ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಟೀಂ ಇಂಡಿಯಾದ ಮಾಜಿ ಟೆಸ್ಟ್ ಕ್ರಿಕೆಟಿಗ ವಾಸೀಂ ಜಾಫರ್ (Wasim Jaffer) ತಮ್ಮ ತಮಾಷದಾಯಕ ಪೋಸ್ಟ್ಗಳಿಂದ ನೆಟ್ಟಿಗರಿಗೆ ಆಗಾಗ್ಗೆ ಮನರಂಜನೆಯ ರಸದೌತಣ ನೀಡುತ್ತಿರುತ್ತಾರೆ. ಇದಕ್ಕೆ ಸಾಕಷ್ಟು ನಿದರ್ಶನಗಳು ಇವೆ. ಒಮ್ಮೊಮ್ಮೆ ವಿದೇಶಿ ಆಟಗಾರರು ಟೀಂ ಇಂಡಿಯಾವನ್ನು (Team India) ತೆಗಳಿ ಮಾತನಾಡಿದಾಗ, ವಾಸಿಂ ಜಾಫರ್ ಕೂಡ ತಮ್ಮ ವಿನೋದಾತ್ಮಕ ಪೋಸ್ಟ್ ಮೂಲಕವೇ ಆ ಕ್ರಿಕೆಟಿಗರಿಗೆ ತಿರುಗೇಟು ನೀಡುತ್ತಿರುತ್ತಾರೆ. ಈಗ ಇಂತಹದ್ದೆ ಪೋಸ್ಟ್ ಹಾಕಿರುವ ಜಾಫರ್, ಈ ಬಾರಿ ಇಂಗ್ಲೆಂಡ್ ದೇಶವನ್ನು ಟಾರ್ಗೆಟ್ ಮಾಡಿದ್ದಾರೆ.
ಕೇವಲ 45 ದಿನಗಳಲ್ಲಿ ತಮ್ಮ ಬ್ರಿಟನ್ ಪ್ರಧಾನಿ ಹುದ್ದೆಯಿಂದ ಲಿಜ್ ಟ್ರಸ್ (UK prime minister Liz Truss) ಕೆಳಗಿಳಿದಿದ್ದಾರೆ. ಈಗ ಲಿಜ್ ಟ್ರಸ್ ಅವರ ರಾಜೀನಾಮೆ ಕುರಿತು ಟ್ಟಿಟರ್ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ವಾಸಿಂ ಜಾಫರ್, ಈ ಪೋಸ್ಟ್ನಲ್ಲಿ ಕ್ರೀಡೆ ಹಾಗೂ ರಾಜಕೀಯ ಎರಡನ್ನು ಮಿಶ್ರಣ ಮಾಡಿದ್ದಾರೆ. ವಾಸ್ತವವಾಗಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಪ್ರಮುಖ ತಂಡಗಳ ಕೊರತೆಗಳ ಬಗ್ಗೆ ಜಾಫರ್ ತಮ್ಮ ಟ್ವೀಟ್ನಲ್ಲಿ ಸ್ವಾಟ್ ವಿಶ್ಲೇಷಣೆ (SWOT- strengths, weaknesses, opportunities, and threats) ಮಾಡಿದ್ದಾರೆ. ಇದರಲ್ಲಿ ಟೀಂ ಇಂಡಿಯಾದ ಪ್ರಮುಖ ಕೊರೆತೆಯಾಗಿರುವ ವೇಗದ ಬೌಲಿಂಗ್ ಬಗ್ಗೆ ಮಾತನಾಡಿರುವ ಜಾಫರ್, ಟೀಂ ಇಂಡಿಯಾದಲ್ಲಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಇಲ್ಲ. ಹಾಗೆಯೇ ‘ಇಂಗ್ಲೆಂಡ್‌ಗೆ ಪ್ರಧಾನಿ ಇಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Ishan Kishan: 7 ಸಿಕ್ಸರ್, 5 ಬೌಂಡರಿ; 64 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಇಶಾನ್ ಕಿಶನ್..!
