
ಇಂಗ್ಲೆಂಡ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ( World Championship of Legends) ಲೀಗ್‌ನ ಎರಡನೇ ಆವೃತ್ತಿ ಆರಂಭವಾಗಿದೆ. ಈ ಲೀಗ್‌ನಲ್ಲಿ ಪ್ರಪಂಚದಾದ್ಯಂತದ ಮಾಜಿ ಸ್ಟಾರ್ ಆಟಗಾರರು ಭಾಗವಹಿಸುತ್ತಿದ್ದಾರೆ. ಐದು ತಂಡಗಳು ಭಾಗವಹಿಸುತ್ತಿರುವ ಈ ಲೀಗ್‌ನ ಹೈವೋಲ್ಟೇಜ್ ಪಂದ್ಯ ಇದೇ ಜುಲೈ 20 ರಂದು, ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ (India vs Pakistan) ನಡುವೆ ನಡೆಯಲಿದೆ. ಈ ಪಂದ್ಯ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದ್ದು, ಭಾರತದ ಕಾಲಮಾನ ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಆದಾಗ್ಯೂ ಈ ಪಂದ್ಯದಿಂದ ಭಾರತದ ಮೂವರು ಆಟಗಾರರಾದ ಹರ್ಭಜನ್ ಸಿಂಗ್ ಹಾಗೂ ಯುಸೂಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಹಿಂದೆ ಸರಿದಿದ್ದಾರೆ. ಈ ನಡುವೆ ಈ ಪಂದ್ಯ ಮಳೆಯಿಂದಾಗಿ ರದ್ದಾಗುವ ಸಾಧ್ಯತೆಗಳು ಹೆಚ್ಚಿವೆ.
ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವಿನ ಪಂದ್ಯ ಜುಲೈ 20 ರಂದು ನಡೆಯಲಿದೆ. ಆದಾಗ್ಯೂ, ಈ ಪಂದ್ಯಕ್ಕೆ ಮಳೆಯ ಭೀತಿ ಇದೆ. ಅಕ್ಯೂವೆದರ್ ವರದಿಯ ಪ್ರಕಾರ, ಜುಲೈ 20 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ವರದಿಯ ಪ್ರಕಾರ, ಮಳೆಯಾಗುವ ಸಾಧ್ಯತೆ ಶೇ. 55 ರಷ್ಟು ಇದೆ. ಗಾಳಿ ಗಂಟೆಗೆ 18 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ. ಆರ್ದ್ರತೆ ಶೇ. 64 ರಷ್ಟಿರುತ್ತದೆ. ಹಗಲಿನ ತಾಪಮಾನ ಶೇ. 22 ರಷ್ಟಿರುತ್ತದೆ. ಹವಾಮಾನ ವರದಿಯ ಪ್ರಕಾರ, ಈ ಪಂದ್ಯವನ್ನು ರದ್ದುಗೊಳಿಸಬಹುದು. ಜುಲೈ 19 ರಂದು, ಅಂದರೆ ಇಂದು, ಈ ಲೀಗ್‌ನ ಪಂದ್ಯವು ಇಂಗ್ಲೆಂಡ್ ಚಾಂಪಿಯನ್ಸ್ ಮತ್ತು ಆಸ್ಟ್ರೇಲಿಯಾ ಚಾಂಪಿಯನ್ಸ್ ನಡುವೆ ಎಡ್ಜ್‌ಬಾಸ್ಟನ್‌ನಲ್ಲಿಯೇ ನಡೆಯಲಿದೆ.
WCL 2025: ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಹರ್ಭಜನ್ ಹಾಗೂ ಪಠಾಣ್ ಬ್ರದರ್ಸ್
ಭಾರತ ಚಾಂಪಿಯನ್ ತಂಡ: ಶಿಖರ್ ಧವನ್, ಸುರೇಶ್ ರೈನಾ, ಅಂಬಟಿ ರಾಯುಡು, ಗುರುಕೀರತ್ ಸಿಂಗ್ ಮಾನ್, ಯುವರಾಜ್ ಸಿಂಗ್ (ನಾಯಕ), ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ರಾಬಿನ್ ಉತ್ತಪ್ಪ, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ವಿನಯ್ ಕುಮಾರ್, ಸಿದ್ಧಾರ್ಥ್ ಕೌಲ್, ಅಭಿಮನ್ಯು ಮಿಥುನ್ ಮತ್ತು ವರುಣ್ ಆರೋನ್.
ಪಾಕಿಸ್ತಾನ ಚಾಂಪಿಯನ್ ತಂಡ: ಮೊಹಮ್ಮದ್ ಹಫೀಜ್ (ನಾಯಕ), ಶೋಯೆಬ್ ಮಲಿಕ್, ಸರ್ಫ್ರಾಜ್ ಅಹ್ಮದ್, ಶರ್ಜೀಲ್ ಖಾನ್, ವಹಾಬ್ ರಿಯಾಜ್, ಆಸಿಫ್ ಅಲಿ, ಶಾಹಿದ್ ಅಫ್ರಿದಿ, ಕಮ್ರಾನ್ ಅಕ್ಮಲ್, ಅಮೀರ್ ಯಾಮಿನ್, ಸೊಹೈಲ್ ಖಾನ್, ಸೊಹೈಲ್ ತನ್ವೀರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 pm, Sat, 19 July 25