RCB vs CSK IPL 2021: ಅನುಮಾನ ಹುಟ್ಟುಹಾಕಿದ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್: ಅಂಪೈರ್ ಮಾಡಿದ್ದೇನು ನೋಡಿ

Virat Kohli Outstanding Catch vs CSK: ರುತುರಾಜ್ ಗಾಯಕ್ವಾಡ್ ಚೆಂಡನ್ನು ಸರಿಯಾಗಿ ಗ್ರಹಿಸದ ಕಾರಣ ಔಟ್ ಸೈಡ್ ಎಡ್ಜ್ ಆಗಿ ಚೆಂಡು ಗಾಳಿಯಲ್ಲಿ ಹೋಯಿತು. ಫೀಲ್ಡ್​ನಲ್ಲಿದ್ದ ವಿರಾಟ್ ಕೊಹ್ಲಿ ಸೂಪರ್ ಮ್ಯಾನ್​ನಂತೆ ಡೈವ್ ಬಿದ್ದು ಅದ್ಭುತ ಕ್ಯಾಚ್ ಹಿಡಿದರು.

RCB vs CSK IPL 2021: ಅನುಮಾನ ಹುಟ್ಟುಹಾಕಿದ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್: ಅಂಪೈರ್ ಮಾಡಿದ್ದೇನು ನೋಡಿ
Virat Kohli Catch
Updated By: Vinay Bhat

Updated on: Sep 25, 2021 | 10:38 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವೆ ಶುಕ್ರವಾರ ನಡೆದ ಐಪಿಎಲ್ 2021ರ (IPL 2021) 35ನೇ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಆರ್​ಸಿಬಿ ಓಪನರ್​ಗಳಾದ ವಿರಾಟ್ ಕೊಹ್ಲಿ (Virat Kohli) ಹಾಗೂ ದೇವದತ್ ಪಡಿಕ್ಕಲ್ (Devdutt Padikkal) ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದರೆ, ತಂಡದ ಮೊತ್ತ 200ರ ಗಡಿ ದಾಟಲಿದೆ ಎಂದೇ ನಂಬಲಾಗಿತ್ತು. ಇತ್ತ ಸಿಎಸ್​ಕೆ ಕೊಹ್ಲಿ-ಪಡಿಕ್ಕಲ್ ವಿಕೆಟ್ ಕೀಳಲು ನಾನಾ ಪ್ರಯೋಗ ನಡೆಸಿದರೂ ಆರಂಭದಲ್ಲಿ ಅದು ಯಶಸ್ವಿಯಾಗಲಿಲ್ಲ. ಬಳಿಕ ಎಂ. ಎಸ್ ಧೋನಿ (MS Dhoni) ತಮ್ಮ ಮಾಸ್ಟರ್ ಮೈಂಡ್ ಉಪಯೋಗಿಸಿ ರಣತಂತ್ರ ಹೆಣೆದು ಆರ್​ಸಿಬಿಯನ್ನು (RCB) ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇತ್ತ ಚೆನ್ನೈ (CSK) ಕೂಡ ಬೊಂಬಾಟ್ ಆರಂಭ ಪಡೆದುಕೊಂಡಿತು. ಈ ಓಪನಿಂಗ್ ಜೋಡಿಯ ಆಟಕ್ಕೆ ಬ್ರೇಕ್ ಹಾಕಿದ್ದು ವಿರಾಟ್ ಕೊಹ್ಲಿ ಹಿಡಿದ ಆ ಒಂದು ಅದ್ಭುತ ಕ್ಯಾಚ್.

ಹೌದು, ಆರ್​ಸಿಬಿ ನೀಡಿದ್ದ 157 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಸಿಎಸ್​ಕೆ ಭರ್ಜರಿ ಆರಂಭ ಪಡೆದುಕೊಂಡಿತು. ಪವರ್ ಪ್ಲೇ ನಲ್ಲಿ ರುತುರಾಜ್ ಗಾಯಕ್ವಾಡ್ ಹಾಗೂ ಫಾಪ್ ಡುಪ್ಲೆಸಿಸ್ ಅತ್ಯುತ್ತಮ ರನ್ ಕಲೆಹಾಕಿದರು. ಒಂದು ಬ್ರೇಕ್​ಗಾಗಿ ಕಾಯುತ್ತಿದ್ದ ಆರ್​ಸಿಬಿಗೆ ಕೊಂಚ ನಿರಾಳವಾಗಿದ್ದು 9ನೇ ಓವರ್​ನಲ್ಲಿ. ಯುಜ್ವೇಂದ್ರ ಚಹಾಲ್ ಅವರ ಎರಡನೇ ಓವರ್​ನ ಎರಡನೇ ಎಸೆತದಲ್ಲಿ ಆರ್​ಸಿಬಿ ಚೆನ್ನೈಯ ಮೊದಲ ವಿಕೆಟ್ ಕಿತ್ತುಕೊಂಡಿತು. ಆದರೆ, ಅದು ಸುಲಭದ್ದಾಗಿರಲಿಲ್ಲ.

