ಅಮೆರಿಕಾದಲ್ಲಿ ಟೀಮ್ ಇಂಡಿಯಾ ಆಟಗಾರರ ಅಭ್ಯಾಸ ಶುರು: ದ್ರಾವಿಡ್ರಿಂದ ಸರಣಿ ವಶಕ್ಕೆ ಮಾಸ್ಟರ್ ಪ್ಲಾನ್
India vs West Indies 4th T20I: ಟೀಮ್ ಇಂಡಿಯಾ ಶುಕ್ರವಾರ ಅಂದರೆ ಇಂದಿನಿಂದ ಅಮೆರಿಕಾದಲ್ಲಿ ಅಭ್ಯಾಸ ಶುರು ಮಾಡಲಿದೆ. ಮೆನ್ ಇನ್ ಬ್ಲೂ ಸರಣಿಯನ್ನು ಗೆಲ್ಲಲು ಇನ್ನೂ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಫ್ಲೋರಿಡಾದಲ್ಲಿ ಈ ಪಂದ್ಯಗಳು ನಡೆಯಲಿವೆ.
ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಸರಣಿಯನ್ನು ಜೀವಂತವಾಗಿರಿಸಿಕೊಂಡಿರುವ ಟೀಮ್ ಇಂಡಿಯಾ (Team India) ಶನಿವಾರ ಮತ್ತು ಭಾನುವಾರದಂದು ಉಳಿದ ಎರಡು ಟಿ20 ಪಂದ್ಯಗಳನ್ನು ಆಡಲು ಅಮೆರಿಕಾದ (America) ಮಿಯಾಮಿಗೆ ಬಂದಿಳಿದಿದೆ. ಮಾಡು ಇಲ್ಲವೇ ಮಡಿ ಎಂಬಂತಾಗಿದ್ದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಪಾಂಡ್ಯ (Hardik Pandya) ನೇತೃತ್ವದ ತಂಡ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-2 ಅಂತರದ ಹಿನ್ನಡೆಯಲ್ಲಿದೆ.
ಟೀಮ್ ಇಂಡಿಯಾ ಶುಕ್ರವಾರ ಅಂದರೆ ಇಂದಿನಿಂದ ಅಮೆರಿಕಾದಲ್ಲಿ ಅಭ್ಯಾಸ ಶುರು ಮಾಡಲಿದೆ. ಮೆನ್ ಇನ್ ಬ್ಲೂ ಸರಣಿಯನ್ನು ಗೆಲ್ಲಲು ಇನ್ನೂ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಫ್ಲೋರಿಡಾದಲ್ಲಿ ಈ ಪಂದ್ಯಗಳು ನಡೆಯಲಿವೆ. ಇಲ್ಲಿ ಮೇಜರ್ ಲೀಗ್ ಕ್ರಿಕೆಟ್ (MLC) ಸಮಯದಲ್ಲಿ, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಹೀಗಾಗಿ ಅಮೇರಿಕಾದಲ್ಲಿಯೂ ಸಹ ಭಾರತ ತಂಡವನ್ನು ಹುರಿದುಂಬಿಸಲು ಪ್ರೇಕ್ಷಕರು ಬರುವ ನಿರೀಕ್ಷೆಯಿದೆ.
ODI World Cup 2023: 2 ಬದಲಾವಣೆ; ಟೀಂ ಇಂಡಿಯಾದ ಪರಿಷ್ಕೃತ ವಿಶ್ವಕಪ್ ವೇಳಾಪಟ್ಟಿ ಹೀಗಿದೆ
????????? Miami ✈️#TeamIndia | #WIvIND pic.twitter.com/SKJTbj0hgS
— BCCI (@BCCI) August 10, 2023
ಸತತ ಎರಡು ವೈಫಲ್ಯಗಳ ನಂತರ, ತಂಡದ ಹಿರಿಯ ಆಟಗಾರರಾದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ಅವರು ಮೂರನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವಿಗೆ ಕಾರಣರಾದರು. ಸೂರ್ಯ ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ಫಾರ್ಮ್ಗೆ ಬಂದರೆ, ಚಹಲ್ ಮತ್ತು ಕುಲ್ದೀಪ್ ಸ್ಪಿನ್ ಜಾದು ಚೆನ್ನಾಗಿ ಕೆಲಸ ಮಾಡಿತು. ಹಾರ್ದಿಕ್ ಕೂಡ ಲಯ ಕಂಡುಕೊಂಡರು. ತಿಲಕ್ ವರ್ಮಾ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ್ದಾರೆ.
ಸದ್ಯ ಮುಂದಿನ ಎರಡು ಟಿ20 ಪಂದ್ಯಗಳಲ್ಲಿ ಇದೇ ಲಯದಲ್ಲಿ ಆಟವಾಡಬೇಕಿದೆ. ಮೇಜರ್ ಲೀಗ್ ಕ್ರಿಕೆಟ್ ಸಮಯದಲ್ಲಿ ಕಂಡುಬಂದಂತೆ ಯುಎಸ್ಎಯಲ್ಲಿನ ಪಿಚ್‌ಗಳು ಸಹ ನಿಧಾನವಾಗಿದೆ. ಹೀಗಾಗಿ ಮೂರನೇ ಟಿ20ಯಲ್ಲಿ ಕಣಕ್ಕಿಳಿದ ಆಟಗಾರರೇ ಈ ಬಾರಿ ಕೂಡ ಆಡಬಹುದು.
ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಪಾತ್ರವನ್ನು ಮುಂದುವರಿಸುವ ನಿರೀಕ್ಷೆಯಿದೆ. ಏಕೆಂದರೆ ಭಾರತವು ಯಶಸ್ವಿ ಜೈಸ್ವಾಲ್‌ಗೆ ಮತ್ತೊಂದು ಅವಕಾಶ ನೀಡಬೇಕಿದೆ. ಟಿ20ಗಳಲ್ಲಿ ಸತತ ಮೂರು ವೈಫಲ್ಯ ಅನುಭವಿಸಿರುವ ಗಿಲ್ ಮೇಲೆ ಹೆಚ್ಚಿನ ಒತ್ತಡವಿದೆ. ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್ ಮೂರು ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಪ್ಲೇಯಿಂಗ್ ಇಲೆವೆನ್ನಲ್ಲಿರಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