Virat Kohli: ಸ್ಲಿಪ್​ನಲ್ಲಿ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್ ಕಂಡು ಸ್ತಬ್ಧವಾದ ಉಭಯ ತಂಡದ ಆಟಗಾರರು: ವಿಡಿಯೋ ನೋಡಿ

|

Updated on: Jul 28, 2023 | 9:16 AM

IND vs WI 1st ODI: ವೆಸ್ಟ್ ಇಂಡೀಸ್ ತಂಡವನ್ನು ಕೇವಲ 114 ರನ್​ಗೆ ಆಲೌಟ್ ಮಾಡುವಲ್ಲಿ ಭಾರತದ ಫೀಲ್ಡರ್​ಗಳ ಪಾತ್ರ ಕೂಡ ಮುಖ್ಯವಾಗಿತ್ತು. ಮುಖ್ಯವಾಗಿ ವಿರಾಟ್ ಕೊಹ್ಲಿ ಹಿಡಿದ ಒಂದು ಕ್ಯಾಚ್ ವಿಂಡೀಸ್ ಅನ್ನು ಮತ್ತಷ್ಟು ಕುಗ್ಗಿಸಿತು.

Virat Kohli: ಸ್ಲಿಪ್​ನಲ್ಲಿ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್ ಕಂಡು ಸ್ತಬ್ಧವಾದ ಉಭಯ ತಂಡದ ಆಟಗಾರರು: ವಿಡಿಯೋ ನೋಡಿ
Virat Kohli Catch
Follow us on

ಬಾರ್ಬಡೊಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (India vs West Indies) ಭರ್ಜರಿ ಪ್ರದರ್ಶನ ತೋರಿ 5 ವಿಕೆಟ್​ಗಳ ಅಮೋಘ ಜಯ ಸಾಧಿಸಿತು. ಕುಲ್ದೀಪ್ ಯಾದವ್ (Kuldeep Yadav) ಹಾಗೂ ರವೀಂದ್ರ ಜಡೇಜಾ ಸ್ಪಿನ್ ಬಿರುಗಾಳಿಗೆ ತತ್ತರಸಿದ ಕೆರಿಬಿಯನ್ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ಈ ಗೆಲುವಿನ ಮೂಲಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಕೆರಿಬಿಯನ್ ಪಡೆಯನ್ನು ಕೇವಲ 114 ರನ್​ಗೆ ಆಲೌಟ್ ಮಾಡುವಲ್ಲಿ ಭಾರತದ ಫೀಲ್ಡರ್​ಗಳು ಪ್ರಮುಖ ಪಾತ್ರ ವಹಿಸಿದರು. ಮುಖ್ಯವಾಗಿ ವಿರಾಟ್ ಕೊಹ್ಲಿ (Virat Kohli) ಹಿಡಿದ ಒಂದು ಕ್ಯಾಚ್ ವಿಂಡೀಸ್ ಅನ್ನು ಮತ್ತಷ್ಟು ಕುಗ್ಗಿಸಿತು.

ವೆಸ್ಟ್ ಇಂಡೀಸ್ ಅದಾಗಲೇ 96 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭ 18ನೇ ಓವರ್​ನ ರವೀಂದ್ರ ಜಡೇಜಾ ಅವರ 4ನೇ ಎಸೆತದಲ್ಲಿ ಸ್ಪಿನ್ ಜಾದು ಅರಿಯಲು ವಿಫಲವಾದ ರೊಮರಿಯೊ ಶೆಫರ್ಡ್ ಸ್ಲಿಪ್​ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಸೆಕೆಂಡ್ ಸ್ಲಿಪ್​ನಲ್ಲಿ ನಿತ್ತಿದ್ದ ಕೊಹ್ಲಿ ಒಂದೇ ಕೈಯಲ್ಲಿ ಡೈವ್ ಬಿದ್ದು ಅದ್ಭುತವಾಗಿ ಕ್ಯಾಚ್ ಹಿಡಿದರು. ಕೊಹ್ಲಿಯ ಈ ಮನಮೋಹಕ ಕ್ಯಾಚ್ ಕಂಡು ಎಲ್ಲ ಆಟಗಾರರು ಒಂದು ಕ್ಷಣ ದಂಗಾದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ಇದನ್ನೂ ಓದಿ
IND vs WI: 3 ಓವರ್, 4 ವಿಕೆಟ್; ವಿಂಡೀಸ್ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಕುಲ್ದೀಪ್ ಯಾದವ್
IND vs WI 1st ODI: ಅಮೋಘ ಗೆಲುವಿನ ಮೂಲಕ ವಿಂಡೀಸ್ ವಿರುದ್ಧ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
IND vs WI: 16 ಇನ್ನಿಂಗ್ಸ್‌ನಲ್ಲಿ ಫ್ಲಾಪ್ ಶೋ; ಟಿ20 ಸೂಪರ್ ಸ್ಟಾರ್ ಏಕದಿನದಲ್ಲಿ ಫೇಲ್..!
IND vs WI 1st ODI: ಭಾರತದ ಸ್ಪಿನ್ ಬಿರುಗಾಳಿಗೆ ವೆಸ್ಟ್ ಇಂಡೀಸ್ ತತ್ತರ: ಇಂಡೋ-ವಿಂಡೀಸ್ ಮೊದಲ ಏಕದಿನದ ರೋಚಕ ಫೋಟೋ ನೋಡಿ

