ಕಾರಿನಲ್ಲಿ ಸೆಹ್ವಾಗ್ ಮತ್ತು ಪತ್ನಿ ನಡುವೆ ಜಗಳ: ಈ ವಿಡಿಯೋ ಅಸಲಿಯೆತ್ತೇನು?

Virender Sehwag and Aarti: ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಲ್ಲಿರುವುದು ಪತ್ನಿ ಆರತಿ ಅವರಿಂದ ಡೈವೋರ್ಸ್ ಪಡೆಯಲಿದ್ದಾರೆ ಎಂಬ ಕಾರಣಕ್ಕೆ. ಸೆಹ್ವಾಗ್-ಆರತಿ ಕಳೆದ ಕೆಲ ತಿಂಗಳುಗಳಿಂದ ಪತ್ಯೇಕವಾಗಿ ವಾಸಿಸುತ್ತಿದ್ದು, ಶೀಘ್ರದಲ್ಲೇ ಈ ದಂಪತಿಗಳು ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಕಾರಿನಲ್ಲಿ ಸೆಹ್ವಾಗ್ ಮತ್ತು ಪತ್ನಿ ನಡುವೆ ಜಗಳ: ಈ ವಿಡಿಯೋ ಅಸಲಿಯೆತ್ತೇನು?
Virender Sehwag - Aarti Ahlawat
Updated By: ಝಾಹಿರ್ ಯೂಸುಫ್

Updated on: Feb 11, 2025 | 9:59 AM

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ನಡುವೆ ಎಲ್ಲವೂ ಸರಿಯಿಲ್ಲ ಎಂದು ವರದಿಗಳು ಕೇಳಿ ಬರುತ್ತಿದೆ. ಅಲ್ಲದೆ ಇಬ್ಬರೂ ಕೆಲ ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವೀರೇಂದ್ರ ಸೆಹ್ವಾಗ್ ಮತ್ತು ಪತ್ನಿ ಆರತಿ ಕಾರಿನಲ್ಲಿ ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ಇದೀಗ ಇದೇ ವಿಡಿಯೋ ಇಟ್ಟುಕೊಂಡು ಸೆಹ್ವಾಗ್-ಆರತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ಅಸಲಿಯತ್ತೇನು?

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ AI ಜನರೇಟೆಡ್. ಅಂದರೆ ಕೃತಕ ಬುದ್ಧಿಮತ್ತೆಯ ಮೂಲಕ ರಚಿಸಲಾಗಿದೆ. ಸೆಹ್ವಾಗ್ ಹಾಗೂ ಆರತಿ ಈ ಹಿಂದೆ ಕಾರಿನಲ್ಲಿ ಪ್ರಯಾಣಿಸಿದ ಫೋಟೋವನ್ನು ಬಳಸಿಕೊಂಡು ಇಲ್ಲಿ ಜಗಳವಾಡುತ್ತಿರುವ ವಿಡಿಯೋವನ್ನು ರಚಿಸಲಾಗಿದೆ. ಇಂತಹದೊಂದು ನಕಲಿ ವಿಡಿಯೋ ರಚಿಸಿ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳೊಂದಿಗೆ ಹರಿಬಿಟ್ಟಿದ್ದಾರೆ.

ಡ್ಯಾಶಿಂಗ್ ಓಪನರ್ ದೂರ ದೂರ:

ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ಅಗಿದ್ದ ವೀರೇಂದ್ರ ಸೆಹ್ವಾಗ್ 2004 ರಲ್ಲಿ ಆರತಿ ಅವರನ್ನು ವಿವಾಹವಾಗಿದ್ದರು. ಆದರೆ ಈಗ ಸುಮಾರು 21 ವರ್ಷಗಳ ನಂತರ ಅವರ ಸಂಬಂಧವು ಮುರಿದು ಬೀಳುವ ಹಂತಕ್ಕೆ ಬಂದು ನಿಂತಿದೆ ಎಂದು ವರದಿಯಾಗಿದೆ. ಇದನ್ನು ಪುಷ್ಠೀಕರಿಸುವಂತೆ ಇಬ್ಬರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಸೆಹ್ವಾಗ್ ಅವರ ಇತ್ತೀಚಿನ ಪೋಸ್ಟ್‌ಗಳು ಮತ್ತು ಅಪ್‌ಡೇಟ್‌ಗಳಲ್ಲಿ ಸಹ ಅವರ ಪತ್ನಿಯೊಂದಿಗೆ ಯಾವುದೇ ಚಿತ್ರವಿಲ್ಲ. ದೀಪಾವಳಿ ವೇಳೆಯೂ ಕೂಡ ಮಕ್ಕಳು ಮತ್ತು ತಾಯಿ ಜೊತೆಗಿರುವ ಫೋಟೋಗಳನ್ನು ಪೋಸ್ಟ್ ಹಂಚಿಕೊಂಡರೂ, ಪತ್ನಿ ಜತೆಗಿನ ಫೋಟೋವನ್ನು ಶೇರ್ ಮಾಡಿರಲಿಲ್ಲ.

ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..!

ಅತ್ತ ಆರತಿ ಕೂಡ ಮಕ್ಕಳೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆಯೇ, ವಿನಃ, ವೀರೇಂದ್ರ ಸೆಹ್ವಾಗ್ ಜೊತೆಗಿನ ಯಾವುದೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿಲ್ಲ. ಅಷ್ಟೇ ಅಲ್ಲದೆ ಇಬ್ಬರು ಕೆಲ ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

 

Published On - 9:58 am, Tue, 11 February 25