AUS vs ENG: ಅಬ್ಬಾ… ಎಂಥಾ ಫೀಲ್ಡಿಂಗ್..! ಸ್ಟೋಕ್ಸ್ ಚಿರತೆ ಜಿಗಿತಕ್ಕೆ ಮೈದಾನವೇ ಸ್ಟನ್; ವಿಡಿಯೋ ನೋಡಿ
Ben Stokes : ಬೌಂಡರಿ ಲೈನ್ನಲ್ಲೇ ನಿಂತಿದ್ದ ಸ್ಟೋಕ್ಸ್ ಗಾಳಿಯಲ್ಲಿ ಜಿಗಿದು, ಒಂದೇ ಕೈಯಿಂದ ಅದ್ಭುತ ಫೀಲ್ಡಿಂಗ್ ಮಾಡಿ ಚೆಂಡನ್ನು ಬೌಂಡರಿ ದಾಟದಂತೆ ನಿಲ್ಲಿಸಿದರು.
ಹಾಲಿ ಟಿ20 ವಿಶ್ವಕಪ್ (T20 World Cup) ಚಾಂಪಿಯನ್ ಆಸ್ಟ್ರೇಲಿಯವನ್ನು ಎರಡನೇ ಟಿ20 ಪಂದ್ಯದಲ್ಲಿ 8 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್, ಒಂದು ಪಂದ್ಯಕ್ಕೂ ಮುನ್ನ ಟಿ20 ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಬುಧವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆಸ್ಟ್ರೇಲಿಯಾಕ್ಕೆ 179 ರನ್ಗಳ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ಆತಿಥೇಯರು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲಷ್ಟೇ ಶಕ್ತರಾದರು. ಇಂಗ್ಲೆಂಡ್ ಗೆಲುವಿನಲ್ಲಿ ಡೇವಿಡ್ ಮಲಾನ್ (David Malan) ಮತ್ತು ಸ್ಯಾಮ್ ಕರನ್ (Sam Curran) ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಕೊಡುಗೆ ನೀಡಿದರೆ, ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಕೂಡ ತಮ್ಮ ಅದ್ಭುತ ಫೀಲ್ಡಿಂಗ್‌ನಿಂದ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ.
ಬ್ಯಾಟಿಂಗ್ನಲ್ಲಿ ಡೇವಿಡ್ ಮಲಾನ್ 49 ಎಸೆತಗಳಲ್ಲಿ 82 ರನ್ ಗಳಿಸಿದರೆ, ಕರನ್ ಬೌಲಿಂಗ್ನಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದರು. ಬ್ಯಾಟಿಂಗ್ನಲ್ಲಿ ಪ್ರಭಾವ ಬೀರದ ಬೆನ್ ಸ್ಟೋಕ್ಸ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಬೆನ್ ಸ್ಟೋಕ್ಸ್ ಈ ಪಂದ್ಯದಲ್ಲಿ ಮಾಡಿದ ಅದ್ಭುತ ಫೀಲ್ಡಿಂಗ್ ಪಂದ್ಯದ ಪ್ರಮುಖ ಹೈಲೇಟ್ಸ್ ಆಯಿತು. ಸಿಕ್ಸರ್ಗೆ ಹೋಗುತ್ತಿದ ಚೆಂಡನ್ನು ಚಿರೆತೆಯಂತೆ ಎಗರಿ ತಡೆಯುವ ಮೂಲಕ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ಟೋಕ್ಸ್ ಗಾಳಿಯಲ್ಲಿ ಹಾರಿ ಮಾಡಿದ ಚಮತ್ಕಾರವನ್ನು ಕಂಡು ಎಲ್ಲರೂ ಆಶ್ಚರ್ಯ ಚಕಿತರಾದರೆ, ಈಗ ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಒಂದೇ ಕೈನಲ್ಲಿ ಚಮತ್ಕಾರ
