ಪಾಕ್ ಪಡೆಯನ್ನು ಮಕಾಡೆ ಮಲಗಿಸಿದ ವೆಸ್ಟ್ ಇಂಡೀಸ್

West Indies vs Pakistan, 1st Test: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಹೀನಾಯ ಸೋಲನುಭವಿಸಿದೆ. ಟ್ರಿನಿಡಾಡ್‌ನ ತಾರೂಬಾದಲ್ಲಿ ನಡೆದ ಈ ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ 211 ರನ್‌ಗಳ ಸುಲಭ ಗೆಲುವಿನ ಗುರಿ ಪಡೆದಿದ್ದ ಪಾಕಿಸ್ತಾನ್ ತಂಡವು ಕೆರಿಬಿಯನ್ ವೇಗಿಗಳ ದರ್ಬಾರ್‌ಗೆ ತತ್ತರಿಸಿ ಕೇವಲ 120 ರನ್‌ಗಳಿಗೆ ಧೂಳೀಪಟವಾಯಿತು.

ಪಾಕ್ ಪಡೆಯನ್ನು ಮಕಾಡೆ ಮಲಗಿಸಿದ ವೆಸ್ಟ್ ಇಂಡೀಸ್
West Indies
Image Credit source: AFP

Updated on: Jul 29, 2026 | 8:54 AM

ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭರ್ಜರಿ ಜಯ ಸಾಧಿಸಿದೆ. ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಮೊದಲ ಇನಿಂಗ್ಸ್:

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರ ಶಾಯ್ ಹೋಪ್ (92) ಮತ್ತು ಕವೆಮ್ ಹಾಡ್ಜ್ (84) ಆಕರ್ಷಕ ಅರ್ಧಶತಕ ಬಾರಿಸಿದರು. ಈ ಹಾಫ್ ಸೆಂಚುರಿಗಳ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ 311 ರನ್​ಗಳಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಪಾಕಿಸ್ತಾನ್ ತಂಡದ ಪರ ಮಾಜಿ ನಾಯಕ ಶಾನ್ ಮಸೂದ್ (109) ಭರ್ಜರಿ ಶತಕ (109) ಸಿಡಿಸಿ ಮಿಂಚಿದ್ದರು. ಆದರೆ ವೆಸ್ಟ್ ಇಂಡೀಸ್‌ನ ಜಸ್ಟಿನ್ ಗ್ರೀವ್ಸ್ ಕೇವಲ 27 ರನ್ ನೀಡಿ 5 ವಿಕೆಟ್ ಕಬಳಿಸಿದ ಪರಿಣಾಮ ಪಾಕ್ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ 282 ರನ್‌ಗಳಿಗೆ ಆಲೌಟ್ ಆಯಿತು.

ದ್ವಿತೀಯ ಇನಿಂಗ್ಸ್​:

ಕೇವಲ 29 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್, ಪಾಕಿಸ್ತಾನದ ವೇಗಿ ಮೊಹಮ್ಮದ್ ಅಬ್ಬಾಸ್ (5/22) ಅವರ ಸ್ವಿಂಗ್ ಬೌಲಿಂಗ್‌ಗೆ ತತ್ತರಿಸಿ ಕೇವಲ 181 ರನ್‌ಗಳಿಗೆ ಸರ್ವಪತನ ಕಂಡಿತು.

ಕೊನೆಯ ಇನಿಂಗ್ಸ್​ನಲ್ಲಿ 211 ರನ್​ಗಳ ಸುಲಭ ಗುರಿ ಪಡೆದ ಪಾಕಿಸ್ತಾನ್ ಪರ ನಾಯಕ ಬಾಬರ್ ಆಝಂ ಅಜೇಯ 58 ರನ್ ಬಾರಿಸಿದರು. ಆದರೆ ಮತ್ತೊಂದೆಡೆ ಪಾಕ್ ಬ್ಯಾಟರ್​ಗಳ ಪೆವಿಲಿಯನ್ ಪರೇಡ್ ನಡೆಸಿದ್ದರು. ಪರಿಣಾಮ ಪಾಕ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 120 ರನ್​ಗಳಿಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಪರ ಮಿಂಚಿನ ದಾಳಿ ಸಂಘಟಿಸಿದ ಜೇಡನ್ ಸೀಲ್ಸ್ ಕೇವಲ 20 ರನ್ ನೀಡಿ 5 ವಿಕೆಟ್ ಕಬಳಿಸಿದರು.

ವೆಸ್ಟ್ ಇಂಡೀಸ್​ಗೆ ಅಮೋಘ ಜಯ:

211 ರನ್​ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವನ್ನು 120 ರನ್​ಗಳಿಗೆ ಆಲೌಟ್ ಮಾಡುವ ಮೂಲಕ ವೆಸ್ಟ್ ಇಂಡೀಸ್ ತಂಡವು 90 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ವಿಂಡೀಸ್ ಪಡೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಪಾಕಿಸ್ತಾನ್ ಪ್ಲೇಯಿಂಗ್ 11: ಅಝಾನ್ ಅವೈಸ್ , ಇಮಾಮ್-ಉಲ್-ಹಕ್ , ಶಾನ್ ಮಸೂದ್ , ಬಾಬರ್ ಆಝಂ (ನಾಯಕ) ,
ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಅಘಾ , ಅಮೀರ್ ಜಮಾಲ್ , ಅಲಿ ಉಸ್ಮಾನ್ , ಖುರ್ರಂ ಶಹಝಾದ್ , ಮೊಹಮ್ಮದ್ ಅಲಿ , ಮೊಹಮ್ಮದ್ ಅಬ್ಬಾಸ್.

ಇದನ್ನೂ ಓದಿ: ಅಬ್ಬರ ಸಿಡಿಲಬ್ಬರ… ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ಸ್ಮೃತಿ ಮಂಧಾನ!

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11:  ಬ್ರಾಂಡನ್ ಕಿಂಗ್ , ತೇಜ್​ನರೈನ್ ಚಂದ್ರಪಾಲ್ , ಕವೆಮ್ ಹಾಡ್ಜ್ , ಶಾಯ್ ಹೋಪ್ (ವಿಕೆಟ್ ಕೀಪರ್ ), ಅಮೀರ್ ಜಾಂಗೊ,  ಜಸ್ಟಿನ್ ಗ್ರೀವ್ಸ್ , ರೋಸ್ಟನ್ ಚೇಸ್ (ನಾಯಕ) , ಕೆಮರ್ ರೋಚ್ , ಜೋಮೆಲ್ ವಾರಿಕನ್ , ಶಮರ್ ಜೋಸೆಫ್ , ಜೇಡನ್ ಸೀಲ್ಸ್.

 

Loading...
Unable to load recommendations.
Follow Us