Ravindra Jadeja: ರಾಕ್​ಸ್ಟಾರ್ ಜಡ್ಡು ರಾಕಿಂಗ್: ಅಗಲಿದ ನಾಯಕನಿಗೆ ಸೆಂಚುರಿ ನಮನ

| Updated By: ಝಾಹಿರ್ ಯೂಸುಫ್

Updated on: Mar 05, 2022 | 3:09 PM

Ravindra Jadeja's 2nd Test hundred: ಈ ಶತಕದೊಂದಿಗೆ ಹಲವು ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ವೃತ್ತಿ ಕ್ರಿಕೆಟ್​ನಲ್ಲಿ ಜಡೇಜಾ 5 ಸಾವಿರ ರನ್ ಪೂರೈಸಿದ್ದಾರೆ.

Ravindra Jadeja: ರಾಕ್​ಸ್ಟಾರ್ ಜಡ್ಡು ರಾಕಿಂಗ್: ಅಗಲಿದ ನಾಯಕನಿಗೆ ಸೆಂಚುರಿ ನಮನ
Ravindra Jadeja
Follow us on

ಅದು 2008ರ ಐಪಿಎಲ್​ ಬಲಿಷ್ಠ ತಂಡಗಳ ನಡುವೆ ಶೇನ್ ವಾರ್ನ್ (Shane Warne) ನೇತೃತ್ವದಲ್ಲಿ ಯುವ ಪಡೆಯನ್ನು ಒಳಗೊಂಡ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿದಿತ್ತು. ತಂಡದ ನಾಯಕರಾಗಿ ಸಂಪೂರ್ಣ ಜವಾಬ್ದಾರಿವಹಿಸಿಕೊಂಡಿದ್ದ ವಾರ್ನ್​ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಿಸಿದರು. ಯೂಸುಫ್ ಪಠಾಣ್, ಸ್ವಪ್ನಿಲ್ ಅಸ್ನೊಡ್ಕರ್​,ರವೀಂದ್ರ ಜಡೇಜಾರಂತಹ ಆಟಗಾರರನ್ನೇ ಮುಂದಿಟ್ಟುಕೊಂಡು ಶೇನ್ ವಾರ್ನ್ ಎಂಬ ಸ್ಪಿನ್ ಮಾಂತ್ರಿಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಅಂದು ತಂಡದಲ್ಲಿದ್ದ ಯುವ ತರುಣ ರವೀಂದ್ರ ಜಡೇಜಾರನ್ನು ಗಮನಿಸಿ, ದಿಸ್ ಕಿಡ್ ಈಸ್ ರಾಕ್​ಸ್ಟಾರ್ ಎಂದಿದ್ದರು ಶೇನ್ ವಾರ್ನ್. ಸ್ಪಿನ್ ಮಾಂತ್ರಿಕನ ರಾಕ್​​ಸ್ಟಾರ್ ಆ ಬಳಿಕ ಕ್ರಿಕೆಟ್​ ಅಂಗಳದಲ್ಲಿ ಸರ್​ ಜಡೇಜಾ (Ravindra Jadeja) ಆಗಿ ಮಿಂಚಲಾರಂಭಿಸಿದರು. ಟೀಮ್ ಇಂಡಿಯಾದ ಖಾಯಂ ಸದಸ್ಯರಾದರು.

ಇದೀಗ ರವೀಂದ್ರ ಜಡೇಜಾ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕ ಮೂಡಿಬಂದಿದ್ದು ತನ್ನನ್ನು ರಾಕ್​ಸ್ಟಾರ್ ಎಂದು ಕರೆದಿದ್ದ ಶೇನ್​ ವಾರ್ನ್​ ಅವರ ಅಗಲಿಕೆಯ ಬೆನ್ನಲ್ಲೇ ಎಂಬುದು ವಿಶೇಷ. ಹೀಗಾಗಿಯೇ ರಾಕ್‌ಸ್ಟಾರ್ ಜಡೇಜಾ ಶತಕ ಬಾರಿಸಿ ಈ ಮೂಲಕ ಶೇನ್ ವಾರ್ನ್‌ಗೆ ಗೌರವ ಸಲ್ಲಿಸಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ತನ್ನ ಟ್ವಿಟರ್​ ಖಾತೆಯಲ್ಲಿ ಹೇಳಿಕೊಂಡಿದೆ. ಅಷ್ಟೇ ಅಲ್ಲದೆ ಈ ಶತಕ ನೋಡಿ ಶೇನ್ ವಾರ್ನ್​ ಹೆಮ್ಮೆಪಟ್ಟಿರುತ್ತಾರೆ ಎಂದು ಆರ್​ಆರ್​ ಟ್ವಿಟಿಸಿದೆ.

ಒಟ್ಟಿನಲ್ಲಿ ಶೇನ್ ವಾರ್ನ್​ ಎಂಬ ದಂತಕಥೆಗೆ ಭರ್ಜರಿ ಶತಕದ ಮೂಲಕ ರವೀಂದ್ರ ಜಡೇಜಾ ನಮನ ಸಲ್ಲಿಸಿದ್ದಾರೆ. ಈ ಮೂಲಕ ರಾಕ್​ಸ್ಟಾರ್ ಬಿರುದು ನೀಡಿದ ನಾಯಕನಿಗೆ ಸೆಂಚುರಿಯೊಂದಿಗೆ ಗೌರವಪೂರ್ಣ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

2ನೇ ಶತಕ:
ಮೊಹಾಲಿ ಮೈದಾನದಲ್ಲಿ ರವೀಂದ್ರ ಜಡೇಜಾ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ದಾಖಲಿಸಿದರು. 160 ಎಸೆತಗಳಲ್ಲಿ ಈ ಶತಕ ಪೂರೈಸಿದರು. ವಿಶೇಷ ಎಂದರೆ ಈ ಶತಕದ ಅವಧಿಯಲ್ಲಿ ಜಡೇಜಾ 6 ಮತ್ತು 7 ನೇ ವಿಕೆಟ್‌ಗೆ ಎರಡು ಶತಕದ ಜೊತೆಯಾಟಗಳನ್ನುಆಡಿದರು. ಮೊದಲು ಪಂತ್ ಜೊತೆಗೆ 104 ರನ್​ಗಳ ಜೊತೆಯಾಟವಾಡಿದರೆ, ಆ ಬಳಿಕ ಅಶ್ವಿನ್ ಜತೆ 132 ರನ್​ಗಳ ಜೊತೆಯಾಟ ಆಡಿದರು.

‘ರಾಕ್‌ಸ್ಟಾರ್’ ಮಿಂಚಿಂಗ್:
ಈ ಶತಕದೊಂದಿಗೆ ಹಲವು ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ವೃತ್ತಿ ಕ್ರಿಕೆಟ್​ನಲ್ಲಿ ಜಡೇಜಾ 5 ಸಾವಿರ ರನ್ ಪೂರೈಸಿದ್ದಾರೆ. ಮತ್ತೊಂದೆಡೆ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 400 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಕಪಿಲ್ ದೇವ್ ಬಳಿಕ 5 ಸಾವಿರ ರನ್ ಹಾಗೂ 400 ಕ್ಕೂ ಅಧಿಕ ವಿಕೆಟ್ ಪಡೆದ ಭಾರತದ 2ನೇ ಆಟಗಾರ ಎಂಬ ವಿಶೇಷ ದಾಖಲೆಯನ್ನು ಜಡೇಜಾ ನಿರ್ಮಿಸಿದ್ದಾರೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(“Warne Must Be Really Proud Of His Rockstar”: Ravindra Jadeja’s 2nd Test hundred)