IPL 2022: ಬೇರೆ ಗ್ರೂಪ್ನಲ್ಲಿದ್ದರೂ ಮುಂಬೈ-CSK ಎರಡು ಬಾರಿ ಮುಖಾಮುಖಿಯಾಗಲು ಇದುವೇ ಕಾರಣ..!
IPL 2022: ಮಾರ್ಚ್ 26 ರಿಂದ ಶುರುವಾಗಲಿರುವ ಲೀಗ್ ಹಂತದ ಒಟ್ಟು 70 ಪಂದ್ಯಗಳನ್ನು ಮುಂಬೈ ಹಾಗೂ ಪುಣೆಯ 4 ಸ್ಟೇಡಿಯಂಗಳಲ್ಲಿ ಆಡಲಾಗುತ್ತದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ನಡೆಯಲಿದೆ.

10 ತಂಡಗಳು…74 ಪಂದ್ಯಗಳು…4 ಸ್ಟೇಡಿಯಂ…ಹೌದು, ಈ ಬಾರಿಯ ಐಪಿಎಲ್ ರೌಂಡ್ ರಾಬಿನ್ ಫಾರ್ಮಾಟ್ನಲ್ಲಿ ನಡೆಯಲಿದೆ. ಹೀಗಾಗಿ 10 ತಂಡಗಳನ್ನು ಬಿಸಿಸಿಐ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆದರೆ ಈ ಗುಂಪುಗಳ ವಿಂಗಡನೆಗೂ ಬಿಸಿಸಿಐ ವಿಶೇಷ ಸೂತ್ರವನ್ನು ಪಾಲಿಸಿದೆ. ಅದರಂತೆ ಗ್ರೂಪ್- A ನ ಅಗ್ರ ತಂಡವಾಗಿ ಮುಂಬೈ ಇಂಡಿಯನ್ಸ್ ಅನ್ನು ಆಯ್ಕೆ ಮಾಡಿಕೊಂಡಿದೆ. ಮತ್ತೊಂದೆಡೆ ಗ್ರೂಪ್- Bನ ಅಗ್ರ ತಂಡವಾಗಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಆಯ್ಕೆ ಮಾಡಿದೆ. ಈ ಎರಡು ತಂಡಗಳನ್ನು ಅಗ್ರ ತಂಡವಾಗಿ ಆಯ್ಕೆ ಮಾಡಲು ಮುಖ್ಯ ಕಾರಣ, ಐಪಿಎಲ್ನಲ್ಲಿನ ಉಭಯ ತಂಡಗಳ ಪ್ರದರ್ಶನ.
ಏಕೆಂದರೆ ಮುಂಬೈ ಇಂಡಿಯನ್ಸ್ ಇದುವರೆಗೆ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಹೀಗಾಗಿ ಈ ಎರಡೂ ತಂಡಗಳನ್ನು ಬೇರೆ ಬೇರೆ ಗ್ರೂಪ್ಗಳಲ್ಲಿ ಅಗ್ರ ತಂಡವಾಗಿ ಆಯ್ಕೆ ಮಾಡಲಾಗಿದೆ. ವಿಶೇಷ ಎಂದರೆ ಈ ಎರಡೂ ತಂಡಗಳು ಬೇರೆ ಬೇರೆ ಗ್ರೂಪ್ನಲ್ಲಿದ್ದರೂ ಎರಡು ಬಾರಿ ಮುಖಾಮುಖಿಯಾಗಲಿದೆ.
