AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ತಂಡದ ಸೋಲಿಗೆ ವಿರಾಟ್ ಕೊಹ್ಲಿ ನೇರವಾಗಿ ದೂರಿದ್ದು ಯಾರನ್ನ ಗೊತ್ತಾ?

IPL 2021, RCB vs CSK: ಆರ್​ಸಿಬಿ ಹಾಗೂ ಸಿಎಸ್​ಕೆ ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ನಮ್ಮ ತಂಡ ಸೋಲಲು ಪ್ರಮುಖ ಕಾರಣ ಬೌಲರ್​ಗಳೇ ಎಂದು ನೇರವಾಗಿ ಹೇಳಿದ್ದಾರೆ.

Virat Kohli: ತಂಡದ ಸೋಲಿಗೆ ವಿರಾಟ್ ಕೊಹ್ಲಿ ನೇರವಾಗಿ ದೂರಿದ್ದು ಯಾರನ್ನ ಗೊತ್ತಾ?
Virat Kohli RCB
TV9 Web
| Updated By: Vinay Bhat|

Updated on: Sep 25, 2021 | 8:39 AM

Share

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಎರಡನೇ ಚರಣವನ್ನು ಕೆಟ್ಟದಾಗಿ ಆರಂಭಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಸದ್ಯ ಎರಡನೇ ಪಂದ್ಯವನ್ನು ಸೋತಿದೆ. ಆರ್​ಸಿಬಿ-ಸಿಎಸ್​ಕೆ (RCB vs CSK) ನಡುವಣ ಕಾಳಗದಲ್ಲಿ ಎಂ. ಎಸ್ ಧೋನಿ (MS Dhoni) ಪಡೆ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ವಿರಾಟ್ ಕೊಹ್ಲಿ (Virat Kohli) ಪಡೆ ಆರಂಭದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರೂ ನಂತರದಲ್ಲಿ ಮತ್ತದೆ ಹಿಂದಿನ ತಪ್ಪನ್ನು ಮುಂದುವರೆಸಿತು. ಬೌಲಿಂಗ್ ವಿಭಾಗದಲ್ಲೂ ಯಾವೊಬ್ಬ ಬೌಲರ್ ಎದುರಾಳಿಗೆ ಮಾರಕವಾಗಿ ಗೋಚರಿಸಲೇಯಿಲ್ಲ. ಈ ಮೂಲಕ ಟೂರ್ನಿಯಲ್ಲಿ ಬೆಂಗಳೂರು (Bengaluru) ನಾಲ್ಕನೇ ಸೋಲು ಕಂಡಿದೆ. ಸದ್ಯ 10 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಹಾದಿ ಕಠಿಣವಾಗುವತ್ತ ಸಾಗುತ್ತಿದೆ. ಪಂದ್ಯ ಮುಗಿದ ಬಳಿಕ ತಂಡದ ಸೋಲಿನ ಬಗ್ಗೆ ಮಾತನಾಡಿರುವ ನಾಯಕ ವಿರಾಟ್ ಕೊಹ್ಲಿ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ನಮ್ಮ ತಂಡ ಸೋಲಲು ಪ್ರಮುಖ ಕಾರಣ ಬೌಲರ್​ಗಳೇ ಎಂದು ನೇರವಾಗಿ ಹೇಳಿದ್ದಾರೆ. “ನಮ್ಮ ತಂಡದ ಬೌಲರ್​ಗಳು ಎದುರಾಳಿ ಬ್ಯಾಟರ್ಸ್​ಗೆ ಅನಗತ್ಯವಾಗಿ ಅನೇಕ ಬೌಂಡರಿಗಳನ್ನ ಹೊಡೆಯಲು ದಾರಿಮಾಡಿಕೊಟ್ಟರು. ಅದರಲ್ಲೂ ಪವರ್ ಪ್ಲೇನಲ್ಲಿ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಪ್ರದರ್ಶನ ಬಂದಿಲ್ಲ. ಪಿಚ್​ ತುಂಬಾ ಚೆನ್ನಾಗಿ ಬೌಲರ್​ಗಳಿಗೆ ಸಹಕರಿಸುತ್ತಿತ್ತು. ಆದರೆ ಅದನ್ನ ನಮ್ಮ ಬೌಲರ್​ಗಳು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ” ಎಂದು ಕೊಹ್ಲಿ ಹೇಳಿದ್ದಾರೆ.

