AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಸೊನ್ನೆ ಶುರು ಶುಭ್​ಮನ್ ಗಿಲ್; ಮೊದಲ ಎಸೆತದಲ್ಲೇ ಔಟಾದ ಉಪನಾಯಕ

Shubman Gill's T20 Struggles: ಶುಭ್​ಮನ್ ಗಿಲ್ ಟಿ20 ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ, ಇತ್ತೀಚೆಗೆ ಗೋಲ್ಡನ್ ಡಕ್‌ಗೆ ಔಟಾಗಿ ಅಭಿಮಾನಿಗಳನ್ನು ಕೆರಳಿಸಿದ್ದಾರೆ. ಟೆಸ್ಟ್, ಏಕದಿನ ನಾಯಕನಾಗಿದ್ದರೂ, ಟಿ20ಯಲ್ಲಿ ಅವರ ಪ್ರದರ್ಶನ ತೀರಾ ಕಳಪೆಯಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗದಿದ್ದರೂ, ಗಿಲ್‌ಗೆ ಸತತ ಅವಕಾಶಗಳು ಸಿಗುತ್ತಿವೆ. ಇದು ಟೀಮ್ ಇಂಡಿಯಾ ಆಯ್ಕೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

IND vs SA: ಸೊನ್ನೆ ಶುರು ಶುಭ್​ಮನ್ ಗಿಲ್; ಮೊದಲ ಎಸೆತದಲ್ಲೇ ಔಟಾದ ಉಪನಾಯಕ
Shubman Gill
ಪೃಥ್ವಿಶಂಕರ
|

Updated on:Dec 11, 2025 | 10:06 PM

Share

ಭಾರತದ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕತ್ವದ ಜೊತೆಗೆ ಟಿ20 ತಂಡದ ಉಪನಾಯಕನಾಗಿರುವ ಶುಭ್​ಮನ್ ಗಿಲ್ (Shubman Gill) ಈ ಜವಾಬ್ದಾರಿಗಳನ್ನು ಹೊತ್ತ ಬಳಿಕ ಯಶಸ್ಸು ಸಾಧಿಸಿದ್ದಕ್ಕಿಂತ ಮುಗ್ಗರಿಸಿದ್ದೆ ಹೆಚ್ಚು. ಅದರಲ್ಲೂ ಆಟಗಾರನಾಗಿ ಹೀನಾಯ ಫಾರ್ಮ್​ನಲ್ಲಿರುವ ಗಿಲ್, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಾಸ್ತವವಾಗಿ ಶುಭ್​ಮನ್ ಗಿಲ್ ಟಿ20 ಮಾದರಿಗೆ ಸರಿಹೊಂದುವ ಆಟಗಾರನಲ್ಲ ಎಂಬ ಮಾತುಗಳು ಬಹಳ ದಿನಗಳಿಂದಲೇ ಕೇಳಿಬರುತ್ತಿದೆ. ಇದೆಲ್ಲದರ ನಡುವೆಯೂ ಅವರಿಗೆ ಅವಕಾಶಗಳ ಮೇಲೆ ಅವಕಾಶ ಸಿಗುತ್ತಿದೆ. ಆದರೆ ಈ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಗಿಲ್ ಎಡವಿದ್ದಾರೆ. ಇದಕ್ಕೆ ಪೂರಕವೆಂಬಂತೆ, ಕಟಕ್​ನಲ್ಲಿ ನಡೆದ ಮೊದಲ ಟಿ20ಯಲ್ಲಿ ಕೇವಲ 4 ರನ್ ಗಳಿಸಿದ್ದ ಗಿಲ್, ನ್ಯೂಚಂಡೀಗಢದಲ್ಲಿ ನಡೆದ ಎರಡನೇ ಟಿ20ಪಂದ್ಯದ ಮೊದಲ ಎಸೆತದಲ್ಲೇ ಔಟಾದರು.

ಮೊದಲ ಗೋಲ್ಡನ್​ ಡಕ್​ಗೆ ಬಲಿಯಾದ ಗಿಲ್

ಎರಡನೇ ಟಿ20 ಪಂದ್ಯದಲ್ಲಿ ಶುಭ್​ಮನ್ ಗಿಲ್ ಗೋಲ್ಡನ್ ಡಕ್​ಗೆ ಔಟಾದರು. ಟಿ20ಮಾದರಿಯಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಅವರ ಮೊದಲ ಗೋಲ್ಡನ್ ಡಕ್ ಆಗಿದೆ. ಅಂದರೆ ಮೊದಲ ಎಸೆತದಲ್ಲೇ ಶುಭ್​ಮನ್ ಗಿಲ್ ಔಟಾದದ್ದು ಇದೇ ಮೊದಲು. ಅಲ್ಲದೆ ಗಿಲ್, ಈ ವರ್ಷ ಆಡಿರುವ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅರ್ಧಶತಕದ ಬರ ಎದುರಿಸುತ್ತಿದ್ದಾರೆ. ಈ ವರ್ಷ ಆಡಿರುವ 14 ಟಿ20 ಇನ್ನಿಂಗ್ಸ್‌ಗಳಲ್ಲಿ ಗಿಲ್, ಕೇವಲ 23.9 ಸರಾಸರಿಯಲ್ಲಿ 263 ರನ್ ಗಳಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್‌ರಂತಹ ಆಟಗಾರರನ್ನು ಬೆಂಚ್‌ ಮೇಲೆ ಕೂರಿಸಿ, ಗಿಲ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗುತ್ತಿದೆ. ಅವರನ್ನು ಉಪನಾಯಕರನ್ನಾಗಿಯೂ ನೇಮಿಸಲಾಗಿದೆ, ಆದರೆ ಅವರ ಪ್ರದರ್ಶನ ಈ ಇಬ್ಬರು ಆಟಗಾರರ ಬಳಿಯೂ ಇಲ್ಲ.