ರೌಂಡ್ ರಾಬಿನ್ ಫಾರ್ಮಾಟ್ ಮೂಲಕ ಈ ಬಾರಿ ಪ್ರತಿ ತಂಡಗಳು ತನ್ನದೇ ಗ್ರೂಪ್ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಹಾಗೆಯೇ ಮತ್ತೊಂದು ಗ್ರೂಪ್ನಲ್ಲಿರುವ 4 ತಂಡಗಳ ತಂಡಗಳ ವಿರುದ್ದ ತಲಾ ಒಂದು ಪಂದ್ಯ ಹಾಗೂ ಒಂದು ತಂಡದ ವಿರುದ್ದ 2 ಪಂದ್ಯಗಳನ್ನು ಆಡಲಿದೆ. ಅದರಂತೆ ಮುಂಬೈ ಇಂಡಿಯನ್ಸ್ ತಂಡವು ಮತ್ತೊಂದು ಗ್ರೂಪ್ನಲ್ಲಿರುವ ಸಿಎಸ್ಕೆ ವಿರುದ್ದ 2 ಪಂದ್ಯಗಳನ್ನು ಆಡಲಿದೆ. ಇಲ್ಲೂ ಕೂಡ ಬಿಸಿಸಿಐ ಬಲಿಷ್ಠ ತಂಡಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ವಿರುದ್ದ ಗ್ರೂಪ್ನಲ್ಲಿರುವ ತಂಡಗಳಿಗೆ 2 ಪಂದ್ಯಗಳನ್ನು ನೀಡಿದೆ. ಅದರಂತೆ 5 ಬಾರಿಯ ಚಾಂಪಿಯನ್ ರೋಹಿತ್ ಪಡೆ, 4 ಬಾರಿ ಚಾಂಪಿಯನ್ ಧೋನಿ ಪಡೆ ವಿರುದ್ದ 2 ಪಂದ್ಯಗಳನ್ನು ಆಡಲಿದೆ. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಮತ್ತಷ್ಟು ರೋಚಕತೆ ಸೃಷ್ಟಿಸಲು ಮುಂದಾಗಿದೆ.
ಮಾರ್ಚ್ 26 ರಿಂದ ಶುರುವಾಗಲಿರುವ ಲೀಗ್ ಹಂತದ ಒಟ್ಟು 70 ಪಂದ್ಯಗಳನ್ನು ಮುಂಬೈ ಹಾಗೂ ಪುಣೆಯ 4 ಸ್ಟೇಡಿಯಂಗಳಲ್ಲಿ ಆಡಲಾಗುತ್ತದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ನಡೆಯಲಿದೆ. ಹಾಗೆಯೇ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 15 ಪಂದ್ಯಗಳನ್ನು ಆಡಲಾಗುತ್ತದೆ. ಇನ್ನು ಪ್ಲೇ ಆಫ್ ಪಂದ್ಯಗಳು ಅಹಮದಾಬಾದ್ನಲ್ಲಿ ನಡೆಸುವ ಸಾಧ್ಯತೆಯಿದ್ದು, ಅದರಂತೆ ಮೇ 29 ರಂದು ಫೈನಲ್ ಪಂದ್ಯ ಜರಗುಲಿದೆ.
ಗ್ರೂಪ್- A ತಂಡಗಳು:
ಮುಂಬೈ ಇಂಡಿಯನ್ಸ್
ಕೊಲ್ಕತ್ತಾ ನೈಟ್ ರೈಡರ್ಸ್
ರಾಜಸ್ಥಾನ್ ರಾಯಲ್ಸ್
ಡೆಲ್ಲಿ ಕ್ಯಾಪಿಟಲ್ಸ್
ಲಕ್ನೋ ಸೂಪರ್ ಜೈಂಟ್ಸ್
ಗ್ರೂಪ್- B ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಪಂಜಾಬ್ ಕಿಂಗ್ಸ್
ಸನ್ರೈಸರ್ಸ್ ಹೈದರಾಬಾದ್
ಗುಜರಾತ್ ಟೈಟನ್ಸ್
ಇದನ್ನೂ ಓದಿ: IPL 2022 format explained: 2 ಗುಂಪು, 70 ಪಂದ್ಯಗಳು: ಹೇಗಿರಲಿದೆ IPL 2022 ಟೂರ್ನಿ
ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ
ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!
(Why CSK, Mumbai Indians will meet twice in IPL 2022 despite being in different group)