RCB vs PBKS IPL 2022 Head to Head: ಪಂಜಾಬ್- ಬೆಂಗಳೂರಿಗೆ ಪ್ರಮುಖ ಪಂದ್ಯ; ಮುಖಾಮುಖಿ ವರದಿ ಇಲ್ಲಿದೆ

RCB vs PBKS IPL 2022 Head to Head: ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 29 ಪಂದ್ಯಗಳು ನಡೆದಿದ್ದು, ಪಂಜಾಬ್ 16 ರಲ್ಲಿ ಗೆದ್ದಿದ್ದರೆ, ಬೆಂಗಳೂರು 13 ಪಂದ್ಯಗಳನ್ನು ಗೆದ್ದಿದೆ.

RCB vs PBKS IPL 2022 Head to Head: ಪಂಜಾಬ್- ಬೆಂಗಳೂರಿಗೆ ಪ್ರಮುಖ ಪಂದ್ಯ; ಮುಖಾಮುಖಿ ವರದಿ ಇಲ್ಲಿದೆ
ಡು ಪ್ಲೆಸಿಸ್, ಮಯಾಂಕ್
Follow us
TV9 Web
| Updated By: ಪೃಥ್ವಿಶಂಕರ

Updated on: May 12, 2022 | 6:46 PM

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2022) 15ನೇ ಸೀಸನ್‌ನ ಪ್ಲೇಆಫ್‌ಗಾಗಿನ ಕದನ ಕುತೂಹಲ ಮೂಡಿಸಿದೆ. ಲೀಗ್ ಹಂತವು ಅಂತಿಮ ಹಂತದಲ್ಲಿದ್ದು, ಪ್ರತಿ ಪಂದ್ಯದ ನಂತರ ಪ್ಲೇಆಫ್‌ ಲೆಕ್ಕಾಚಾರ ಅದಲುಬದಲಾಗುತ್ತಿದೆ. ಈ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್‌ (Gujarat Titans) ತಂಡವು ಪ್ಲೇಆಫ್‌ಗೆ ಪ್ರವೇಶಿಸಿದೆ. ಆದರೆ ಉಳಿದ ಮೂರು ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಮೂರು ಸ್ಥಾನಗಳಿಗಾಗಿ ಎಂಟು ತಂಡಗಳು ಸೆಣಸುತ್ತಿವೆ. ಈ ಎರಡು ತಂಡಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS). ಈ ಎರಡು ತಂಡಗಳು ಶುಕ್ರವಾರ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದ್ದು, ಗೆಲ್ಲುವ ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಿದರೆ, ಸೋತ ತಂಡಕ್ಕೆ ಕಷ್ಟ ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ ಈ ಎರಡು ತಂಡಗಳ ನಡುವಿನ ಪಂದ್ಯಗಳ ಅಂಕಿಅಂಶಗಳನ್ನು ನೋಡುವುದು ಸಹ ಅಗತ್ಯವಾಗಿದೆ.

ಪಾಯಿಂಟ್ ಪಟ್ಟಿಯಲ್ಲಿ ಸದ್ಯದ ಸ್ಥಿತಿ ನೋಡಿದರೆ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. 12 ಪಂದ್ಯಗಳನ್ನು ಆಡಿರುವ ಅವರು ಏಳರಲ್ಲಿ ಗೆದ್ದು ಐದರಲ್ಲಿ ಸೋತಿದ್ದಾರೆ. ಮತ್ತೊಂದೆಡೆ, ಪಂಜಾಬ್‌ನ ಸ್ಥಿತಿ ತುಂಬಾ ಕೆಟ್ಟದಾಗಿದೆ. 11 ಪಂದ್ಯಗಳಿಂದ ಐದು ಗೆಲುವು ಮತ್ತು ಆರು ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಬೆಂಗಳೂರು ಇನ್ನೂ ಒಟ್ಟು ಮೂರು ಪಂದ್ಯಗಳನ್ನು ಆಡಬೇಕಿದೆ ಮತ್ತು ಪಂಜಾಬ್ ನಾಲ್ಕು ಪಂದ್ಯಗಳನ್ನು ಆಡಬೇಕಿದೆ. ಬೆಂಗಳೂರು ಮತ್ತು ಪಂಜಾಬ್‌ಗೆ ಗೆಲುವುಗಳು ಅಗತ್ಯವಾಗಿದ್ದು, ಈ ಎರಡು ತಂಡಗಳು ಈ ವಿಜಯವನ್ನು ದೊಡ್ಡ ಅಂತರದಿಂದ ಗೆಲ್ಲುವ ಹಂಬಲದಲ್ಲಿವೆ.