 

IND vs WI: ಕೈಕೊಟ್ಟ ರೋಹಿತ್- ದ್ರಾವಿಡ್ ಪ್ಲಾನ್; ಬಯಲಾಯ್ತು ಯುವ ಟೀಂ ಇಂಡಿಯಾದ ಬಂಡವಾಳ

ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಲು ವೆಸ್ಟ್ ಇಂಡೀಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ನಾಯಕ ಶಾಯ್ ಹೋಪ್ ಕೆಲ ಹೊತ್ತು ಕ್ರೀಸ್​ನಲ್ಲಿ ಇದ್ದಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ನೆರವಾಗಲಿಲ್ಲ. ಹೋಪ್ 45 ಎಸೆತಗಳಲ್ಲಿ 43 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ವಿಂಡೀಸ್ 23 ಓವರ್​ಗಳಲ್ಲಿ ಕೇವಲ 114 ರನ್​ಗಳಿಗೆ ಆಲೌಟ್ ಆಯಿತು. ಭಾರತ ಪರ ಕುಲ್ದೀಪ 4, ಜಡೇಜಾ 3, ಹಾರ್ದಿಕ, ಮುಖೇಶ್ ಹಾಗೂ ಥಾಕೂರ್ ತಲಾ 1 ವಿಕೆಟ್ ಪಡೆದರು.

ಸುಲಭ ಟಾರ್ಗೆಟ್ ಬೆನ್ನಟ್ಟಲು ಬಂದ ಭಾರತ ತನ್ನ ಬ್ಯಾಟಿಂಗ್ ಆರ್ಡರ್​ನಲ್ಲಿ ಮಹತ್ವದ ಬದಲಾವಣೆ ಮಾಡಿತು. ಓಪನರ್ ಆಗಿ ರೋಹಿತ್ ಶರ್ಮಾ ಬಾರದೆ ಇಶಾನ್ ಕಿಶನ್ ಹಾಗೂ ಶುಭ್​ಮನ್ ಗಿಲ್ ಕಣಕ್ಕಿಳಿದರು. ಕಿಶನ್ ಸ್ಫೋಟಕ ಬ್ಯಾಟಿಂಗ್ ನಡೆದ 46 ಎಸೆತಗಳಲ್ಲಿ 52 ರನ್ ಸಿಡಿಸಿದರೆ, ಗಿಲ್ 7 ರನ್​ಗೆ ಔಟಾದರು. ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 19 ರನ್​ಗೆ ಸುಸ್ತಾದರು. ನಂತರ ಬಂದ ಹಾರ್ದಿಕ್ ಪಾಂಡ್ಯ 5 ರನ್ ಗಳಿಸಿ ರನೌಟ್​ಗೆ ಬಲಿಯಾದರು.

ಶಾರ್ದೂಲ್ ಥಾಕೂರ್ 1 ರನ್​ಗೆ ಔಟಾದರು. ಬಳಿಕ 7ನೇ ಕ್ರಮಾಂಕದಲ್ಲಿ ಬಂದ ರೋಹಿತ್ ಶರ್ಮಾ (ಅಜೇಯ 12), ರವೀಂದ್ರ ಜಡೇಜಾ (ಅಜೇಯ 16) 22.5 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಗೆಲುವು ಸಾಧಿಸುವಂತೆ ಮಾಡಿದರು. ವೆಸ್ಟ್ ಇಂಡೀಸ್ ತಂಡದ ಪರ ಗುಡಕೇಶ್ ಮೋಟಿ 2 ವಿಕೆಟ್, ಜೇಡನ್ ಸೀಲ್ಸ್ ಹಾಗೂ ಯಾನಿಕ್ ಕ್ಯರಿಯಾ ತಲಾ 1 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