ಶ್ರೀಲಂಕಾ ತಂಡದ ಆಲ್‌ರೌಂಡರ್ ವನಿಂದು ಹಸರಂಗ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸೀಮಿತ ಓವರ್ಗಳ ಕ್ರಿಕೆಟ್ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹಸರಂಗ ಶ್ರೀಲಂಕಾ ಕ್ರಿಕೆಟ್ ಬೋರ್ಡ್ಗೆ ತಿಳಿಸಿದ್ದಾರೆ.
ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ತಮ್ಮ ವೃತ್ತಿಜೀವನವನ್ನು ವಿಸ್ತರಿಸುವ ಪ್ರಯತ್ನದಲ್ಲಿದ್ದೇನೆ. ಹೀಗಾಗಿ ದೀರ್ಘ ಸ್ವರೂಪದ ಆಟವನ್ನು ತ್ಯಜಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹಸರಂಗ ಹೇಳಿದ್ದಾರೆ.
ಹಸರಂಗ ಅವರ ಈ ದಿಢೀರ್ ನಿರ್ಧಾರವನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಪರಿಗಣಿಸಿದ್ದು, ನಾವು ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ. ಮುಂಬರುವ ದಿನಗಳಲ್ಲಿ ನಮ್ಮ ವೈಟ್-ಬಾಲ್ ಪಂದ್ಯಗಳಲ್ಲಿ ಹಸರಂಗ ಪ್ರಮುಖ ಭಾಗವಾಗುವ ಎಂಬ ವಿಶ್ವಾಸವಿದೆ ಎಂದು ಎಸ್‌ಎಲ್‌ಸಿಯ ಸಿಇಒ ಆಶ್ಲೇ ಡಿ ಸಿಲ್ವಾ ಹೇಳಿದ್ದಾರೆ.
ಅಂದಹಾಗೆ ವನಿಂದು ಹಸರಂಗ ಈ ಹಿಂದಿನಿಂದಲೂ ಟೆಸ್ಟ್ ಕ್ರಿಕೆಟ್ನಿಂದ ದೂರವೇ ಉಳಿದಿದ್ದರು. ಇದಕ್ಕೆ ಸಾಕ್ಷಿಯೇ ಅವರು ಇದುವರೆಗೆ ಆಡಿದ ಪಂದ್ಯಗಳು. ಅಂದರೆ ಶ್ರೀಲಂಕಾ ವಿರುದ್ಧ ವನಿಂದು ಹಸರಂಗ ಕೇವಲ 4 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
ಈ ವೇಳೆ ಕೇವಲ 4 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದರು. ಇನ್ನು 2021 ರ ಬಳಿಕ ಅವರು ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ 26 ವರ್ಷದ ಹಸರಂಗ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ನಿರ್ಧಾರ ತೆಗೆದುಕೊಂಡಿದ್ದಾರೆ.
ವನಿಂದು ಹಸರಂಗ ಟಿ20 ಕ್ರಿಕೆಟ್ನಲ್ಲಿ ಆಲ್‌ರೌಂಡರ್ ಆಗಿ ಮಿಂಚುತ್ತಿದ್ದಾರೆ. 2022 ರ ಐಪಿಎಲ್ ಹರಾಜಿನಲ್ಲಿ 10.75 ಕೋಟಿಗೆ ಆರ್ಸಿಬಿ ತಂಡದ ಪಾಲಾಗಿದ್ದರು. ಅಲ್ಲದೆ ಈಗಲೂ ಆರ್ಸಿಬಿ ತಂಡದಲ್ಲಿದ್ದಾರೆ.
ಇದಲ್ಲದೆ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ (CPL), ಕ್ವೆಟ್ಟಾ ಗ್ಲಾಡಿಯೇಟರ್ಸ್ (PSL), ಕ್ಯಾಂಡಿ ಫಾಲ್ಕನ್ಸ್ ಮತ್ತು ಜಾಫ್ನಾ ಕಿಂಗ್ಸ್ (LPL), ಡೆಸರ್ಟ್ ವೈಪರ್ಸ್ (IL T20) ಮತ್ತು ವಾಷಿಂಗ್ಟನ್ ಫ್ರೀಡಮ್ (MLC) ತಂಡಗಳ ಪರ ಕೂಡ ಲೀಗ್ ಕ್ರಿಕೆಟ್ ಆಡುತ್ತಿದ್ದಾರೆ.
ಶ್ರೀಲಂಕಾ ಪರ 48 ಏಕದಿನ ಪಂದ್ಯಗಳನ್ನಾಡಿರುವ 67 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 58 ಟಿ20 ಪಂದ್ಯಗಳಿಂದ 91 ವಿಕೆಟ್ ಪಡೆದು ಮಿಂಚಿದ್ದಾರೆ.’
ಇದನ್ನೂ ಓದಿ: Wanindu Hasaranga: ವಿಶ್ವ ದಾಖಲೆ ನಿರ್ಮಿಸಿದ ವನಿಂದು ಹಸರಂಗ..!
ಐಪಿಎಲ್ನಲ್ಲಿ ಆರ್ಸಿಬಿ ಪರ ಒಟ್ಟು 26 ಪಂದ್ಯಗಳನ್ನಾಡಿರುವ ವನಿಂದು ಹಸರಂಗ 35 ವಿಕೆಟ್ಗಳನ್ನು ಮಾತ್ರ ಪಡೆದಿದ್ದಾರೆ. ಅಲ್ಲದೆ 8.13 ಸರಾಸರಿಯಲ್ಲಿ ರನ್ ಬಿಟ್ಟು ಕೊಡುವ ಮೂಲಕ ದುಬಾರಿ ಬೌಲರ್ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.