ಮುಖಾಮುಖಿ ಅಂಕಿಅಂಶ ಅಂಕಿಅಂಶಗಳ ಪ್ರಕಾರ ಪಂಜಾಬ್ ತಂಡ ಮೇಲುಗೈ ಸಾಧಿಸಿದೆ. ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 29 ಪಂದ್ಯಗಳು ನಡೆದಿದ್ದು, ಪಂಜಾಬ್ 16 ರಲ್ಲಿ ಗೆದ್ದಿದ್ದರೆ, ಬೆಂಗಳೂರು 13 ಪಂದ್ಯಗಳನ್ನು ಗೆದ್ದಿದೆ. ಮೂರು ಪಂದ್ಯಗಳ ಅಂತರದಲ್ಲಿ ಪಂಜಾಬ್ ತಂಡ ಬೆಂಗಳೂರಿಗಿಂತ ಮುಂದಿದೆ

ಇದನ್ನೂ ಓದಿ
Image
IPL 2022 RCB vs PBKS live streaming: ಪ್ಲೇ ಆಫ್​ಗೇರಲು ಆರ್​ಸಿಬಿ ಗೆಲ್ಲಲೇಬೇಕು; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
Image
IPL 2022: ಬಲವಂತವಾಗಿ ನಾಯಕತ್ವದಿಂದ ವಜಾ! ಕೋಪದಿಂದ ತಂಡ ತೊರೆದ ಜಡೇಜಾ; ಸಿಎಸ್​ಕೆಗೆ ಆಡುವುದು ಅನುಮಾನ
Image
IPL 2022: ಮೊದಲು ರೈನಾ.. ಈಗ ಜಡೇಜಾ! ಇನ್ಸ್‌ಟಾಗ್ರಾಮ್ ಅನ್​ಫಾಲೋ; ವದಂತಿಗಳಿಗೆ ಸಿಎಸ್​ಕೆ ಸಿಇಒ ಉತ್ತರವೇನು?

ಕೊನೆಯ 5 ಪಂದ್ಯಗಳ ಅಂಕಿಅಂಶಗಳು ಮತ್ತೊಂದೆಡೆ, ಕಳೆದ ಐದು ಪಂದ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಇಲ್ಲಿಯೂ ಅದೇ ಪರಿಸ್ಥಿತಿ ಇದೆ. ಇಲ್ಲೂ ಪಂಜಾಬ್ ತಂಡ ಮೇಲುಗೈ ಸಾಧಿಸಿದೆ. ಕಳೆದ ಐದು ಪಂದ್ಯಗಳಲ್ಲಿ ಪಂಜಾಬ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಬೆಂಗಳೂರು ಗೆದ್ದಿರುವುದು ಕೇವಲ ಒಂದೇ ಒಂದು ಪಂದ್ಯ ಮಾತ್ರ. ಈ ಋತುವಿನಲ್ಲಿ ಈ ಎರಡು ತಂಡಗಳ ನಡುವೆ ಇದು ಎರಡನೇ ಪಂದ್ಯವಾಗಿದೆ. ಎರಡೂ ತಂಡಗಳು 27 ಮಾರ್ಚ್ 2022 ರಂದು ಮುಖಾಮುಖಿಯಾದ್ದವು. ಈ ಪಂದ್ಯದಲ್ಲಿ ಪಂಜಾಬ್ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ತಂಡ ಐದು ವಿಕೆಟ್‌ಗಳ ಜಯ ಸಾಧಿಸಿತು. ಇದಕ್ಕೂ ಮೊದಲು, ಅಕ್ಟೋಬರ್ 3, 2021 ರಂದು ಆಡಿದ ಪಂದ್ಯವನ್ನು ಬೆಂಗಳೂರು ಗೆದ್ದುಕೊಂಡಿತ್ತು. ಪಂಜಾಬ್ 30 ಏಪ್ರಿಲ್ 2021, 15 ಅಕ್ಟೋಬರ್ 2020, 24 ಸೆಪ್ಟೆಂಬರ್ 2020 ರಂದು ನಡೆದ ಪಂದ್ಯವನ್ನು ಗೆದ್ದುಕೊಂಡಿತ್ತು.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್