ವೆಸ್ಟ್ ಇಂಡೀಸ್ ಆಟಗಾರರ ಜೇಬಿಗೆ ಕತ್ತರಿ ಬಿದ್ದಿದೆ. ವಾಸ್ತವವಾಗಿ, ಭಾರತ ವಿರುದ್ಧದ ಮೊದಲ T20 ಪಂದ್ಯದಲ್ಲಿ (first T20I against India) ವೆಸ್ಟ್ ಇಂಡೀಸ್ ತಂಡವು ಸೋಲನ್ನು ಎದುರಿಸಿದ್ದು ಮಾತ್ರವಲ್ಲದೆ, ಅವರ ನಿಧಾನಗತಿಯ ಓವರಿಗಾಗಿ ದಂಡವನ್ನೂ ಸಹ ವಿಧಿಸಲಾಗಿದೆ. ನಿಗದಿತ ಸಮಯದಲ್ಲಿ ಒಂದು ಓವರ್ ಕಡಿಮೆ ಮಾಡಿದ್ದಕ್ಕಾಗಿ (slow over rate) ವೆಸ್ಟ್ ಇಂಡೀಸ್ ತಂಡಕ್ಕೆ ದಂಡ ವಿಧಿಸಲಾಗಿದೆ. ಇದರ ಅಡಿಯಲ್ಲಿ, ಅವರ ಪಂದ್ಯದ ಶುಲ್ಕವನ್ನು ಶೇಕಡಾ 20 ರಷ್ಟು ಕಡಿತಗೊಳಿಸಲಾಗಿದೆ. ವೆಸ್ಟ್ ಇಂಡೀಸ್ ತಂಡ ಟ್ರಿನಿಡಾಡ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದ ನಂತರ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಈ ಕ್ರಮ ಕೈಗೊಂಡಿದ್ದಾರೆ. ICC ನೀತಿ ಸಂಹಿತೆಯ ಸೆಕ್ಷನ್ 2.22 ರಲ್ಲಿ ತಂಡವು ನಿಧಾನಗತಿಯ ಓವರಿನಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಪಂದ್ಯ ಶುಲ್ಕದಲ್ಲಿ 20 ಪ್ರತಿಶತದಷ್ಟು ಕಡಿತವನ್ನು ಉಲ್ಲೇಖಿಸುತ್ತದೆ.
ತಪ್ಪನ್ನು ಒಪ್ಪಿಕೊಂಡ ನಿಕೋಲಸ್ ಪೂರನ್
ಸ್ಲೋ ಓವರ್ ರೇಟ್ ಬಗ್ಗೆ ಆನ್ ಫೀಲ್ಡ್ ಅಂಪೈರ್ ದೂರು ದಾಖಲಿಸಿದ್ದರು. ಅಲ್ಲದೆ ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಸ್ಲೋ ಓವರ್ ರೇಟ್‌ಗೆ ಸಂಬಂಧಿಸಿದಂತೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಈಗ ಈ ವಿಷಯದಲ್ಲಿ ಹೆಚ್ಚಿನ ವಿಚಾರಣೆ ಅಥವಾ ಕ್ರಮ ಅಗತ್ಯವಿಲ್ಲ ಎಂದು ಮ್ಯಾಚ್ ರೆಫರಿ ತಿಳಿಸಿದ್ದಾರೆ.
ಮೊದಲ ಟಿ20ಯಲ್ಲಿ ಭಾರತಕ್ಕೆ 68 ರನ್‌ಗಳ ಜಯ
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಟಿ20 ಪಂದ್ಯಗಳ ಸರಣಿಯ ಎರಡನೇ ಪಂದ್ಯ ಆಗಸ್ಟ್ 1 ರಂದು ನಡೆಯಲಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 68 ರನ್‌ಗಳ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ 64 ರನ್‌ಗಳ ಸಾಟಿಯಿಲ್ಲದ ಇನ್ನಿಂಗ್ಸ್ ಆಡಿದ್ದರು. ರೋಹಿತ್ ಹೊರತಾಗಿ, ದಿನೇಶ್ ಕಾರ್ತಿಕ್ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 41 ರನ್ ಗಳಿಸಿದರು.
ಮೊದಲ ಟಿ20 ಪಂದ್ಯದಲ್ಲಿ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 190 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡ ಅರ್ಷದೀಪ್ ಸಿಂಗ್, ರವಿಚಂದ್ರನ್ ಅಶ್ವಿನ್ ಮತ್ತು ರವಿ ಬಿಷ್ಣೋಯ್ ಅವರ ಬಲಿಷ್ಠ ಬೌಲಿಂಗ್‌ನ ಮುಂದೆ ಕೇವಲ 122 ರನ್‌ಗಳಿಗೆ ಆಲೌಟ್ ಆಗಿ ಪಂದ್ಯವನ್ನು ಕಳೆದುಕೊಂಡಿತು. ಈ ಮೂಲಕ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿತ್ತು.
Published On - 2:59 pm, Sun, 31 July 22