“ಎರಡನೇ ಇನ್ನಿಂಗ್ಸ್ ಆರಂಭವಾಗುವುದಕ್ಕೂ ಮುನ್ನ ನಾವು ಎದುರಾಳಿ ಬ್ಯಾಟುಗಾರರಿಗೆ ರನ್ ಗಳಿಸಲು ಸಾಧ್ಯವಾಗದಂತೆ ಎಲ್ಲಿ ಬಾಲ್ ಎಸೆಯಬೇಕೆಂದು ಮಾತನಾಡಿಕೊಂಡಿದ್ದೆವು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ನಾವು ಮೊದಲ ವಿಕೆಟ್​ಗೆ 111 ರನ್ ಜೊತೆಯಾಟ ಆಡಿದೆವು. ಆದರೆ, ಕೊನೇಯದಾಗಿ ಗಳಿಸಿದ್ದು ಕೇವಲ 156 ರನ್ ಮಾತ್ರ. ನಾವು ಇನ್ನೂ 15-20 ರನ್​ಗಳನ್ನಾದರೂ ಗಳಿಸಬೇಕಿತ್ತು” ಎಂಬುದು ಕೊಹ್ಲಿ ಮಾತು.

ನಿನ್ನೆಯ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಸ್ಫೋಟಕ ಆರಂಭ ಪಡೆದುಕೊಂಡಿತು. ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಚೆನ್ನೈ ಬೌಲರ್​ಗಳ ಬೆವರಿಳಿಸಿದರು. ಶತಕದ ಜೊತೆಯಾಟ ಆಡಿದ ಈ ಜೋಡಿ ಎದುರಾಳಿಗೆ ದೊಡ್ಡ ಟಾರ್ಗೆಟ್ ನೀಡುವ ಪ್ಲಾನ್​ನಲ್ಲಿತ್ತು. 13.2 ಓವರ್​ಗೆ 111 ರನ್ ಗಳಿಸಿರುವಾಗ ಆರ್​ಸಿಬಿ ಮೊದಲ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 41 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಬಾರಿಸಿ 53 ರನ್​ಗೆ ಔಟ್ ಆದರು.

ನಂತರ ಶುರುವಾಗಿದ್ದು ಆರ್​ಸಿಬಿಯ ಮತ್ತದೆ ಕಳಪೆ ಆಟ. ಎಬಿ ಡಿವಿಲಿಯರ್ಸ್​ ಸಿಕ್ಸ್ ಸಿಡಿಸಿ ನಿರ್ಗಮಿಸಿದರೆ, ದೇವದತ್ ಪಡಿಕ್ಕಲ್ 50 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಿಡಿಸಿ 70 ರನ್​ಗೆ ವಿಕೆಟ್ ಒಪ್ಪಿಸಿದರು. ಗ್ಲೆನ್ ಮ್ಯಾಕ್ಸ್​ವೆಲ್ ಆಟ 11 ರನ್​ಗೆ ಅಂತ್ಯವಾಯಿತು. ಅಂತಿಮವಾಗಿ ಆರ್​ಸಿಬಿ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತಷ್ಟೆ.

ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ರುತುರಾಜ್ ಗಾಯಕ್ವಾಡ್ ಅವರ 38, ಫಾಪ್ ಡುಪ್ಲೆಸಿಸ್ ಅವರ 31 ಹಾಗೂ ಅಂಬಟಿ ರಾಯುಡು ಅವರ 32 ರನ್​ಗಳ ನೆರವಿನಿಂದ 18.1 ಓವರ್​ನಲ್ಲೇ ಗೆಲುವಿನ ನಗೆ ಬೀರಿತು.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹೈದರಾಬಾದ್-ಪಂಜಾಬ್: ಸೋತರೆ ಬಹುತೇಕ ಟೂರ್ನಿಯಿಂದ ಔಟ್

IPL 2021, DC vs RR: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಮೊದಲ ಪಂದ್ಯದಲ್ಲಿ ಡೆಲ್ಲಿ-ರಾಜಸ್ಥಾನ್ ಮುಖಾಮುಖಿ

(Virat Kohli explained where RCB team lacked against MS Dhoni CSK in IPL 2021)

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?