ಇಂದು ಭಾರತ-ವೆಸ್ಟ್ ಇಂಡೀಸ್ ನಿರ್ಣಾಯಕ ಕದನ: ಗೆದ್ದವರಿಗೆ ಟಿ20 ಸರಣಿ
WI vs IND 5th T20I: ಶನಿವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ 9 ವಿಕೆಟ್ಗಳಿಂದ ಜಯ ಸಾಧಿಸಿದೆ. ಹೀಗಾಗಿ ಸರಣಿ ಸಮಬಲಗೊಂಡಿದೆ. ಇದೀಗ ಇಂದು ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿ ಅಂತಿಮ ಐದನೇ ಟಿ20 ಪಂದ್ಯ ಆಯೋಜಿಸಲಾಗಿದೆ.
ಬಹಳಷ್ಟು ರೋಚಕತೆ ಸೃಷ್ಟಿಸಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ಟಿ20 ಸರಣಿಯ ಅಂತಿಮ ಐದನೇ ಪಂದ್ಯ ಇಂದು ನಡೆಯಲಿದೆ. ನಾಲ್ಕನೇ ಟಿ20 ಪಂದ್ಯ ನಡೆದ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿಯೇ ಈ ಪಂದ್ಯ ಕೂಡ ಆಯೋಜಿಸಲಾಗಿದೆ. ಶನಿವಾರ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ 9 ವಿಕೆಟ್ಗಳಿಂದ ಜಯ ಸಾಧಿಸಿದೆ. ಈ ಮೂಲಕ 2-2 ಅಂಕಗಳ ಅಂತರದಿಂದ ಸರಣಿ ಸಮಬಲಗೊಂಡಿದೆ. ಹೀಗಾಗಿ ಇಂದಿನದು ನಿರ್ಣಾಯಕವಾಗಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಭಾರತದಲ್ಲಿ ಬಹುದಿನಗಳಿಂದ ಕಾಡುತ್ತಿದ್ದ ಆರಂಭಿಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ನಾಲ್ಕನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 165 ರನ್ಗಳ ಜೊತೆಯಾಟ ಆಡಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಜೈಸ್ವಾಲ್ ಅಜೇಯ 84 ರನ್ ಚಚ್ಚಿದರೆ, ಗಿಲ್ 77 ರನ್ ಗಳಿಸಿದರು. ತಿಲಕ್ ವರ್ಮಾ ಅಜೇಯ 7 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ಗೂ ಅವಕಾಶ ಸಿಗಲಿಲ್ಲ. ಇಂದಿನಂದು ಮಹತ್ವದ ಪಂದ್ಯ ಆಗಿರುವ ಕಾರಣ ಭಾರತದ ಬ್ಯಾಟರ್ಗಳು ಸಿದ್ಧವಿರಬೇಕಿದೆ.
Yashasvi Jaiswal scored his maiden T20I half-century & bagged the Player of the Match award as #TeamIndia sealed a clinical win over West Indies in the 4th T20I. 🙌 🙌
Scorecard ▶️ https://t.co/kOE4w9Utvs #WIvIND pic.twitter.com/xscQMjaLMb
— BCCI (@BCCI) August 12, 2023
ಟೀಮ್ ಇಂಡಿಯಾ ಬೌಲಿಂಗ್ನಲ್ಲಿ ಇನ್ನಷ್ಟು ಸುಧಾರಿಸಬೇಕಿದೆ. ಬೌಲರ್ಗಳು ವಿಕೆಟ್ ಕೀಳುತ್ತಿದ್ದರೂ ರನ್ಗಳನ್ನು ಸರಾಗವಾಗಿ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಬಿಟ್ಟು ಉಳಿದ ಬೌಲರ್ಗಳೆಲ್ಲ ದುಬಾರಿ ಆಗಿದ್ದರು. ಯುವ ವೇಗಿ ಮುಖೇಶ್ ಕುಮಾರ್ ನಿರೀಕ್ಷೆಗೆ ತಕ್ಕ ಬೌಲಿಂಗ್ ಪ್ರದರ್ಶನ ನೀಡುತ್ತಿಲ್ಲ. ಅರ್ಶ್ದೀಪ್ ಸಿಂಗ್ ಬೌಲಿಂಗ್ ಕೂಡ ಮಂಕಾಗಿದೆ. ಯುಜ್ವೇಂದ್ರ ಚಹಲ್ ಸ್ಪಿನ್ ಜಾದು ಕೆಲಸ ಮಾಡಬೇಕಿದೆ. ಇಂದಿನ ಪಂದ್ಯಕ್ಕೆ ಭಾರತದ ಬೌಲಿಂಗ್ ವಿಭಾಗ ಬದಲಾಗುತ್ತಾ ಅಥವಾ ಗೆದ್ದ ತಂಡವನ್ನೇ ಕಣಕ್ಕಿಳಿಸುತ್ತಾ ಎಂಬುದು ನೋಡಬೇಕಿದೆ.
