ಕ್ರಿಕೆಟ್ ಜಗತ್ತು ಶಾಕ್: ಒಟ್ಟಿಗೆ ನಿವೃತ್ತಿ ಘೋಷಿಸಿದ ವೆಸ್ಟ್ ಇಂಡೀಸ್​ನ ನಾಲ್ವರು ಸ್ಟಾರ್ ಪ್ಲೇಯರ್ಸ್

|

Updated on: Jan 19, 2024 | 10:25 AM

West Indies Retirement: ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡ ಅನಿಸ್ಸಾ ಮೊಹಮ್ಮದ್, ಶಕೀರಾ ಸೆಲ್ಮನ್, ಕಯಾಸಿಯಾ ಮತ್ತು ಕೈಶೋನಾ ನೈಟ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಹೇಳಿಕೆ ನೀಡಿದೆ. ಒಂದು ದೇಶದ ನಾಲ್ವರು ಪ್ಲೇಯರ್ಸ್ ಏಕಕಾಲದಲ್ಲಿ ನಿವೃತ್ತಿ ಘೋಷಿಸುವುದು ಆಶ್ಚರ್ಯಕರವಾಗಿದೆ

ಕ್ರಿಕೆಟ್ ಜಗತ್ತು ಶಾಕ್: ಒಟ್ಟಿಗೆ ನಿವೃತ್ತಿ ಘೋಷಿಸಿದ ವೆಸ್ಟ್ ಇಂಡೀಸ್​ನ ನಾಲ್ವರು ಸ್ಟಾರ್ ಪ್ಲೇಯರ್ಸ್
West Indies women cricketers
Follow us on

ಕ್ರಿಕೆಟ್ ಲೋಕದಲ್ಲಿ ಅಪರೂಪಕ್ಕೆ ಒಬ್ಬ ಆಟಗಾರ ನಿವೃತ್ತಿಯಾಗುವುದು ಸಾಮಾನ್ಯ. ಒಂದಲ್ಲ ಒಂದು ದಿನ, ಪ್ರತಿಯೊಬ್ಬ ಆಟಗಾರನೂ ತನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಾನೆ, ಆದರೆ ಒಂದು ದೇಶದ ನಾಲ್ವರು ಪ್ಲೇಯರ್ಸ್ ಏಕಕಾಲದಲ್ಲಿ ನಿವೃತ್ತಿ ಘೋಷಿಸುವುದು ಆಶ್ಚರ್ಯಕರವಾಗಿದೆ. ವೆಸ್ಟ್ ಇಂಡೀಸ್‌ನಲ್ಲಿ (West Indies Cricket) ಇಂತಹದ್ದೇ ಘಟನೆ ನಡೆದಿದೆ. ಕ್ರಿಕೆಟ್ ಜಗತ್ತಿನಲ್ಲಿ ವೆಸ್ಟ್ ಇಂಡೀಸ್ ಸ್ಥಿತಿ ಚೆನ್ನಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಈ ದೇಶವು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಈ ಕಾರಣಕ್ಕಾಗಿಯೇ ಈ ದೇಶದ ಅನೇಕ ಪುರುಷ ಆಟಗಾರರು ವಿಶ್ವದಾದ್ಯಂತ ಲೀಗ್‌ಗಳಲ್ಲಿ ಆಡಲು ಬಯಸುತ್ತಾರೆ. ಆದರೀಗ ವಿಂಡೀಸ್​ನ ನಾಲ್ಕು ಮಹಿಳಾ ಕ್ರಿಕೆಟಿಗರು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡ ಅನಿಸ್ಸಾ ಮೊಹಮ್ಮದ್, ಶಕೀರಾ ಸೆಲ್ಮನ್, ಕಯಾಸಿಯಾ ಮತ್ತು ಕೈಶೋನಾ ನೈಟ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಹೇಳಿಕೆ ನೀಡಿದೆ. ವೆಸ್ಟ್ ಇಂಡೀಸ್ ಮಹಿಳಾ ತಂಡವು 2016 ರಲ್ಲಿ ಭಾರತದಲ್ಲಿ ಆಡಿದ ಟಿ20 ವಿಶ್ವಕಪ್ ಗೆದ್ದು ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ನಾಲ್ವರೂ ಈ ಐತಿಹಾಸಿಕ ವಿಜಯದ ಭಾಗವಾಗಿದ್ದರು. ಆ ಬಳಿಕ, ವೆಸ್ಟ್ ಇಂಡೀಸ್ ಮಹಿಳಾ ತಂಡವು ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ.

IND vs AFG: ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ರೋಹಿತ್ ಶರ್ಮಾ..!

