ಟಿ20 ವಿಶ್ವಕಪ್ನಲ್ಲಿ (T20 World Cup) ರನ್ ಮಳೆ ಹರಿಸುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಐಸಿಸಿ ಅಕ್ಟೋಬರ್ ತಿಂಗಳ ಆಟಗಾರ ಪ್ರಶಸ್ತಿ ಒಲಿದಿದೆ. ಏಷ್ಯಾಕಪ್ನಿಂದ ತನ್ನ ಹಳೆಯ ಫಾರ್ಮ್ಗೆ ಮರಳಿರುವ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ಶತಕ ಸೇರಿದಂತೆ ಹಲವು ಅರ್ಧಶತಕಗಳನ್ನು ಬಾರಿಸಿ ರನ್‌ಗಳ ಗುಡ್ಡೆ ಹಾಕಿದ್ದರು. ಇದೀಗ ಅಕ್ಟೋಬರ್ ತಿಂಗಳ ಆಟಗಾರ ಪ್ರಶಸ್ತಿ (ICC Player of the Month) ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದ್ದು, ಪುರುಷರ ವಿಭಾಗದಲ್ಲಿ ಕಿಂಗ್ ಕೊಹ್ಲಿಗೆ ಈ ಪ್ರಶಸ್ತಿ ಲಭಿಸಿದೆ. ಪುರುಷರ ವಿಭಾಗದಲ್ಲಿ ಈ ಪ್ರಶಸ್ತಿಗೆ ಕೊಹ್ಲಿ ಜೊತೆ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮತ್ತು ಜಿಂಬಾಬ್ವೆಯ ಸಿಕಂದರ್ ರಾಜಾ ಕೂಡ ನಾಮನಿರ್ದೇಶನಗೊಂಡಿದ್ದರು.
ಈ ಕ್ಯಾಲೆಂಡರ್ ತಿಂಗಳಿನಲ್ಲಿ 205 ರನ್ ಗಳಿಸಿರುವ ವಿರಾಟ್ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರೆಸಿದ್ದಾರೆ. ಈ ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಗೆಲುವಿನ ನಾಯಕನಾಗಿ ಹೊರಹೊಮ್ಮಿರುವ ವಿರಾಟ್, ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ 53 ಎಸೆತಗಳಲ್ಲಿ ಅಜೇಯ 82 ರನ್‌ಗಳ ಅವಿಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಕೊಹ್ಲಿಯ ಈ ಏಕಾಂಗಿ ಹೋರಾಟದ ಫಲವಾಗಿ ಟೀಂ ಇಂಡಿಯಾ ಬದ್ಧವೈರಿ ಪಾಕಿಸ್ತಾನವನ್ನು ಸೋಲಿಸಿ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿತ್ತು. ಆ ಬಳಿಕ ನೆದರ್ಲ್ಯಾಂಡ್ಸ್ ವಿರುದ್ಧ ಅಜೇಯ 62 ರನ್ ಗಳಿಸಿದ್ದ ವಿರಾಟ್, ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಅಜೇಯ ಅರ್ಧಶತಕ ಸಿಡಿಸಿ ಮಿಂಚಿದ್ದರು.
A batting stalwart wins the ICC Men's Player of the Month award for October after some sensational performances ?
Find out who he is ?
— ICC (@ICC) November 7, 2022
ಈ ಪುರಸ್ಕಾರವನ್ನು ಇನ್ನಷ್ಟು ವಿಶೇಷವಾಗಿಸಿದೆ
ಪ್ರಶಸ್ತಿ ಪ್ರಕಟವಾದ ಬಳಿಕ ಮಾತನಾಡಿದ ಬಳಿಕ ಈ ಬಗ್ಗೆ ಮಾತನಾಡಿದ ಕೊಹ್ಲಿ, ಅಕ್ಟೋಬರ್ ತಿಂಗಳ ಐಸಿಸಿ ಪುರುಷರ ತಿಂಗಳ ಆಟಗಾರನಾಗಿ ಆಯ್ಕೆಯಾಗಿರುವುದು ನನಗೆ ದೊಡ್ಡ ಗೌರವವಾಗಿದೆ. ಪ್ರಪಂಚದಾದ್ಯಂತದ ಅಭಿಮಾನಿಗಳು ಮತ್ತು ಪ್ಯಾನೆಲ್‌ನಿಂದ ಈ ತಿಂಗಳ ಆಟಗಾರನಾಗಿ ಆಯ್ಕೆಯಾಗಿರುವುದು ನನಗೆ ಈ ಪುರಸ್ಕಾರವನ್ನು ಇನ್ನಷ್ಟು ವಿಶೇಷವಾಗಿಸಿದೆ. ಜೊತೆಗೆ ಅಕ್ಟೋಬರ್ ತಿಂಗಳಲ್ಲಿ ಉತ್ತಮ ಆಟ ಪ್ರದರ್ಶಿಸಿ ಈ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದ ಇತರ ಆಟಗಾರರಿಗು ನಾನು ಗೌರವ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
Published On - 4:39 pm, Mon, 7 November 22