IND vs WI: ಕೈಕೊಟ್ಟ ರೋಹಿತ್- ದ್ರಾವಿಡ್ ಪ್ಲಾನ್; ಬಯಲಾಯ್ತು ಯುವ ಟೀಂ ಇಂಡಿಯಾದ ಬಂಡವಾಳ

IND vs WI: ಒಂದೇ ಒಂದು ಪಂದ್ಯದಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಟೀಂ ಇಂಡಿಯಾ ಎಷ್ಟು ಅವಲಂಬಿತವಾಗಿದೆ ಎಂಬುದು ಕೂಡ ಸಾಭೀತಾಗಿದೆ.

IND vs WI: ಕೈಕೊಟ್ಟ ರೋಹಿತ್- ದ್ರಾವಿಡ್ ಪ್ಲಾನ್; ಬಯಲಾಯ್ತು ಯುವ ಟೀಂ ಇಂಡಿಯಾದ ಬಂಡವಾಳ
ರೋಹಿತ್ ಶರ್ಮಾ
Follow us
ಪೃಥ್ವಿಶಂಕರ
|

Updated on:Jul 28, 2023 | 7:22 AM

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದು ಬೀಗಿದ್ದ ಟೀಂ ಇಂಡಿಯಾ (India vs West Indies) ಇದೀಗ ಏಕದಿನ ಸರಣಿಯಲ್ಲೂ ಶುಭಾರಂಭ ಮಾಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಕೇವಲ 115 ರನ್​ಗಳಿಗೆ ಆಲೌಟ್ ಮಾಡಿದ್ದ ರೋಹಿತ್ (Rohit Sharma) ಪಡೆ, 5 ವಿಕೆಟ್ ಕಳೆದುಕೊಂಡು 23ನೇ ಓವರ್​ನಲ್ಲೇ ಗೆಲುವಿನ ದಡ ಮುಟ್ಟಿತ್ತು. ಇದರೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಆದರೆ ವಿಂಡೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಲಾಯಿತ್ತಾದರೂ ಗುರಿ ಬೆನ್ನಟ್ಟುವ ವೇಳೆ ಟೀಂ ಇಂಡಿಯಾ (Team India) ಐದು ವಿಕೆಟ್ ಕಳೆದುಕೊಂಡಿತು. ಅಲ್ಪ ಗುರಿಯ ಮುಂದೆಯೂ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಇಷ್ಟು ಹೀನಾಯ ಪ್ರದರ್ಶನ ನೀಡಿದ್ದು, ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ನಿದ್ದೆಗೆಡಿಸಿದೆ. ಅಲ್ಲದೆ ಈ ಒಂದೇ ಒಂದು ಪಂದ್ಯದಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli) ಮೇಲೆ ಟೀಂ ಇಂಡಿಯಾ ಎಷ್ಟು ಅವಲಂಬಿತವಾಗಿದೆ ಎಂಬುದು ಕೂಡ ಸಾಭೀತಾಗಿದೆ.

ವಾಸ್ತವವಾಗಿ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನಂತರ ಮಾತನಾಡಿದ್ದ ನಾಯಕ ರೋಹಿತ್ ಶರ್ಮಾ ಈ ಸರಣಿಯಲ್ಲಿ ಹೊಸದನ್ನು ಪ್ರಯತ್ನಿಸುತ್ತಲೇ ಇರುವುದಾಗಿ ಹೇಳಿದ್ದರು. ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದ ರೋಹಿತ್, ವಿಶ್ವಕಪ್‌ಗೂ ಮುನ್ನ ಆಟಗಾರರಿಗೆ ಅವಕಾಶ ನೀಡುವ ಮೂಲಕ ವಿಶ್ವಕಪ್‌ ವೇಳೆಗೆ ಎಲ್ಲರನ್ನು ಲಯಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ ಎಂದಿದ್ದರು. ಆದರೆ ಮೊದಲ ಏಕದಿನ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ಆರ್ಡರ್​ನಲ್ಲಿ ಸಾಕಷ್ಟು ಬದಲಾವಣೆ ಮಾಡಿದ ರೋಹಿತ್ ಹಾಗೂ ದ್ರಾವಿಡ್​ಗೆ ಮೊದಲ ಪಂದ್ಯದಲ್ಲೇ ಯುವ ಆಟಗಾರರ ಬಂಡವಾಳ ಹೊಸ ತಲೆನೋವು ತಂದೊಡ್ಡಿದೆ.

IND vs WI: ಏಕದಿನ ಸರಣಿಯಲ್ಲಿ ಈ 10 ಆಟಗಾರರ ಮೇಲೆ ಎಲ್ಲರ ಕಣ್ಣು

ಅವಕಾಶ ಕೈಚೆಲ್ಲಿದ ಸೂರ್ಯ

ರೋಹಿತ್- ದ್ರಾವಿಡ್ ಹಾಕಿಕೊಂಡಿದ್ದ ಯೋಜನೆಯಲ್ಲಿ ಬೌಲಿಂಗ್ ವಿಭಾಗ ಮಾತ್ರ ಮೇಲುಗೈ ಸಾಧಿಸಿತು. ತಂಡದ ಬೌಲಿಂಗ್ ವಿಭಾಗ ಅನಾನುಭವಿಗಳಿಂದ ಕೂಡಿದ್ದರೂ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 114 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದರಿಂದ ಖುಷಿಯಾದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಕ್ರಮಾಂಕವನ್ನು ಸಂಪೂರ್ಣವಾಗಿ ಬದಲಾಯಿಸಿದರು. ಹೀಗಾಗಿ ರೋಹಿತ್ ಬದಲಿಗೆ ಇಶಾನ್ ಕಿಶನ್ ಅವರನ್ನು ಶುಭ್​ಮನ್ ಗಿಲ್ ಅವರೊಂದಿಗೆ ಓಪನಿಂಗ್ ಮಾಡಲು ಕಳುಹಿಸಲಾಯಿತು. ಮೂರನೇ ಕ್ರಮಾಂಕದಲ್ಲೂ ಬದಲಾವಣೆ ಮಾಡಿದ ಈ ಜೋಡಿ ವಿರಾಟ್ ಕೊಹ್ಲಿ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಕಣಕ್ಕಿಳಿಸಿತು.

