2007ರ ಟಿ20 ವಿಶ್ವಕಪ್ (T20 World Cup 2007) ಯಾರಿಗೆ ತಾನೆ ನೆನಪಿಲ್ಲ ಹೇಳಿ. ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳ ಎಷ್ಟೋ ವರ್ಷದ ಕನಸನ್ನು ನನಸು ಮಾಡಿದ ದಿನವನ್ನು ಯಾರಿಗೆ ತಾನೆ ಮರೆಯಲು ಸಾಧ್ಯ. 1983ರ ವಿಶ್ವಕಪ್ ಬಳಿಕ ವಿಶ್ವಕಪ್ ಬರ ಎದುರಿಸುತ್ತಿದ್ದ ಟೀಂ ಇಂಡಿಯಾಕ್ಕೆ ಯಾರೂ ಊಹಿಸದ ರೀತಿಯಲ್ಲಿ ಹೊಸ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ವಿಶ್ವಕಪ್ ಗೆದ್ದುಕೊಟ್ಟಿದ್ದರು. ಈ ಗೆಲುವನ್ನು ಇಡೀ ಇಂಡಿಯಾದಲ್ಲಿ ಹಬ್ಬದಂತೆ ಆಚರಿಸಲಾಗಿತ್ತು. ಈ ಪ್ರಶಸ್ತಿ ಗೆದ್ದು ಇಲ್ಲಿಗೆ 15 ವರ್ಷ ಕಳೆದಿದದ್ದರೂ ಭಾರತದ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯದ ಹೈಲೈಟ್ಸ್ ನೋಡುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ 2007 ರ ಟಿ20 ವಿಶ್ವಕಪ್ ಅನ್ನು ವೆಬ್ ಸರಣಿಯ ಮೂಲಕ ನೋಡುವ ಅವಕಾಶ ಟೀಂ ಇಂಡಿಯಾ ಅಭಿಮಾನಿಗಳಿಗೆ ಬಂದೊದಗಿದೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಗೆದ್ದ ಮೊದಲ ಟಿ20 ವಿಶ್ವಕಪ್ ಇದಾಗಿದೆ. ಈಗ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಟಿ20 ವಿಶ್ವಕಪ್ ಬಗ್ಗೆ ವೆಬ್ ಸರಣಿಯನ್ನು ಮಾಡಲಾಗುತ್ತಿದೆ. ಈ ಸಾಕ್ಷ್ಯಚಿತ್ರ ಆಧಾರಿತ ಸರಣಿಯನ್ನು ಇಂಟರ್ನ್ಯಾಷನಲ್ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ.
WEB SERIES ON 2007 T20 CRICKET WORLD CUP… A multi-language documentary web series on 2007 T20 Cricket World Cup – not titled yet – is officially announced… Featuring 15 #Indian cricketers, it is set to release in 2023… Over two-thirds of the shoot is complete. pic.twitter.com/DnF6F2JI5Y
— taran adarsh (@taran_adarsh) November 18, 2022
ನೈಜ ದೃಶ್ಯಗಳನ್ನೂ ಸಹ ಬಳಸಿಕೊಳ್ಳಲಾಗುವುದು
ಟಿ20 ವಿಶ್ವಕಪ್ ಬಗ್ಗೆ ತಯಾರಾಗುತ್ತಿರುವ ಈ ವೆಬ್ ಸರಣಿಯ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಈ ಸೀರಿಸ್ನಲ್ಲಿ ವಿಶ್ವಕಪ್‌ನಲ್ಲಿ ಭಾಗಿಯಾಗಿದ್ದ 15 ಆಟಗಾರರನ್ನು ಬಳಸಿಕೊಳ್ಳಲಾಗುವುದು. ಹಾಗೆಯೇ ಈ ವೆಬ್ ಸರಣಿಯಲ್ಲಿ ನೈಜ ದೃಶ್ಯಗಳನ್ನೂ ಸಹ ಬಳಸಿಕೊಳ್ಳಲಾಗುವುದು. ಈ ಸಾಕ್ಷ್ಯಚಿತ್ರ ಆಧಾರಿತ ವೆಬ್ ಸರಣಿಯ ಮೂರನೇ ಒಂದು ಭಾಗವನ್ನು ಚಿತ್ರೀಕರಿಸಲಾಗಿದ್ದು, ಈ ಸರಣಿಯ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದೆ.
ಈ ಚಿತ್ರ 2023 ರಲ್ಲಿ ಬಿಡುಗಡೆಯಾಗಲಿದೆ
ಯುಕೆ ಮೂಲದ ಸಂಸ್ಥೆ ಒನ್ ಒನ್ ಸಿಕ್ಸ್ ನೆಟ್‌ವರ್ಕ್ 2007 ರ ಟಿ20 ವಿಶ್ವಕಪ್ ಆಧಾರಿತ ಈ ವೆಬ್ ಸೀರಿಸನ್ನು ನಿರ್ಮಿಸುತ್ತಿದೆ. ಇದು ಗೌರವ್ ಬಹಿರ್ವಾನಿ ಅವರ ಒಡೆತನದ ಕಂಪನಿಯಾಗಿದ್ದು, ಆನಂದ್ ಕುಮಾರ್ ಈ ವೆಬ್ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ದೆಹಲಿ ಹೈಟ್ಸ್ ಮತ್ತು ಜಿಲಾ ಗಾಜಿಯಾಬಾದ್ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಆನಂದ್ ಕುಮಾರ್ ಸೈ ಎನಿಸಿಕೊಂಡಿದ್ದರು. ಹಾಗೆಯೇ ಈ ವೆಬ್ ಸರಣಿಯಗೆ ಚಿತ್ರಕಥೆ ಬರೆಯುತ್ತಿರುವ ಸೌರಭ್ ಎಂ ಪಾಂಡೆ ಅವರು ದಿ ಕಾಶ್ಮೀರ್ ಫೈಲ್ಸ್, ದಿ ತಾಷ್ಕೆಂಟ್ ಫೈಲ್ಸ್ ಮತ್ತು ವಾಣಿ ಮುಂತಾದ ಚಿತ್ರಗಳಿಗೆ ಚಿತ್ರ ಕಥೆಯನ್ನು ಬರೆದಿದ್ದಾರೆ. ಭಾರತೀಯ ಕ್ರಿಕೆಟಿಗರ ಪಾತ್ರದಲ್ಲಿ ಹಲವು ದೊಡ್ಡ ತಾರೆಯರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸುದ್ದಿ ಪ್ರಕಾರ, ಈ ವೆಬ್ ಸರಣಿ 2023 ರಲ್ಲಿ ಬಿಡುಗಡೆಯಾಗಲಿದೆ.
Published On - 4:40 pm, Fri, 18 November 22