ವಾಸ್ತವವಾಗಿ, 12 ನೇ ಓವರ್‌ನಲ್ಲಿ ಸ್ಯಾಮ್ ಕರನ್ ಎಸೆತದಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಷ್ ದೊಡ್ಡ ಹೊಡೆತವನ್ನು ಆಡಿದರು. ಚೆಂಡು ಬೌಂಡರಿ ದಾಟುವುದು ಪಕ್ಕ ಎಂದು ಎಲ್ಲರೂ ಬಾವಿಸಿದ್ದರು. ಆದರೆ ಬೌಂಡರಿ ಲೈನ್ನಲ್ಲೇ ನಿಂತಿದ್ದ ಸ್ಟೋಕ್ಸ್ ಗಾಳಿಯಲ್ಲಿ ಜಿಗಿದು, ಒಂದೇ ಕೈಯಿಂದ ಅದ್ಭುತ ಫೀಲ್ಡಿಂಗ್ ಮಾಡಿ ಚೆಂಡನ್ನು ಬೌಂಡರಿ ದಾಟದಂತೆ ನಿಲ್ಲಿಸಿದರು. ತಾನು ಬೌಂಡರಿ ಲೈನ್ ದಾಟುವ ಮೊದಲು ಸ್ಟೋಕ್ಸ್ ಸ್ವತಃ ಚೆಂಡನ್ನು ಒಳಗೆ ಎಸೆದರು. ಇಲ್ಲಿ ಕ್ಯಾಚ್ ಹಿಡಿಯಲು ಸಾಧ್ಯವಾಗದಿದ್ದರೂ, ಅವರ ಪ್ರಯತ್ನದಿಂದ ತಂಡಕ್ಕೆ ಪ್ರಮುಖ 6 ರನ್‌ಗಳನ್ನು ಸೇವ್ ಆದವು.
Simply outstanding! Ben Stokes saves six with some acrobatics on the rope! #AUSvENG #PlayOfTheDay | #Dettol pic.twitter.com/5vmFRobfif
— cricket.com.au (@cricketcomau) October 12, 2022
ಪಂದ್ಯ ಹೀಗಿತ್ತು
ಪಂದ್ಯದ ಕುರಿತು ಮಾತನಾಡುವುದಾದರೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 7 ವಿಕೆಟ್‌ಗೆ 178 ರನ್ ಗಳಿಸಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮಲಾನ್ 49 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 82 ರನ್ ಗಳಿಸಿದರು. ಅವರನ್ನು ಹೊರತುಪಡಿಸಿ, ಮೊಯಿನ್ ಅಲಿ 27 ಎಸೆತಗಳಲ್ಲಿ 44 ರನ್ ಗಳಿಸಿದರು. ಆದಾಗ್ಯೂ, ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಲು ಸಾಧ್ಯವಾಗದೆ ಕೇವಲ 7 ರನ್ ಗಳಿಸಿ ಔಟಾದರು.
ಕಳಪೆ ಬ್ಯಾಟಿಂಗ್ಗೆ ಸೋಲುಂಡ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಪರ ಬೌಲಿಂಗ್ನಲ್ಲಿ ಮಾರಕ ದಾಳಿ ನಡೆಸಿದ ಮಾರ್ಕಸ್ ಸ್ಟೊಯಿನಿಸ್ 34 ರನ್ ನೀಡಿ 3 ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಮಾನ ಉಳಿಸಿದ ಮಾರ್ಷ್ ಕೇವಲ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅತ್ಯಧಿಕ 45 ರನ್ ಗಳಿಸಿದರು. ಅದೇ ಸಮಯದಲ್ಲಿ ಟಿಮ್ ಡೇವಿಡ್ 23 ಎಸೆತಗಳಲ್ಲಿ 40 ರನ್ ಗಳಿಸಿ ತಂಡವನ್ನು ಮುಜುಗರದ ಸೋಲಿನಿಂದ ಪಾರುಮಾಡಿದರು.
Published On - 10:07 am, Thu, 13 October 22