U19 Asia Cup 2025: ಏಷ್ಯಾಕಪ್ನಲ್ಲಿ ಭಾರತ- ಪಾಕ್ ಫೈಟ್; ಪಂದ್ಯಕ್ಕೂ ಮುನ್ನ ಷರತ್ತು ವಿಧಿಸಿದ ಐಸಿಸಿ
India vs Pakistan U19 Asia Cup: ಡಿಸೆಂಬರ್ 12 ರಿಂದ ದುಬೈನಲ್ಲಿ ನಡೆಯಲಿರುವ U19 ಏಷ್ಯಾಕಪ್ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಹಿಂದಿನಿಂದಲೂ ಹ್ಯಾಂಡ್‌ಶೇಕ್ ವಿವಾದದಿಂದ ಸದ್ದು ಮಾಡಿದ್ದ ಈ ಪಂದ್ಯದ ಬಗ್ಗೆ, ಐಸಿಸಿ ಈ ಬಾರಿ ಆಟಗಾರರು ಕೈಕುಲುಕಬೇಕೆಂದು ಸೂಚಿಸಿದೆ. ಆದಾಗ್ಯೂ, ತಂಡದ ನಿರ್ಧಾರ ಅಂತಿಮವಾಗಿ ತರಬೇತುದಾರರಿಗೆ ಸೇರಿದೆ. ಭಾರತದ ಪಂದ್ಯದ ವೇಳಾಪಟ್ಟಿ ಮತ್ತು ತಂಡದ ವಿವರಗಳು ಲಭ್ಯ.

2025 ರ ಏಷ್ಯಾಕಪ್ (Asia Cup 2025) ಹ್ಯಾಂಡ್‌ಶೇಕ್ ವಿವಾದದಿಂದಲೇ ಸಾಕಷ್ಟು ಸದ್ದು ಮಾಡಿತ್ತು. ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡದ ಆಟಗಾರರು ಪರಸ್ಪರ ಕೈಕುಲುದಿರುವುದು ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಆಗ ಶುರುವಾದ ಹ್ಯಾಂಡ್‌ಶೇಕ್ ವಿವಾದ ಇಲ್ಲಿಯವರೆಗೂ ಮುಂದುವರೆದಿದೆ. ಇದೀಗ ಇದೆಲ್ಲದರ ನಡುವೆ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿವೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಕೂಡ ಉಭಯ ತಂಡಗಳ ಆಟಗಾರರು ಹ್ಯಾಂಡ್ ಶೇಕ್ ವಿವಾದವನ್ನು ಮತ್ತೊಮ್ಮೆ ಹುಟ್ಟುಹಾಕುತ್ತಾರಾ ಎಂಬುದನ್ನು ನೋಡಲು ಕಾಯುತ್ತಿದ್ದಾರೆ.
ಸೂಚನೆ ನೀಡಿದ ಐಸಿಸಿ
ವಾಸ್ತವವಾಗಿ ಇದೇ ಡಿಸೆಂಬರ್ 12 ರಿಂದ ದುಬೈನಲ್ಲಿ 19 ವರ್ಷದೊಳಗಿನವರ ಏಷ್ಯಾಕಪ್ ಟೂರ್ನಿ ಆರಂಭವಾಗುತ್ತಿದೆ. ಏಷ್ಯಾದ ಎಂಟು ತಂಡಗಳ ನಡುವೆ ನಡೆಯಲಿರುವ ಈ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಕೂಡ ಸೇರಿವೆ. ಹೀಗಾಗಿ ಮತ್ತೊಮ್ಮೆ ಹ್ಯಾಂಡ್ ಶೇಕ್ ವಿವಾದ ಹುಟ್ಟುಕೊಳ್ಳಬಹುದು ಎಂಬ ಆತಂಕದಲ್ಲಿರುವ ಐಸಿಸಿ, ಟೂರ್ನಿ ಆರಂಭಕ್ಕೂ ಮುನ್ನವೇ ಉಭಯ ತಂಡಗಳ ಆಡಳಿತ ಮಂಡಳಿಗೆ ಖಡಕ್ ಸೂಚನೆ ಕಳುಹಿಸಿದೆ. ಆ ಪ್ರಕಾರ ಭಾರತ ಮತ್ತು ಪಾಕಿಸ್ತಾನಿ ಆಟಗಾರರು ಪರಸ್ಪರ ಕೈಕುಲುಕಬೇಕು ಎಂಬ ಸಲಹೆಯನ್ನು ಐಸಿಸಿ ನೀಡಿದೆ ಎಂದು ವರದಿಯಾಗಿದೆ.
