆಯ ಸಂಗತಿಯಲ್ಲ ಎಂದು ಹೇಳಿದ್ದಾರೆ.

 

ವೈರಲ್ ಆಗುತ್ತಿರುವ ಕೊಹ್ಲಿ ರೂಮ್​ನ ಈ ವಿಡಿಯೋದಲ್ಲಿ ವಿರಾಟ್ ಅವರ ಕಿಟ್ ಬ್ಯಾಗ್, ಬ್ರಾತ್​ರೂಮ್ ಕೆಲ ವೈಯಕ್ತಿಕ ವಸ್ತುಗಳು ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿರುವುದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್, ಬಾಲಿವುಡ್ ನಟ ವರುಣ್ ಧವನ್, ನಟಿ ಪರಿಣಿತಿ ಚೋಪ್ರ ಈರೀತಿ ನಡೆಯ ಬಾರದಿತ್ತು ಎಂದು ಹೇಳಿದ್ದಾರೆ.

ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು:

ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್​ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿತು. ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್ ಬಾರಿಸಿ 68 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 15 ರನ್ ಬಾರಿಸಿದ್ದೇ ಹೆಚ್ಚು. ಉಳಿದ ಬ್ಯಾಟರ್​ಗಳು ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಪೆವಿಲಿಯನ್ ಸೇರಿಕೊಂಡರು. ಆಫ್ರಿಕಾ ಪರ ಲುಂಗಿ ಎನ್​ಗಿಡಿ 4 ವಿಕೆಟ್ ಕಿತ್ತರು.

ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಆ್ಯಡಂ ಮರ್ಕ್ರಮ್ (52) ಹಾಗೂ ಡೇವಿಡ್ ಮಿಲ್ಲರ್ (ಅಜೇಯ 59) ಅವರ 73 ರನ್​ಗಳ ಜೊತೆಯಾಟದ ನೆರವಿನಿಂದ 19.4 ಓವರ್​ನಲ್ಲಿ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಹರಿಣಗಳ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದರೆ ಭಾರತ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಸೆಮಿ ಫೈನಲ್ ರೇಸ್​ನಲ್ಲಿ ಉಳಿದಯಬೇಕಾದರೆ ಟೀಮ್ ಇಂಡಿಯಾಕ್ಕೆ ಮುಂದಿನ ಬಾಂಗ್ಲಾ ಹಾಗೂ ಜಿಂಬಾಬ್ವೆ ವಿರುದ್ಧದ ಎರಡು ಪಂದ್ಯ ಮಹತ್ವದ್ದಾಗಿದೆ.

Published On - 11:46 am, Mon, 31 October 22