VIDEO: ಪೊಲೀಸ್ ಸಮವಸ್ತ್ರದಲ್ಲಿ ಬೆಂಕಿ ಬೌಲಿಂಗ್…ವಿಡಿಯೋ ವೈರಲ್
ಇತ್ತ ವಿಂಡೀಸ್ ಕಳೆದ ಪಂದ್ಯ ಸೋತಿದ್ದರೂ ಬಲಿಷ್ಠವಾಗಿದೆ. ನಾಯಕ ರೋವ್ಮನ್ ಪೊವೆಲ್, ಖೈಲ್ ಮೇಯರ್ಸ್, ಬ್ರಾಂಡನ್ ಕಿಂಗ್ ಮತ್ತು ಅನುಭವಿ ನಿಕೋಲಸ್ ಪೂರನ್ ಯಾವುದೇ ಕ್ಷಣದಲ್ಲಿ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ಶಿಮ್ರೋನ್ ಹೆಟ್ಮೇರ್ ಹಾಗೂ ಶಾಯ್ ಹೋಪ್ ಇಂದುಕೂಡ ಮತ್ತೊಮ್ಮೆ ಅಬ್ಬರಿಸಿದರೆ ದೊಡ್ಡ ಮೊತ್ತ ಕಲೆಹಾಕುವುದು ಖಚಿತ. ಬೌಲಿಂಗ್ನಲ್ಲಿ ಒಬೆಡ್ ಮೆಕಾಯ್, ರೊಮಾರಿಯೋ ಶೆಫೆರನ್ ಮತ್ತು ಜೇಸನ್ ಹೋಲ್ಡರ್ ಇದ್ದಾರೆ.
ಭಾರತ-ವೆಸ್ಟ್ ಇಂಡೀಸ್ ನಡುವಣ ಅಂತಿಮ ಐದನೇ ಟಿ20 ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಶುರುವಾಗಲಿದೆ. ದೂರದರ್ಶನ ಸ್ಪೋರ್ಟ್ಸ್ (ಡಿಡಿ ಸ್ಪೋರ್ಟ್ಸ್) ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಜೊತೆಗೆ ಲೈವ್ ಸ್ಟ್ರೀಮಿಂಗ್ ಫ್ಯಾನ್ ಮತ್ತು ಜಿಯೋ ಸಿನಿಮಾದಲ್ಲಿ ಲಭ್ಯವಿರುತ್ತದೆ.
ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ನಾಯಕ), ತಿಲಕ್ ವರ್ಮಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್, ರವಿ ಬಿಷ್ಣೋಯ್.
ವೆಸ್ಟ್ ಇಂಡೀಸ್ ಟಿ20 ತಂಡ: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೆರ್, ಶಾಯ್ ಹೋಪ್, ಬ್ರಾಂಡನ್ ಕಿಂಗ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫೆರನ್ ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಅಕೆಲ್ ಹೊಸೈನ್, ಒಬೆಡ್ ಮೆಕಾಯ್, ಒಶಾನೆ ಥೋಮಸ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