ಆದಾಗ್ಯೂ, ಉಭಯ ತಂಡಗಳ ಆಟಗಾರರು ಪಂದ್ಯದ ಬಳಿಕ ಹ್ಯಾಂಡ್‌ಶೇಕ್ ಮಾಡುತ್ತಾರೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ತಂಡದ ಆಟಗಾರರು ಶೇಕ್ಹ್ಯಾಂಡ್ ಮಾಡಬೇಕೋ, ಬೇಡವೋ ಎಂಬ ನಿರ್ಧಾರವು ಟೀಂ ಇಂಡಿಯಾದ ಮುಖ್ಯ ತರಬೇತುದಾರ ಮತ್ತು ತಂಡದ ವ್ಯವಸ್ಥಾಪಕರಿಗೆ ಬಿಟ್ಟದ್ದು. ಟೀಂ ಇಂಡಿಯಾದ ಮುಖ್ಯ ತರಬೇತುದಾರ ರಿಷಿಕೇಶ್ ಕಾನಿಟ್ಕರ್, ಹಾಗೂ ತಂಡದ ವ್ಯವಸ್ಥಾಪಕ ಆನಂದ್ ದಾತಾರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.
U19 Asia Cup: U-19 ಏಷ್ಯಾಕಪ್ಗೆ ಭಾರತ ತಂಡ ಪ್ರಕಟ; ಮತ್ತೆ ಅಬ್ಬರಿಸಲು ಸಜ್ಜಾದ ವೈಭವ್
ಟೂರ್ನಿಯಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ
ಈ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿದ್ದು, ಭಾರತ ಮತ್ತು ಪಾಕಿಸ್ತಾನ ಗುಂಪು ಎ ನಲ್ಲಿ ಸ್ಥಾನ ಪಡೆದಿವೆ. ಗುಂಪು ಬಿ ಯಲ್ಲಿ ಎರಡು ಅರ್ಹತಾ ತಂಡಗಳು ಸಹ ಇರುತ್ತವೆ. ಗುಂಪು ಬಿ ಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಒಂದು ಅರ್ಹತಾ ತಂಡ ಇರುತ್ತದೆ.
ತಂಡದ ವೇಳಾಪಟ್ಟಿ ಇಂತಿದೆ:
- ಡಿಸೆಂಬರ್ 12- ಭಾರತ vs ಕ್ವಾಲಿಫೈಯರ್ 1
- ಡಿಸೆಂಬರ್ 14- ಭಾರತ vs ಪಾಕಿಸ್ತಾನ
- ಡಿಸೆಂಬರ್ 16- ಭಾರತ vs ಕ್ವಾಲಿಫೈಯರ್ 3
- ಡಿಸೆಂಬರ್ 19- ಎ1 vs ಬಿ2, ಸೆಮಿಫೈನಲ್ 1
- ಡಿಸೆಂಬರ್ 19- ಬಿ1 vs ಎ2, ಸೆಮಿಫೈನಲ್ 2
- ಡಿಸೆಂಬರ್ 12- ಫೈನಲ್ ಪಂದ್ಯ
ಭಾರತ ಅಂಡರ್-19 ತಂಡ: ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್, ಯುವರಾಜ್ ಗೋಹಿಲ್, ಕಾನಿಷ್ಕ್ ಚೌಹಾಣ್, ಖಿಲಾನ್ ಎ ಪಟೇಲ್, ನಮನ್ ಪುಷ್ಪಕ್, ಡಿ ದೀಪೇಶ್, ಹೆನಿಲ್ ಸಿಂಗ್ ಪಟೇಲ್, ಕಿಶನ್ ಕುಮಾರ್ ಸಿಂಗ್ (ಫಿಟ್‌ನೆಸ್), ಉದ್ಧವ್ ಮೋಹನ್ ಮತ್ತು ಐರಾನ್ ಜಾರ್ಜ್
ಸ್ಟ್ಯಾಂಡ್‌ಬೈ- ರಾಹುಲ್ ಕುಮಾರ್, ಹೇಮಚೂಡೇಶನ್ ಜೆ, ಬಿಕೆ ಕಿಶೋರ್, ಆದಿತ್ಯ ರಾವತ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 pm, Thu, 11 December 25
