ಭಾರತ ವನಿತಾ ತಂಡ ( Indian women’s cricket ) ಹಾಗೂ ಥಾಯ್ಲೆಂಡ್ ವನಿತಾ ತಂಡಗಳ ನಡುವೆ ನಡೆದ ಮಹಿಳಾ ಏಷ್ಯಾಕಪ್‌ನ (Women’s Asia Cup 2022) ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಪಡೆ ಸುಲಭ ಜಯ ಸಾಧಿಸುವುದರೊಂದಿಗೆ ಮಹಿಳಾ ಏಷ್ಯಾಕಪ್ನಲ್ಲಿ ಫೈನಲ್ಗೇರಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (Shefali Verma) 42 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿ ತಂಡದ ನಾಯಕಿ ಹರ್ಮನ್‌ಪ್ರೀತ್ 36 ರನ್ ಗಳಿಸಿದರೆ, ಜಮೀಮಾ 27 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಥಾಯ್ಲೆಂಡ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಅಂತಿಮವಾಗಿ ಥಾಯ್ ಪಡೆ 20 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡು 74 ರನ್ ಗಳಿಸಲಷ್ಟೇ ಶಕ್ತವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 148 ರನ್ ಗಳಿಸಿತ್ತು. ಬೌಲರ್ ಸ್ನೇಹಿ ಪಿಚ್‌ನಲ್ಲಿ ಭಾರತದ ಬ್ಯಾಟರ್ಗಳು ಮುಕ್ತವಾಗಿ ಆಡುವುದು ಕಷ್ಟಕರವಾಗಿತ್ತು. ನಂತರ ಭಾರತೀಯ ಬೌಲರ್‌ಗಳು ಕೂಡ ಇದರ ಲಾಭ ಪಡೆದು ಥಾಯ್ಲೆಂಡ್ ತಂಡವನ್ನು ಕೇವಲ 74 ರನ್‌ಗಳಿಗೆ ಸೀಮಿತಗೊಳಿಸಿ 74 ರನ್‌ಗಳ ಜಯ ಸಾಧಿಸಿದರು.
???? ??? ????? ? ?
A superb bowling performance from #TeamIndia to beat Thailand by 7️⃣4️⃣ runs in the #AsiaCup2022 Semi-Final ?? #INDvTHAI
Scorecard ▶️ https://t.co/pmSDoClWJi
? Courtesy: Asian Cricket Council pic.twitter.com/NMTJanG1sc
— BCCI Women (@BCCIWomen) October 13, 2022
ಆರಂಭದಲ್ಲೇ ಮಂಧಾನ ವಿಕೆಟ್ ಪತನ
ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಸ್ಫೋಟಕ ಓಪನರ್ ಸ್ಮೃತಿ ಮಂಧಾನ ಕೇವಲ 13 ರನ್ ಗಳಿಸಿ ಔಟಾದರು. ಇದಾದ ನಂತರ ಜೆಮಿಮಾ ರಾಡ್ರಿಗಸ್ 26 ಎಸೆತಗಳಲ್ಲಿ ಕೇವಲ 27 ರನ್‌ಗಳಿಸಿ ತಮ್ಮ ಇನ್ನಿಂಗ್ಸ್ ಮುಗಿಸಿದರು. ಮತ್ತೊಂದೆಡೆ, ಶಫಾಲಿ ವರ್ಮಾ ಉತ್ತಮವಾಗಿ ಬ್ಯಾಟಿಂಗ್ ಮಾಡಿ, 5 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು. ಇವರಲ್ಲದೆ ತಂಡದ ನಾಯಕಿ ಹರ್ಮನ್‌ಪ್ರೀತ್ 30 ಎಸೆತಗಳಲ್ಲಿ 36 ರನ್ ಗಳಿಸಿದರು. ಆದರೆ ಅಂತಿಮ ಓವರ್‌ಗಳಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಕೌರ್, ಈ ಪಂದ್ಯದಲ್ಲಿ ವೇಗವಾಗಿ ರನ್ಗಳಿಸುವಲ್ಲಿ ವಿಫಲರಾದರು.
ಬೌಲರ್‌ಗಳ ಅದ್ಭುತ ಪ್ರದರ್ಶನ
ಭಾರತೀಯ ಬೌಲರ್‌ಗಳು ಸ್ಪಿನ್ ಸ್ನೇಹಿ ವಿಕೆಟ್‌ನಲ್ಲಿ ಥಾಯ್ಲೆಂಡ್ ತಂಡಕ್ಕೆ ನೆಮ್ಮದಿಯಾಗಿ ಉಸಿರಾಡುವುದಕ್ಕೂ ಬಿಡಲಿಲ್ಲ. ಪವರ್‌ಪ್ಲೇಯಲ್ಲಿ ದೀಪ್ತಿ ಶರ್ಮಾ ಅದ್ಭುತ ಬೌಲಿಂಗ್ ಮಾಡಿ, 4 ಓವರ್‌ಗಳಲ್ಲಿ ಕೇವಲ 7 ರನ್ ನೀಡಿ 3 ವಿಕೆಟ್ ಪಡೆದರು. ಇವರೊಂದಿಗೆ ರಾಜೇಶ್ವರಿ ಗಾಯಕ್ವಾಡ್ ಕೂಡ ಕೇವಲ 10 ರನ್ ನೀಡಿ 2 ವಿಕೆಟ್ ಪಡೆದರು. ರೇಣುಕಾ ಸಿಂಗ್, ಸ್ನೇಹ ರಾಣಾ ಕೂಡ ಥಾಯ್ಲೆಂಡ್‌ಗೆ ಮುಕ್ತವಾಗಿ ಆಡಲು ಬಿಡಲಿಲ್ಲ. ಅಂತಿಮವಾಗಿ ಥಾಯ್ಲೆಂಡ್ ತಂಡ 20 ಓವರ್‌ಗಳಲ್ಲಿ 74 ರನ್ ಗಳಿಸಲಷ್ಟೇ ಶಕ್ತವಾಗಿ 9 ವಿಕೆಟ್‌ಗಳನ್ನು ಕಳೆದುಕೊಂಡಿತು.
Published On - 11:25 am, Thu, 13 October 22