ಇದನ್ನೂ ಓದಿ
ಟಿ20 ವಿಶ್ವಕಪ್‌ಗೆ ಈ 10 ಆಟಗಾರರು ಫೈನಲ್ ಆಗಿದ್ದಾರೆ ಎಂದ ರೋಹಿತ್ ಶರ್ಮಾ
ಕೊಹ್ಲಿ ಫೀಲ್ಡರ್ ಆಫ್ ದಿ ಸೀರೀಸ್:ವಿರಾಟ್ ಬಗ್ಗೆ ಅದ್ಭುತ ಕಥೆ ಹೇಳಿದ ಕೋಚ್
ಮೊದಲ ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ
ಸಾವಿರ ಬೌಂಡರಿಗಳ ಸರದಾರ ರೋಹಿತ್ ಶರ್ಮಾ..!

ಆಫ್-ಸ್ಪಿನ್ನರ್ ಮೊಹಮ್ಮದ್ 2003 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಆ ಸಮಯದಲ್ಲಿ ಅವರು ಕೇವಲ 15 ವರ್ಷ ವಯಸ್ಸಿನವರಾಗಿದ್ದರು. ಏಕದಿನ ಮತ್ತು ಟಿ20ಯಲ್ಲಿ ದೇಶದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ. ಅವರ 20 ವರ್ಷಗಳ ವೃತ್ತಿಜೀವನದಲ್ಲಿ, 141 ODI ಪಂದ್ಯಗಳಲ್ಲಿ 180 ವಿಕೆಟ್​ಗಳನ್ನು ಪಡೆದಿದ್ದಾರೆ. 117 ಟಿ20 ಪಂದ್ಯಗಳಲ್ಲಿ 125 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಇತಿಹಾಸದಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್ ಅನ್ನು ಒಟ್ಟುಗೂಡಿಸಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಆಗಿದ್ದರು.

ಅನಿಸ್ಸಾ ಮೊಹಮ್ಮದ್ ಅವರು ತಮ್ಮ ದೇಶಕ್ಕಾಗಿ ಟಿ20 ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಮಹಿಳಾ ಬೌಲರ್ ಕೂಡ ಆಗಿದ್ದರು. ಅವರು ವೆಸ್ಟ್ ಇಂಡೀಸ್‌ಗಾಗಿ ಐದು ಏಕದಿನ ವಿಶ್ವಕಪ್ ಮತ್ತು ಏಳು ಟಿ20 ವಿಶ್ವಕಪ್‌ಗಳನ್ನು ಆಡಿದ್ದಾರೆ. ಮಾರ್ಚ್ 2022 ರಲ್ಲಿ, ಅವರು ಆಸ್ಟ್ರೇಲಿಯಾ ವಿರುದ್ಧ ODI ವಿಶ್ವಕಪ್‌ನ ಸೆಮಿ-ಫೈನಲ್‌ನಲ್ಲಿ ಕಣಕ್ಕಿಳಿದಿದ್ದರು. ಆದರೆ ನಂತರ ಯಾವುದೇ ಪಂದ್ಯವನ್ನು ಆಡಲಿಲ್ಲ.

ಇನ್ನು ವೇಗದ ಬೌಲರ್ ಸೆಲ್ಮನ್ 2008 ರಲ್ಲಿ ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. 18 ವರ್ಷಗಳ ವೃತ್ತಿಜೀವನದಲ್ಲಿ, ಅವರು 100 ODI ಪಂದ್ಯಗಳಲ್ಲಿ 82 ಮತ್ತು 96 ಟಿ20 ಪಂದ್ಯಗಳಲ್ಲಿ 51 ವಿಕೆಟ್​ಗಳನ್ನು ಪಡೆದಿದ್ದಾರೆ. ಫೆಬ್ರವರಿ 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ T20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ಗಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು.

ಕೇಸಿಯಾ ಮತ್ತು ಕೈಶೋನಾ ಸಹೋದರಿಯರು. ಇಬ್ಬರಿಗೂ ಮುಂದಿನ ತಿಂಗಳು 32 ವರ್ಷ ಆಗಲಿದೆ. 2011ರಲ್ಲಿ ವೆಸ್ಟ್ ಇಂಡೀಸ್ ಪರ ಕೇಸಿಯಾ ಮೊದಲ ಪಂದ್ಯ ಆಡಿದ್ದರು. ಕೈಶೋನಾ 2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕೇಸಿಯಾ ತನ್ನ ದೇಶಕ್ಕಾಗಿ 87 ODI ಪಂದ್ಯಗಳಲ್ಲಿ 1327 ರನ್ ಗಳಿಸಿದ್ದಾರೆ. ಇದಲ್ಲದೇ 70 ಟಿ20 ಪಂದ್ಯಗಳಲ್ಲಿ 801 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೇಶೋನಾ 51 ಏಕದಿನ ಪಂದ್ಯಗಳಲ್ಲಿ 851 ರನ್ ಮತ್ತು 55 ಟಿ20 ಪಂದ್ಯಗಳಲ್ಲಿ 546 ರನ್ ಗಳಿಸಿದ್ದಾರೆ. ಇಬ್ಬರೂ ಡಿಸೆಂಬರ್ 2022 ರಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