Dale Steyn: CSK ಪ್ಲೇಆಫ್​ ಪ್ರವೇಶಿಸಿದೆ, ಆದರೆ ಇದ್ರಲ್ಲಿ ಧೋನಿ ಕೊಡುಗೆ ಏನೂ ಇಲ್ಲ

| Updated By: ಝಾಹಿರ್ ಯೂಸುಫ್

Updated on: Oct 04, 2021 | 6:01 PM

MS DHONI: ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಎಂಎಸ್ ಧೋನಿ ಬ್ಯಾಟ್ಸ್‌ಮನ್‌ ಆಗಿ ಸಂಪೂರ್ಣ ವಿಫಲರಾಗಿದ್ದಾರೆ.

Dale Steyn: CSK ಪ್ಲೇಆಫ್​ ಪ್ರವೇಶಿಸಿದೆ, ಆದರೆ ಇದ್ರಲ್ಲಿ ಧೋನಿ ಕೊಡುಗೆ ಏನೂ ಇಲ್ಲ
MS Dhoni
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021)​ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಈಗಾಗಲೇ ಎಲ್ಲಾ ತಂಡಗಳು 12 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK)​, ಡೆಲ್ಲಿ ಕ್ಯಾಪಿಟಲ್ಸ್ (DC) ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡಗಳು ಪ್ಲೇ ಆಫ್ ಪ್ರವೇಶಿಸಿದೆ. ಇನ್ನು ನಾಲ್ಕನೇ ಸ್ಥಾನಕ್ಕಾಗಿ ಮುಂಬೈ, ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್​ ನಡುವೆ ಪೈಪೋಟಿ ಏರ್ಪಟ್ಟಿದೆ. ಇತ್ತ ಸಿಎಸ್​ಕೆ ತಂಡವು ಭರ್ಜರಿ ಪ್ರದರ್ಶನದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೆನ್ನೈ ತಂಡದ ಈ ಪ್ರದರ್ಶನದ ಬಗ್ಗೆ ಮಾತನಾಡಿರುವ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ (Dale Steyn) ಸಿಎಸ್​ಕೆ ತಂಡದ ನಾಯಕನ ಪ್ರದರ್ಶನದ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ.

ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಎಂಎಸ್ ಧೋನಿ ಬ್ಯಾಟ್ಸ್‌ಮನ್‌ ಆಗಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಡೇಲ್ ಸ್ಟೇನ್ ‘ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ಬಾಸ್. ಪ್ರತಿ ಬಾರಿ ಸಿಎಸ್​ಕೆ ತಂಡದ ಬಗ್ಗೆ ಯೋಚಿಸಿದಾಗಲೆಲ್ಲ ಧೋನಿ ಕಣ್ಮುಂದೆ ಬರುತ್ತಾರೆ. ಈ ಬಾರಿಯ ಟೂರ್ನಿಯಲ್ಲಿ ಕೆಲ ಪಂದ್ಯಗಳು ಬಾಕಿಯಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್​ ಪ್ಲೇ ಆಫ್​ ಪ್ರವೇಶಿಸಿದೆ. ಆದರೆ ಈ ಎಲ್ಲಾ ಗೆಲುವಿನಲ್ಲಿ ಧೋನಿ ಕೊಡುಗೆ ಏನೂ ಇಲ್ಲ. ಅಂದರೆ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಪ್ರವೇಶಕ್ಕೆ ಧೋನಿ ಯಾವುದೇ ಕೊಡುಗೆಗಳನ್ನು ನೀಡಿಲ್ಲ ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.

ಧೋನಿಯ ವೈಫಲ್ಯದ ಹೊರತಾಗಿಯೂ ಸಿಎಸ್​ಕೆ ಪ್ಲೇಆಫ್​ ಹಂತಕ್ಕೇರಿದೆ. ಇದಾಗ್ಯೂ ಅವರು ಫೈನಲ್​ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ರನ್​ಗಳಿಸಿದರೆ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ. ಇದರ ಹೊರತಾಗಿ ಅವರೇ ಮುಂದಿನ ಸೀಸನ್​ನಲ್ಲಿ ಸಿಎಸ್​ಕೆಯನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದು ಸ್ಟೇನ್ ಅಭಿಪ್ರಾಯಪಟ್ಟರು.

ಏಕೆಂದರೆ ಧೋನಿಯ ವೈಫಲ್ಯದ ಹೊರತಾಗಿಯೂ ಸಿಎಸ್​ಕೆ ತಂಡವು ನಿರಾಯಾಸವಾಗಿ ಪ್ಲೇ ಆಫ್​ ಪ್ರವೇಶಿಸಿದೆ. ಹೀಗಾಗಿ ಫ್ರಾಂಚೈಸಿ ಕೂಡ ಈ ಬಗ್ಗೆ ಚಿಂತಿಸಲಿದೆ ಎಂದು ಡೇಲ್ ಸ್ಟೇನ್ ತಿಳಿಸಿದರು. ಇನ್ನು ಈ ಸೀಸನ್​ನಲ್ಲಿ ಮಹೇಂದ್ರ ಸಿಂಗ್ ಧೋನಿ 12 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 66 ರನ್ ಮಾತ್ರ. ಇದೇ ಕಾರಣದಿಂದ ಸ್ಟೇನ್ ಪ್ರಸ್ತುತ ಸಿಎಸ್​ಕೆ ತಂಡವು ಧೋನಿಯನ್ನು ಅವಲಂಭಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

ಇದನ್ನೂ ಓದಿ: KL Rahul: ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ನಾಯಕನಾಗಬಾರದು ಎಂದ ಮಾಜಿ ಕ್ರಿಕೆಟಿಗ

(We haven’t see MS Dhoni do anything: Dale Steyn)