ಸಂಜು, ಜೈಸ್ವಾಲ್​ಗೆ ಅನ್ಯಾಯ?

ಇತ್ತ ಮೂರು ಅಂತರರಾಷ್ಟ್ರೀಯ ಟಿ20 ಶತಕಗಳನ್ನು ಬಾರಿಸಿದ್ದರೂ ಸಂಜು ಸ್ಯಾಮ್ಸನ್‌ಗೆ ಆಡಲು ಅವಕಾಶ ಸಿಗುತ್ತಿಲ್ಲ. ಇತ್ತ ಯಶಸ್ವಿ ಜೈಸ್ವಾಲ್ ಕೂಡ 160 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 723 ರನ್ ಗಳಿಸಿದ್ದಾರೆ. ಅವರು ಕೂಡ ಒಂದು ಟಿ20 ಶತಕ ಮತ್ತು 36 ಕ್ಕಿಂತ ಹೆಚ್ಚು ಸರಾಸರಿಯನ್ನು ಹೊಂದಿದ್ದಾರೆ, ಆದರೂ ಈ ಆಟಗಾರ ಇನ್ನೂ ತಂಡದಿಂದ ಹೊರಗಿದ್ದಾರೆ. ಆದರೆ ಪದೇ ಪದೇ ಎಡವುತ್ತಿರುವ ಗಿಲ್​ಗೆ ಅವಕಾಶಗಳ ಮೇಲೆ ಅವಕಾಶ ನೀಡುತ್ತಿರುವುದು ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Thu, 11 December 25

ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್
ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್
‘ದಿ ಡೆವಿಲ್’ ಸಿನಿಮಾ: 15 ದಿನಗಳಿಂದ ಮನೆಗೆ ಹೋಗಿಲ್ಲ ದರ್ಶನ್ ಫ್ಯಾನ್ಸ್
‘ದಿ ಡೆವಿಲ್’ ಸಿನಿಮಾ: 15 ದಿನಗಳಿಂದ ಮನೆಗೆ ಹೋಗಿಲ್ಲ ದರ್ಶನ್ ಫ್ಯಾನ್ಸ್
ಸರ್ಕಾರದ ವಿರುದ್ಧ ತೊಡೆತಟ್ಟಿ ಗೆದ್ದ IPS:ಅಲೋಕ್ ಕುಮಾರ್ ಗತ್ತು ನೋಡಿ
ಸರ್ಕಾರದ ವಿರುದ್ಧ ತೊಡೆತಟ್ಟಿ ಗೆದ್ದ IPS:ಅಲೋಕ್ ಕುಮಾರ್ ಗತ್ತು ನೋಡಿ
Bigg Boss: ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?
Bigg Boss: ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?
ಭೀಕರ ಬೈಕ್​​ ಅಪಘಾತ: ಎದೆ ಝಲ್​​ ಎನಿಸುವಂತಿದೆ ದೃಶ್ಯ
ಭೀಕರ ಬೈಕ್​​ ಅಪಘಾತ: ಎದೆ ಝಲ್​​ ಎನಿಸುವಂತಿದೆ ದೃಶ್ಯ
ದರ್ಶನ್ ರಾಜಕೀಯಕ್ಕೆ ಬರಬೇಕಾ ಬೇಡವಾ ಅನ್ನೋದು ಫ್ಯಾನ್ಸ್ ನಿರ್ಧಾರ: ದಿನಕರ್
ದರ್ಶನ್ ರಾಜಕೀಯಕ್ಕೆ ಬರಬೇಕಾ ಬೇಡವಾ ಅನ್ನೋದು ಫ್ಯಾನ್ಸ್ ನಿರ್ಧಾರ: ದಿನಕರ್
ಹೊಸ ಲುಕ್​​ನಲ್ಲಿ ಪ್ರಧಾನಿ; ಧುರಂಧರ್ ಸ್ಟೈಲ್​ನ ಮೋದಿ ಮಾಂಟೇಜ್ ವೈರಲ್
ಹೊಸ ಲುಕ್​​ನಲ್ಲಿ ಪ್ರಧಾನಿ; ಧುರಂಧರ್ ಸ್ಟೈಲ್​ನ ಮೋದಿ ಮಾಂಟೇಜ್ ವೈರಲ್
ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಡಿಕೆ ಶಿವಕುಮಾರ್ ಆಪ್ತ
ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಡಿಕೆ ಶಿವಕುಮಾರ್ ಆಪ್ತ
ಗಿಲ್ಲಿ ಬಗ್ಗೆ ಮನೆಮಂದಿಗೆ ಇರುವ ಅಭಿಪ್ರಾಯ ಬದಲಿಸಲು ಯತ್ನಿಸಿದ ರಜತ್
ಗಿಲ್ಲಿ ಬಗ್ಗೆ ಮನೆಮಂದಿಗೆ ಇರುವ ಅಭಿಪ್ರಾಯ ಬದಲಿಸಲು ಯತ್ನಿಸಿದ ರಜತ್
ಸಿದ್ದರಾಮಯ್ಯ ಬದಲಾಯಿಸಲು ಗಟ್ಸ್ ಯಾರಿಗಿದೆ? ಗುಡುಗಿದ ಸಚಿವ ಜಮೀರ್
ಸಿದ್ದರಾಮಯ್ಯ ಬದಲಾಯಿಸಲು ಗಟ್ಸ್ ಯಾರಿಗಿದೆ? ಗುಡುಗಿದ ಸಚಿವ ಜಮೀರ್