ಭಾನುವಾರ ಪರ್ತ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ (India vs South Africa) ಸೋಲು ಕಂಡಿತು. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ನೀಡಿದ ಕಳಪೆ ಫೀಲ್ಡಿಂಗ್ ಸೋಲಿಗೆ ಮುಖ್ಯ ಕಾರಣವಾಯಿತು.
ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ತಂಡ ಸೋಲಲು ನಾವು ಪ್ರದರ್ಶಿಸಿದ ಕೆಟ್ಟ ಫೀಲ್ಡಿಂಗ್ ಕಾರಣ ಎಂದು ಹೇಳಿದರು. 5 ವಿಕೆಟ್ಗಳ ಗೆಲುವಿನ ಮೂಲಕ ಉತ್ತಮ ರನ್ರೇಟ್ ಹಾಗೂ 2 ಅಂಕ ಸಂಪಾದಿಸಿ ದಕ್ಷಿಣ ಆಫ್ರಿಕಾ ಟೇಬಲ್ ಟಾಪರ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಲುಂಗಿ ಎನ್ಗಿಡಿ ಆರಂಭದಲ್ಲೆ ಆಘಾತ ನೀಡಿದರು. ಕೆ.ಎಲ್. ರಾಹುಲ್ (9), ರೋಹಿತ್ ಶರ್ಮಾ (15), ವಿರಾಟ್ ಕೊಹ್ಲಿ (12), ಹಾರ್ದಿಕ್ ಪಾಂಡ್ಯ (0) ಹಾಗೂ ದೀಪಕ್ ಹೂಡ (0) ಅವರ ವಿಕೆಟ್‌ಗಳನ್ನು 50 ರನ್ಗು ಮುನ್ನವೇ ಕಳೆದುಕೊಂಡಿತು. ಆದರೆ ಮತ್ತೊಮ್ಮೆ ದಿಟ್ಟ ಆಟವಾಡಿದ ಸೂರ್ಯಕುಮಾರ್ ಯಾದವ್ (68 ರನ್, 40ಎಸೆತ, 6 ಫೋರ್, 3 ಸಿಕ್ಸರ್) ಅವರಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 133 ರನ್ ಗಳಿಸಿತು.
ಸಾಧಾರಣ ಗುರಿ ಬೆನ್ನತ್ತಿದ ಆಫ್ರಿಕಾಗೆ ಅರ್ಷದೀಪ್ ಸಿಂಗ್ ಆರಂಭದಲ್ಲೇ ಎರಡು ವಿಕೆಟ್ ಪಡೆದು ಆಘಾತ ನೀಡಿದರು. ಕ್ವಿಂಟಾನ್ ಡಿ ಕಾಕ್ 1 ಮತ್ತು ರಿಲೀ ರೋಸ್ಸೋ ಸೊನ್ನೆ ಸುತ್ತಿ ಔಟಾದರು. ಬಳಿಕ ಟೆಂಬಾ ಬಾವುವಾ 10 ರನ್ ಗಳಿಸಿದ್ದಾಗ ಶಮಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಇದರಿಂದಾಗಿ ಭಾರತಕ್ಕೂ ಗೆಲುವಿನತ್ತ ಸಾಗುವ ಅವಕಾಶ ಇತ್ತು. ಆದರೆ, ಫೀಲ್ಡಿಂಗ್‌ನಲ್ಲಿ ನಡೆದ ಲೋಪಗಳು ದುಬಾರಿಯಾದವು. ಆ್ಯಡಂ ಮರ್ಕ್ರಮ್ ಮತ್ತು ಡೇವಿಡ್ ಮಿಲ್ಲರ್ ಕ್ರಮವಾಗಿ 52 ಹಾಗೂ 59 ರನ್ ಬಾರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿ ಜಯದ ದಡಕ್ಕೆ ಕೊಂಡೊಯ್ದರು.
ಅಂತಿಮವಾಗಿ ಆಫ್ರಿಕಾ 19.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 137 ರನ್ ಗಳಿಸಿ ಜಯದ ನಗೆ ಬೀರಿತು.
ಗೆಲುವಿನ ಸಂಭ್ರಮದಲ್ಲಿ ದಕ್ಷಿಣ ಆಫ್ರಿಕಾ ತಂಡದ ಆಟಗಾರರು.
Published On - 1:09 pm, Mon, 31 October 22