PBKS vs RR, Head to Head: ಪ್ಲೇ ಆಫ್​ಗೇರಲು ಇಬ್ಬರಿಗೂ ಗೆಲುವು ಅಗತ್ಯ; ಹಿಂದಿನ ಮುಖಾಮುಖಿ ಫಲಿತಾಂಶ ಇಲ್ಲಿದೆ

| Updated By: ಪೃಥ್ವಿಶಂಕರ

Updated on: May 06, 2022 | 4:23 PM

PBKS vs RR IPL 2022 Head to Head: ಈ ಎರಡು ತಂಡಗಳ ನಡುವಿನ ಒಟ್ಟು ಪಂದ್ಯಗಳ ಅಂಕಿಅಂಶಗಳನ್ನು ನೋಡಿದರೆ ರಾಜಸ್ಥಾನ ತಂಡಕ್ಕೆ ಭಾರಿ ಮೇಲುಗೈ ಇದೆ. ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 23 ಪಂದ್ಯಗಳು ನಡೆದಿದ್ದು, ಈ ಪೈಕಿ ಪಂಜಾಬ್ ಒಂಬತ್ತು ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, ನಾವು ರಾಜಸ್ಥಾನದ ಬಗ್ಗೆ ಮಾತನಾಡಿದರೆ, ಈ ತಂಡವು ಪಂಜಾಬ್ ವಿರುದ್ಧ 13 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

PBKS vs RR, Head to Head: ಪ್ಲೇ ಆಫ್​ಗೇರಲು ಇಬ್ಬರಿಗೂ ಗೆಲುವು ಅಗತ್ಯ; ಹಿಂದಿನ ಮುಖಾಮುಖಿ ಫಲಿತಾಂಶ ಇಲ್ಲಿದೆ
PBKS vs RR
Follow us on

ಶನಿವಾರ ಐಪಿಎಲ್-2022 (IPL 2022)ರಲ್ಲಿ ಡಬಲ್ ಹೆಡರ್ ದಿನವಾಗಿದೆ. ಈ ಶನಿವಾರವೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಸೀಸನ್‌ನಲ್ಲಿ ಎರಡು ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ (Punjab Kings will face Rajasthan Royals) ತಂಡವನ್ನು ಎದುರಿಸಲಿದೆ. ಇಲ್ಲಿಯವರೆಗೆ ರಾಜಸ್ಥಾನ್ ರಾಯಲ್ಸ್‌ಗೆ ಈ ಸೀಸನ್ ಅದ್ಭುತವಾಗಿದೆ. ಅವರು ಸತತವಾಗಿ ಟಾಪ್-4ರಲ್ಲಿ ಉಳಿದಿದ್ದಾರೆ. ಆದರೆ ತಮ್ಮ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು, ಆದರೆ ಈ ಸೋಲಿನಿಂದ ರಾಜಸ್ಥಾನ ತಂಡವನ್ನು ಹಗುರವಾಗಿ ಪರಿಗಣಿಸಲಾಗದು. ಈ ತಂಡವು ಈ ಸೀಸನ್​ನಲ್ಲಿ ಪ್ರಬಲ ಫಾರ್ಮ್‌ನಲ್ಲಿದ್ದು ಪ್ಲೇ ಆಫ್‌ಗೆ ಹೋಗಲು ಪ್ರಬಲ ಸ್ಪರ್ಧಿಯಾಗಿದೆ. ಮತ್ತೊಂದೆಡೆ, ನಾವು ಪಂಜಾಬ್ ಕಿಂಗ್ಸ್ ಬಗ್ಗೆ ಮಾತನಾಡಿದರೆ, ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿ ಆತ್ಮವಿಶ್ವಾಸದೊಂದಿಗೆ ಬರುತ್ತಿದೆ. ಗುಜರಾತ್ ಈ ಸೀಸನ್​ನ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ ಕಿಂಗ್ಸ್ ಅವರ ವಿರುದ್ಧ ಗೆದ್ದಿರುವುದು ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿಸಲಿದೆ.

