
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಫಾರ್ಮ್ನ ಉತ್ತುಂಗದಲ್ಲಿದ್ದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ( Virat Kohli) ಇದೀಗ ದೇಶಿ ಅಂಗಳಕ್ಕೆ ಬಹಳ ವರ್ಷಗಳ ಬಳಿಕ ಕಾಲಿಡಲು ಸಜ್ಜಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಆಡಲು ಕಿಂಗ್ ಕೊಹ್ಲಿ ಸಜ್ಜಾಗಿದ್ದಾರೆ. ಡಿಡಿಸಿಎ, ವಿರಾಟ್ ಕೊಹ್ಲಿಯನ್ನು ದೆಹಲಿ ಸಂಭಾವ್ಯ ವಿಜಯ್ ಹಜಾರೆ ತಂಡದಲ್ಲಿ ಆಯ್ಕೆ ಮಾಡಿದೆ. ವಿರಾಟ್ ಕೊಹ್ಲಿ ಮಾತ್ರವಲ್ಲದೆ, ರಿಷಭ್ ಪಂತ್ ಕೂಡ ದೆಹಲಿ ತಂಡದ ಸಂಭಾವ್ಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಸಮಯದಲ್ಲಿ ವಿರಾಟ್ ಕೊಹ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವುದು ಖಚಿತವಾಗಿತ್ತು. ಅದರಂತೆ ಕೊಹ್ಲಿ ಈ ದೇಶಿ ಟೂರ್ನಿಯ ಮೂರು ಪಂದ್ಯಗಳಲ್ಲಿ ದೆಹಲಿ ಪರ ಆಡಬಹುದು ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವುದು ದೇಶಿ ಕ್ರಿಕೆಟ್ನ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ. ಏಕೆಂದರೆ ಕಿಂಗ್ ಕೊಹ್ಲಿ 15 ವರ್ಷಗಳ ನಂತರ ಈ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ. ಕೊಹ್ಲಿ ಕೊನೆಯ ಬಾರಿಗೆ ಈ ಪಂದ್ಯಾವಳಿಯಲ್ಲಿ 2010 ರಲ್ಲಿ ಆಡಿದ್ದರು. ಕೊಹ್ಲಿ ಇದುವರೆಗೆ 13 ವಿಜಯ್ ಹಜಾರೆ ಪಂದ್ಯಗಳನ್ನು ಆಡಿದ್ದು, 819 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಸೇರಿವೆ.
2027 ರ ವಿಶ್ವಕಪ್ ದೃಷ್ಟಿಯಿಂದ ಈ ದೇಶಿ ಟೂರ್ನಿ ವಿರಾಟ್ ಕೊಹ್ಲಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಏಕದಿನ ಕ್ರಿಕೆಟ್‌ನಲ್ಲಿ ಉಳಿಯಲು ದೇಶೀಯ ಕ್ರಿಕೆಟ್ ಆಡುವಂತೆ ಕೊಹ್ಲಿಗೆ ಬಿಸಿಸಿಐ ಸಲಹೆ ನೀಡಿತ್ತು. ಆ ಪ್ರಕಾರ ಕೊಹ್ಲಿ ಇದೀಗ ಈ ಟೂರ್ನಿಯಲ್ಲಿ ಆಡಲಿದ್ದಾರೆ. ಆದಾಗ್ಯೂ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಸಮಯದಲ್ಲಿ, ವಿರಾಟ್ ಕೊಹ್ಲಿ ತಮ್ಮ ತಯಾರಿ ದೈಹಿಕಕ್ಕಿಂತ ಮಾನಸಿಕವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿ 307 ರನ್ ಕೂಡ ಬಾರಿಸಿದ್ದರು. ಇದರಲ್ಲಿ ಎರಡು ಸತತ ಶತಕಗಳು ಹಾಗೂ 1 ಅರ್ಧಶತಕವೂ ಸೇರಿತ್ತು.
IND vs SA: ‘ಹೌದು ಕಳೆದ 2-3 ವರ್ಷಗಳು..’ ಸರಣಿ ಶ್ರೇಷ್ಠ ಗೆದ್ದ ಬಳಿಕ ಕಿಂಗ್ ಕೊಹ್ಲಿ ಹೇಳಿದ್ದೇನು?
ವಿರಾಟ್ ಕೊಹ್ಲಿ ಮಾತ್ರವಲ್ಲ, ರೋಹಿತ್ ಶರ್ಮಾ ಕೂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಮೂಲಗಳ ಪ್ರಕಾರ, ರೋಹಿತ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವುದು ಖಚಿತ. ವಿರಾಟ್‌ನಂತೆಯೇ, ರೋಹಿತ್ ಕೂಡ ಒಂದೇ ಸ್ವರೂಪದಲ್ಲಿ ಆಡುತ್ತಿದ್ದು, ಈಗಾಗಲೇ ಟೆಸ್ಟ್ ಮತ್ತು ಟಿ20ಗಳಿಂದ ನಿವೃತ್ತರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Thu, 11 December 25