ಆದರೆ ಈ ಎರಡೂ ಬದಲಾವಣೆಗಳಲ್ಲಿ ಇಶಾನ್ ಮಾತ್ರ ತನ್ನ ಸಾಮರ್ಥ್ಯ ಸಾಬೀತುಪಡಿಸಿ 52 ರನ್ ಗಳಿಸಿ ಔಟಾದರು. ಇನ್ನು ಏಕದಿನ ಮಾದರಿಯಲ್ಲಿ ಮತ್ತೊಮ್ಮೆ ಕೈಕೊಟ್ಟ ಸೂರ್ಯಕುಮಾರ್ ಯಾದವ್, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಾಗದೆ ಕೇವಲ 19 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇದು ಸಾಕಾಗದೇ ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಕೂಡ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಲಿಲ್ಲ. ಜಡೇಜಾ (ಔಟಾಗದೆ 16) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಏನನ್ನೂ ಮಾಡಲಾಗಲಿಲ್ಲ. ಹಾರ್ದಿಕ್ ಕೇವಲ 7 ಎಸೆತಗಳನ್ನು ಎದುರಿಸಿ ಸುಸ್ತಾದರೆ, ಶಾರ್ದೂಲ್ ಕೇವಲ 4 ಎಸೆತಗಳಳಿಗೆ ಬ್ಯಾಟ್ ಎತ್ತಿಟ್ಟರು.

ಪ್ರಯತ್ನ ಫಲಿಸಲಿಲ್ಲ

ಅಂದರೆ, ಒಟ್ಟಾರೆಯಾಗಿ, ತಂಡವು ಪ್ರಯೋಗಿಸಿದ ನಿರೀಕ್ಷೆ ಮತ್ತು ಆಲೋಚನೆ ಖಂಡಿತವಾಗಿಯೂ ಸರಿಯಾಗಿದ್ದರೂ ಆ ನಿರೀಕ್ಷೆಗೆ ತಕ್ಕಂತೆ ಫಲಿತಾಂಶಗಳನ್ನು ನೀಡಲು ಸಾಧ್ಯವಾಗಲಿಲ್ಲ. ಕೇವಲ 115 ರನ್​ಗಳ ಗುರಿ ಮುಂದೆಯೂ ಭಾರತದ ಬ್ಯಾಟ್ಸ್​ಮನ್​ಗಳು ವೆಸ್ಟ್ ಇಂಡೀಸ್ ಸ್ಪಿನ್ನರ್​ಗಳ ಮುಂದೆ ಮಂಕಾದರು. ಹೀಗಾಗಿ 100 ರನ್ ಆಗುವ ಮೊದಲೇ ತಂಡದ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿಕೊಂಡಿದ್ದರು. ಅಂತಿಮವಾಗಿ 7ನೇ ಕ್ರಮಾಂಕದಲ್ಲಿ ಬಂದ ರೋಹಿತ್ ಶರ್ಮಾ ಪಂದ್ಯ ಮುಗಿಸಬೇಕಾಯಿತು.

ಪಂದ್ಯದ ನಂತರ ಮಾತನಾಡಿದ ನಾಯಕ ರೋಹಿತ್, ಏಕದಿನ ಮಾದರಿಗೆ ಹೊಸದಾಗಿ ಬಂದಿರುವ ಆಟಗಾರರಿಗೆ ನಾವು ಆಟದ ಸಮಯವನ್ನು ಹೆಚ್ಚು ನೀಡಲು ಬಯಸಿದ್ದೇವು. ಸಾಧ್ಯವಾದಾಗಲೆಲ್ಲಾ ನಾವು ಆ ವಿಷಯಗಳನ್ನು ಪ್ರಯತ್ನಿಸುತ್ತಲೇ ಇರುತ್ತೇವೆ. ಅದಕ್ಕೆ ಪೂರಕವಾಗಿ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 115 ರನ್​ಗಳಿಗೆ ಸೀಮಿತಗೊಳಿಸಿದ್ದರಿಂದ ಈ ಹುಡುಗರನ್ನು ಪ್ರಯತ್ನಿಸಬಹುದು ಮತ್ತು ಅವರಿಗೆ ಅವಕಾಶ ನೀಡಬಹುದು ಎಂದು ನಮಗೆ ತಿಳಿದಿತ್ತು. ಹೀಗಾಗಿ ಬ್ಯಾಟಿಂಗ್ ಕ್ರಮಾಂಕ ಬದಲಿಸಿದೇವು.  ಅವರಿಗೆ ಈ ರೀತಿಯ ಹೆಚ್ಚಿನ ಅವಕಾಶಗಳು ಮುಂದೆ ಸಿಗುತ್ತವೆ ಎಂದು ನಾನು ಭಾವಿಸುವುದಿಲ್ಲ ಎಂದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:17 am, Fri, 28 July 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್