- Kannada News Photo gallery Cricket photos pakistan at the 1992 odi world cup to pakistan at the 2022 t20 world cup
ಅಬ್ಬಬ್ಬಾ… 6 ಕಾಕತಾಳೀಯ..! 1992ರ ವಿಶ್ವಕಪ್ ಇತಿಹಾಸ ಮತ್ತೊಮ್ಮೆ ಮರುಕಳಿಸುತ್ತಾ..?
ಟಿ20 ವಿಶ್ವಕಪ್ 2022ರಲ್ಲಿ ಪಾಕಿಸ್ತಾನದ ಕಾರು ಹೇಗೋ ಸೆಮಿಫೈನಲ್ ತಲುಪಿದೆ. ಅಂದರೆ ಶೀರ್ಷಿಕೆ ಈಗ ಎರಡು ಹೆಜ್ಜೆ ದೂರದಲ್ಲಿದೆ. ಆದರೆ, ಈ ಎರಡು ಹೆಜ್ಜೆಗಳ ಅಂತರವನ್ನ ಪಾಕಿಸ್ತಾನ ದಾಟುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
Updated on:Nov 07, 2022 | 6:35 PM

ಟಿ20 ವಿಶ್ವಕಪ್ 2022ರಲ್ಲಿ ಪಾಕಿಸ್ತಾನದ ಕಾರು ಹೇಗೋ ಸೆಮಿಫೈನಲ್ ತಲುಪಿದೆ. ಅಂದರೆ ಶೀರ್ಷಿಕೆ ಈಗ ಎರಡು ಹೆಜ್ಜೆ ದೂರದಲ್ಲಿದೆ. ಆದರೆ, ಈ ಎರಡು ಹೆಜ್ಜೆಗಳ ಅಂತರವನ್ನ ಪಾಕಿಸ್ತಾನ ದಾಟುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಅನೇಕರು 1992 ವಿಶ್ವಕಪ್ ಅನ್ನು ಈ ವಿಶ್ವಕಪ್ಗೆ ಹೋಲಿಸಿ ಅನೇಕ ಕಾಕತಾಳೀಯ ಸಂಗತಿಗಳನ್ನು ಹೊರಹಾಕಿದ್ದಾರೆ.

ಮೊದಲ ಕಾಕತಾಳೀಯ- 2022ರ ಟಿ20 ವಿಶ್ವಕಪ್‌ನಂತೆಯೇ ಆಸ್ಟ್ರೇಲಿಯಾ 1992 ರ ಏಕದಿನ ವಿಶ್ವಕಪ್ಗೂ ಆತಿಥ್ಯವಹಿಸಿತ್ತು.

ಎರಡನೇ ಕಾಕತಾಳೀಯ- ಈ ವಿಶ್ವಕಪ್‌ನಂತೆಯೇ ಆತಿಥೇಯ ಆಸ್ಟ್ರೇಲಿಯಾ 1992 ರ ಏಕದಿನ ವಿಶ್ವಕಪ್‌ನಲ್ಲಿ ಗುಂಪು ಹಂತದಿಂದಲೇ ಹೊರಬಿದ್ದಿತ್ತು.

ಮೂರನೇ ಕಾಕತಾಳೀಯ - 1992 ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿತ್ತುತು. 2022ರ ಟಿ20 ವಿಶ್ವಕಪ್‌ನಲ್ಲೂ ಈ ಎರಡು ತಂಡಗಳ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ.

ನಾಲ್ಕನೇ ಕಾಕತಾಳೀಯ - 1992 ರ ಏಕದಿನ ವಿಶ್ವಕಪ್‌ನಂತೆ, 2022 ರ ಟಿ20 ವಿಶ್ವಕಪ್‌ನಲ್ಲೂ, ಪಾಕಿಸ್ತಾನ ಗುಂಪು ಹಂತದ ಪಂದ್ಯದಲ್ಲಿ ಭಾರತದ ಎದುರು ಸೋಲನ್ನು ಎದುರಿಸಬೇಕಾಯಿತು.

ಐದನೇ ಕಾಕತಾಳೀಯ - 1992 ರ ಏಕದಿನ ವಿಶ್ವಕಪ್‌ನಂತೆ, 2022 ರ ಟಿ20 ವಿಶ್ವಕಪ್‌ನಲ್ಲೂ, ಪಾಕಿಸ್ತಾನ ಮೆಲ್ಬೋರ್ನ್ನಲ್ಲಿ ಸೋಲುವುದರೊಂದಿಗೆ ಪಂದ್ಯಾವಳಿಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು.

ಆರನೇ ಕಾಕತಾಳೀಯ - 1992 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಸೆಮಿಫೈನಲ್ ಟಿಕೆಟ್ ಖಚಿತ ಪಡಿಸಿಕೊಳ್ಳಲು ಗುಂಪು ಹಂತದ ಕೊನೆಯ ದಿನದವರೆಗೂ ಕಾಯಬೇಕಾಗಿತ್ತು. 2022ರ ಟಿ20 ವಿಶ್ವಕಪ್‌ನಲ್ಲೂ ಅದೇ ರೀತಿಯ ಘಟನೆ ಮತ್ತೊಮ್ಮೆ ಮರುಕಳಿಸಿತು. ಕೊನೆಯ ದಿನದಂದು ಸೌತ್ ಆಫ್ರಿಕಾ ಸೋಲುವ ಮೂಲಕ ಪಾಕಿಸ್ತಾನ ತನ್ನ ಸೆಮಿಫೈನಲ್ ಟಿಕೆಟ್ ಖಚಿತಪಡಿಸಿಕೊಂಡಿದೆ.
Published On - 6:35 pm, Mon, 7 November 22