 

ಗಾಯಕ್ವಾಡ್ ಚೆಂಡನ್ನು ಸರಿಯಾಗಿ ಗ್ರಹಿಸದ ಕಾರಣ ಔಟ್ ಸೈಡ್ ಎಡ್ಜ್ ಆಗಿ ಚೆಂಡು ಗಾಳಿಯಲ್ಲಿ ಹೋಯಿತು. ಇದೇ ಸಂದರ್ಭ ಫೀಲ್ಡ್​ನಲ್ಲಿದ್ದ ಕೊಹ್ಲಿ ಸೂಪರ್ ಮ್ಯಾನ್​ನಂತೆ ಡೈವ್ ಬಿದ್ದು ಅದ್ಭುತ ಕ್ಯಾಚ್ ಹಿಡಿದರು. ಆದರೆ, ಅಂಪೈರ್​ಗೆ ಈ ಕ್ಯಾಚ್ ಅನುಮಾನ ಹುಟ್ಟುಹಾಕಿತು. ಚೆಂಡು ನೆಲಕ್ಕೆ ತಾಗಿರಬಹುದು ಎಂದು ಥರ್ಡ್ ಅಂಪೈರ್ ಮೊರೆ ಹೋದರು. ಇದರಿಂದ ಕೊಹ್ಲಿ ಕೂಡ ಒಂದು ಕ್ಷಣ ನಿರಾಸೆಗೊಂಡರು. ಬಳಿಕ ಥರ್ಡ್ ಅಂಪೈರ್ ಪರೀಕ್ಷಿಸಿ ಔಟ್ ಎಂಬ ತೀರ್ಮಾನ ತಿಳಿಸಿದರು.

 

26 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಬಾರಿಸಿದ್ದ ಗಾಯಕ್ವಾಡ್ 38 ರನ್​ಗೆ ಪೆವಿಲಿಯನ್​ ಹಾದಿ ಹಿಡಿದರು. ಆದರೆ, ಇವರು ಔಟ್ ಆಗಿದ್ದು ಸಿಎಸ್​ಕೆ ತಂಡಕ್ಕೆ ಯಾವುದೇ ಹಿನ್ನಡೆಯಾಗಲಿಲ್ಲ. ಆರ್​ಸಿಬಿ ತಂಡಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಫಾಪ್ ಡುಪ್ಲೆಸಿಸ್ 31 ಹಾಗೂ ಅಂಬಟಿ ರಾಯುಡು 32 ರನ್​ ಗಳಿಸಿ ತಂಡಕ್ಕೆ 18.1 ಓವರ್​ನಲ್ಲೇ ಗೆಲುವು ತಂದುಕೊಟ್ಟರು.

ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 9 ಪಂದ್ಯಗಳನ್ನು ಆಡಿರುವ ಧೋನಿ ಪಡೆ ಏಳರಲ್ಲಿ ಗೆದ್ದರೆ, ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. ಹೀಗಾಗಿ 14 ಅಂಕ ಸಂಪಾದಿಸಿದೆ. ಇನ್ನೊಂದು ಪಂದ್ಯ ಗೆದ್ದರೆ ಪ್ಲೇ ಆಫ್​ಗೆ ಲಗ್ಗೆ ಇಡಲಿದೆ. ಇತ್ತ ಆರ್​ಸಿಬಿ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿದ್ದು ಈ ಪೈಕಿ ಐದರಲ್ಲಿ ಗೆಲುವು ಕಂಡರೆ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಕೊಹ್ಲಿ ತಂಡಕ್ಕೆ ಬಾಕಿ ಇರುವುದು ಕೇವಲ ಐದು ಪಂದ್ಯಗಳು ಮಾತ್ರ. ಪ್ಲೇ ಆಫ್​ಗೇರಲು ಮೂರು ಪಂದ್ಯ ಗೆಲ್ಲಬೇಕಿದೆ.

IPL 2021 Playoffs: ಆರ್​ಸಿಬಿಗೆ ಬಾಕಿ ಇರುವುದು ಕೇವಲ 5 ಪಂದ್ಯ: ಪ್ಲೇ ಆಫ್​ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?

Virat Kohli: ತಂಡದ ಸೋಲಿಗೆ ವಿರಾಟ್ ಕೊಹ್ಲಿ ನೇರವಾಗಿ ದೂರಿದ್ದು ಯಾರನ್ನ ಗೊತ್ತಾ?

(Virat Kohli took a stunning diving catch to dismiss Ruturaj Gaikwad in RCB vs CSK IPL 2021 Match)