ಗ್ರೂಪ್-1 ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಹೀನಾಯವಾಗಿ ಸೋಲಿಸಿ ಭರ್ಜರಿ ಶುಭಾರಂಭ ಮಾಡಿದ ನ್ಯೂಜಿಲೆಂಡ್ ತಂಡವು 3 ಪಂದ್ಯಗಳಲ್ಲಿ 2 ಜಯ, 1 ಡ್ರಾ ನೊಂದಿಗೆ ಒಟ್ಟು 5 ಅಂಕ ಕಲೆಹಾಕಿ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಇನ್ನು ಇಂಗ್ಲೆಂಡ್ ತಂಡವು 1 ಜಯ, 1 ಸೋಲು, 1 ಡ್ರಾನೊಂದಿಗೆ ಒಟ್ಟು 3 ಪಾಯಿಂಟ್ನೊಂದಿಗೆ 2ನೇ ಸ್ಥಾನದಲ್ಲಿದೆ. ಹಾಗೆಯೇ ಇಂಗ್ಲೆಂಡ್ ವಿರುದ್ಧದ ಪಂದ್ಯದ ರದ್ದಾದ ಕಾರಣ ಐರ್ಲೆಂಡ್ ತಂಡ ಕೂಡ 3 ಪಂದ್ಯಗಳಲ್ಲಿ 1 ಜಯ, 1 ಸೋಲು, 1 ಡ್ರಾನೊಂದಿಗೆ 3 ಪಾಯಿಂಟ್ 3ನೇ ಸ್ಥಾನದಲ್ಲಿದೆ.