ಇಂಗ್ಲೆಂಡ್‌ಗೆ ಪ್ರಧಾನಿ ಇಲ್ಲ
ತಮ್ಮ ಟ್ವೀಟ್ನಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಪ್ರಮುಖ 4 ತಂಡಗಳ ಕೊರತೆಗಳ ಬಗ್ಗೆ ಮಾತನಾಡಿರುವ ಜಾಫರ್, ಮೊದಲನೆಯಾದಾಗಿ ಟೀಂ ಇಂಡಿಯಾದಲ್ಲಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಇಲ್ಲ ಎಂದಿದ್ದಾರೆ. ಆ ಬಳಿಕ ಪಾಕ್ ತಂಡದ ಕೊರತೆಯ ಬಗ್ಗೆ ಹೇಳಿರುವ ಜಾಫರ್, ಈ ತಂಡದಲ್ಲಿ ಅನುಭವಿ ಗೇಮ್ ಫಿನಿಶರ್ ಇಲ್ಲ ಎಂದಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾದಲ್ಲಿ ಉತ್ತಮ ದಾಖಲೆಯನ್ನು ಹೊಂದಿಲ್ಲ ಎಂದಿರುವ ಜಾಫರ್, ಶ್ರೀಲಂಕಾ ತಂಡದಲ್ಲಿ ಹೆಚ್ಚು ಅನುಭವಿಗಳಿಲ್ಲ ಎಂದಿದ್ದಾರೆ. ಜೊತೆಗೆ ಇವೆಲ್ಲವುಗಳೊಂದಿಗೆ ಇಂಗ್ಲೆಂಡ್ ದೇಶದ ಸದ್ಯದ ಕೊರತೆಯನ್ನು ಹೋಲಿಕೆ ಮಾಡಿರುವ ಜಾಫರ್, ಇಂಗ್ಲೆಂಡ್‌ಗೆ ಪ್ರಧಾನಿ ಇಲ್ಲ ಎಂದು ತಮ್ಮ ಟ್ವೀಟ್ನಲ್ಲಿ ಸೇರಿಸಿದ್ದಾರೆ.
Was doing a SWOT analysis for T20 WC participating teams and realised:
India don’t have a 150K+ bowler.
Pak don’t have a seasoned finisher.
NZ don’t have a great record in Aus.
SL don’t have an experienced squad.
England don’t have a Prime Minister. #T20worldcup22 #LizTruss— Wasim Jaffer (@WasimJaffer14) October 20, 2022
ಆರ್ಥಿಕ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲ
ಲಿಜ್ ಟ್ರಸ್ ಯುಕೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ವಾಸಿಂ ಜಾಫರ್, ಈ ತಮಾಷದಾಯಕ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದು, ಈಗ ಈ ಟ್ವೀಟ್ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. 47 ವರ್ಷ ವಯಸ್ಸಿನ ಲಿಜ್ ಟ್ರಸ್ ತಾವು ಅಧಿಕಾರವಹಿಸಿಕೊಂಡ ಕೇವಲ 45 ದಿನಗಳ ನಂತರ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಆರ್ಥಿಕ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲರಾಗಿದ್ದರಿಂದ ರಾಜಿನಾಮೆ ನೀಡಿದ್ದಾಗಿ ಲಿಜ್ ಟ್ರಸ್ ಹೇಳಿಕೊಂಡಿದ್ದು, ಬ್ರಿಟನ್‌ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಲಿದೆ. ಮಾಜಿ ಹಣಕಾಸು ಸಚಿವ ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿ ರೇಸ್ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ಬಳಿಕ ನಡೆದ ಚುನಾವಣೆಯಲ್ಲಿ ಲಿಜ್ ಟ್ರಸ್ ಮತ್ತು ಭಾರತ ಮೂಲದ ರಿಷಿ ಸುನಾಕ್ ನಡುವೆ ಪ್ರಧಾನಿ ಪಟ್ಟಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಸುನಕ್ ಅವರನ್ನು ಮಣಿಸಿ ಟ್ರಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 am, Fri, 21 October 22