AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021, DC vs RR: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಮೊದಲ ಪಂದ್ಯದಲ್ಲಿ ಡೆಲ್ಲಿ-ರಾಜಸ್ಥಾನ್ ಮುಖಾಮುಖಿ

Delhi Capitals vs Rajasthan Royal: ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ 23 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಈ ಪೈಕಿ ರಾಜಸ್ಥಾನ್ ರಾಯಲ್ಸ್ 12 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಲ್ಲಿ ಗೆದ್ದ ದಾಖಲೆ ಇದೆ.

IPL 2021, DC vs RR: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಮೊದಲ ಪಂದ್ಯದಲ್ಲಿ ಡೆಲ್ಲಿ-ರಾಜಸ್ಥಾನ್ ಮುಖಾಮುಖಿ
DC vs RR
TV9 Web
| Updated By: Vinay Bhat|

Updated on: Sep 25, 2021 | 7:12 AM

Share

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿಂದು (IPL 2021) ಎರಡು ಪಂದ್ಯಗಳು ನಡೆಯಲಿವೆ. ಅಬುಧಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ್ ರಾಯಲ್ಸ್ (DC vs RR) ತಂಡ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ. ಡೆಲ್ಲಿ ತಂಡ ಈ ಪಂದ್ಯ ಗೆದ್ದರೆ ಬಹುತೇಕ ಪ್ಲೇ ಆಫ್​ಗೆ ಲಗ್ಗೆಯಿಡಲಿದೆ. ಇತ್ತ ಆರ್​ಆರ್ ಪ್ಲೇ ಆಫ್ ಹಾದಿ ಇನ್ನೂ ಸುಗಮವಾಗಿಲ್ಲ. ಹೀಗಾಗಿ ಇಂದಿನ ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿದೆ.

ಡೆಲ್ಲಿ ಆಡಿದ ಒಟ್ಟು 9 ಪಂದ್ಯಗಳಲ್ಲಿ ಏಳರಲ್ಲಿ ಜಯ ಸಾಧಿಸಿದ್ದು, ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. ಹೀಗಾಗಿ 14 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ್ ತಂಡ ಆಡಿದ ಎಂಟು ಪಂದ್ಯಗಳಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಕಂಡಿದೆ. 8 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ.

ಮೊದಲ ಚರಣದ ಪಂದ್ಯದಲ್ಲಿ ಪರದಾಡುತ್ತಿದ್ದ ರಾಜಸ್ಥಾನ ತಂಡ ಎರಡನೇ ಭಾಗದಲ್ಲಿ ಭರ್ಜರಿ ಶುಭಾರಂಭ ಕಂಡಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್​ಆರ್​ ರೋಚಕ ಜಯ ಸಾಧಿಸಿತ್ತು. ಯಶಸ್ವಿ ಜೈಸ್ವಾಲ್, ಮಹಿಪಾಲ್ ಲೊಮ್ರರ್‌ರಂಥ ಯುವ ಬ್ಯಾಟರ್​ಗಳು ಸ್ಫೋಟಿಸುತ್ತಿದ್ದರೆ, ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ನಲ್ಲಿ ವಿಫಲರಾಗುತ್ತಿದ್ದಾರೆ. ವೇಗದ ಬೌಲರ್‌ಗಳ ಪೈಕಿ ಕಾರ್ತಿಕ್ ತ್ಯಾಗಿ, ಮುಸ್ತಾಫಿಜುರ್ ಹಿಂದಿನ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ್ದರು.

ಇತ್ತ ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ಎದುರು ಸುಲಭ ಜಯ ದಾಖಲಿಸಿರುವ ಡೆಲ್ಲಿ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ ಹಾಗೂ ಪೃಥ್ವಿ ಷಾ ಅವರೇ ಗೆಲುವನ್ನು ಖಚಿತ ಪಡಿಸುತ್ತಿದ್ದಾರೆ. ನಾಯಕ ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಸ್ಟೀವನ್ ಸ್ಮಿತ್, ಶಿಮ್ರೋನ್ ಹೆಟ್ಮೆಯರ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ವೇಗಿ ಆವೇಶ್ ಖಾನ್, ದ.ಆಫ್ರಿಕಾದ ವೇಗಿ ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ.

ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ 23 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಈ ಪೈಕಿ ರಾಜಸ್ಥಾನ್ ರಾಯಲ್ಸ್ 12 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಲ್ಲಿ ಗೆದ್ದ ದಾಖಲೆ ಇದೆ. ಈ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.

RCB vs CSK, IPL 2021: ಕೊಹ್ಲಿಗೆ ಕೈಕೊಟ್ಟ ಬ್ಯಾಟಿಂಗ್ ವಿಭಾಗ; ಆರ್​ಸಿಬಿ ವಿರುದ್ಧ ಸುಲಭವಾಗಿ ಗೆದ್ದ ಚೆನ್ನೈ

IPL 2021: ಧೋನಿಯ ರನ್ ಬರ ಇಂದು ಕೊನೆಗೊಳುತ್ತಾ? ಆರ್‌ಸಿಬಿ ವಿರುದ್ಧ ಮಹೀ ಅಂಕಿಅಂಶಗಳು ಹೌದು ಎನ್ನುತ್ತಿವೆ!

(IPL 2021, DC vs RR preview Head-to-head record Delhi Capitals would take on former champion Rajasthan Royals)