ಪಂಜಾಬ್‌ಗೆ ಪ್ರಸಕ್ತ ಸೀಸನ್​ ಮಿಶ್ರ ಪ್ರತಿಫಲ ನೀಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಂಜಾಬ್ ಗೆಲುವು ಅತ್ಯಂತ ಮಹತ್ವದ್ದಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ ತಂಡದ ಸ್ಥಾನ ಉತ್ತಮವಾಗಿಲ್ಲ. ಪಂಜಾಬ್ ತಂಡ ಇದುವರೆಗೆ 10 ಪಂದ್ಯಗಳನ್ನು ಆಡಿದ್ದು, ಐದರಲ್ಲಿ ಗೆದ್ದು ಐದರಲ್ಲಿ ಸೋತಿದೆ. 10 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಇದಲ್ಲದೆ, ಇನ್ನೂ ಎರಡು ತಂಡಗಳು- ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ 10 ಅಂಕಗಳನ್ನು ಹೊಂದಿದ್ದು, ಈ ಎರಡೂ ತಂಡಗಳು ಪಂಜಾಬ್‌ಗಿಂತ ಮುಂದಿವೆ. ಒಂದು ವೇಳೆ ಈ ಪಂದ್ಯದಲ್ಲಿ ಪಂಜಾಬ್ ಗೆಲುವಿನ ನಗೆ ಬೀರಿದರೆ ಅಂಕಪಟ್ಟಿಯಲ್ಲಿ ಪಂಜಾಬ್​ಗೆ ಅನುಕೂಲವಾಗಲಿದೆ. ಮತ್ತೊಂದೆಡೆ, ರಾಜಸ್ಥಾನ ತಂಡ 10 ಪಂದ್ಯಗಳಲ್ಲಿ ಆರು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಅಂಕಿಅಂಶಗಳು ಇಲ್ಲಿವೆ
ಈ ಎರಡು ತಂಡಗಳ ನಡುವಿನ ಒಟ್ಟು ಪಂದ್ಯಗಳ ಅಂಕಿಅಂಶಗಳನ್ನು ನೋಡಿದರೆ ರಾಜಸ್ಥಾನ ತಂಡಕ್ಕೆ ಭಾರಿ ಮೇಲುಗೈ ಇದೆ. ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 23 ಪಂದ್ಯಗಳು ನಡೆದಿದ್ದು, ಈ ಪೈಕಿ ಪಂಜಾಬ್ ಒಂಬತ್ತು ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, ನಾವು ರಾಜಸ್ಥಾನದ ಬಗ್ಗೆ ಮಾತನಾಡಿದರೆ, ಈ ತಂಡವು ಪಂಜಾಬ್ ವಿರುದ್ಧ 13 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ
IPL 2022: ನಂ.2..! ಐಪಿಎಲ್​ನಲ್ಲಿ ಇರ್ಫಾನ್ ಪಠಾಣ್ ದಾಖಲೆ ಸರಿಗಟ್ಟಿದ ಭುವನೇಶ್ವರ್ ಕುಮಾರ್

ಕಳೆದ 5 ಪಂದ್ಯಗಳ ಅಂಕಿಅಂಶಗಳು ಇಲ್ಲಿವೆ
ಮತ್ತೊಂದೆಡೆ, ಈ ಎರಡು ತಂಡಗಳ ನಡುವಿನ ಕಳೆದ ಐದು ಪಂದ್ಯಗಳ ಅಂಕಿಅಂಶಗಳನ್ನು ನೋಡುವುದಾದರೆ, ಇಲ್ಲಿಯೂ ರಾಜಸ್ಥಾನದ ಮೇಲುಗೈ ಇದೆ. ಕಳೆದ ಐದು ಪಂದ್ಯಗಳಲ್ಲಿ ಪಂಜಾಬ್ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದರೆ, ರಾಜಸ್ಥಾನ ಮೂರು ಪಂದ್ಯಗಳಲ್ಲಿ ಗೆದ್ದಿದೆ. 21 ಸೆಪ್ಟೆಂಬರ್ 2021 ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ ಜಯಗಳಿಸಿತು. 12 ಏಪ್ರಿಲ್ 2021 ರಂದು ನಡೆದ ಪಂದ್ಯದಲ್ಲಿ ಪಂಜಾಬ್ ಗೆದ್ದಿತು. 30 ಅಕ್ಟೋಬರ್ 2020, 27 ಸೆಪ್ಟೆಂಬರ್ 2020 ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ ಗೆದ್ದಿತ್ತು. 16 ಏಪ್ರಿಲ್ 2019 ರಂದು ನಡೆದ ಪಂದ್ಯದಲ್ಲಿ ಪಂಜಾಬ್ ಗೆದ್ದಿದೆ. ಅಂದರೆ, ಪ್ರಸ್ತುತ ಫಾರ್ಮ್ ಮತ್ತು ಅಂಕಿಅಂಶಗಳ ಪ್ರಕಾರ, ರಾಜಸ್ಥಾನ ತಂಡವು ಪಂಜಾಬ್‌ಗಿಂತ ಉತ್ತಮ ಪ್ರದರ್ಶನ ನೀಡಿರುವುದು ಸಾಭೀತಾಗಿದೆ.

ಆದರೆ ಕ್ರಿಕೆಟ್‌ನಲ್ಲಿ, ಈ ಗೆಲುವು ದಿನದ ಆಟದ ಮೇಲೆ ಅವಲಂಬಿತವಾಗಿರುತ್ತದೆ, ಅಂದರೆ ತಂಡವು ಉತ್ತಮವಾಗಿ ಆಡುವ ದಿನ ಗೆಲ್ಲುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ ಗೆಲ್ಲಲು ಅಂಕಿಅಂಶಗಳ ಮೇಲೆ ಅಲ್ಲ ಪ್ರದರ್ಶನದ ಮೇಲೆ ಕೇಂದ್ರೀಕರಿಸಬೇಕಾಗಿದೆ.

Published On - 4:23 pm, Fri, 6 May 22