AUS vs ENG: ಟಿ20 ವಿಶ್ವಕಪ್​ಗೂ ಮುನ್ನ ಕಾಂಗರೂಗಳಿಗೆ ತವರಿನಲ್ಲೇ ಮುಖಭಂಗ; ಸರಣಿ ಗೆದ್ದ ಇಂಗ್ಲೆಂಡ್

AUS vs ENG: ಎರಡನೇ ಟಿ20 ಪಂದ್ಯವನ್ನು 8 ರನ್‌ಗಳಿಂದ ಗೆಲ್ಲುವ ಮೂಲಕ ಆಂಗ್ಲರು ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿದ್ದಾರೆ. ಈ ಮೊದಲು ನಡೆದಿದ್ದ ಮೊದಲ ಪಂದ್ಯವನ್ನು ಸಹ 8 ರನ್‌ಗಳ ಅಂತರದಿಂದ ಗೆಲ್ಲುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿತ್ತು.

AUS vs ENG: ಟಿ20 ವಿಶ್ವಕಪ್​ಗೂ ಮುನ್ನ ಕಾಂಗರೂಗಳಿಗೆ ತವರಿನಲ್ಲೇ ಮುಖಭಂಗ; ಸರಣಿ ಗೆದ್ದ ಇಂಗ್ಲೆಂಡ್
ಇಂಗ್ಲೆಂಡಿನ ಟಿ20 ವಿಶ್ವಕಪ್ ತಂಡದಿಂದ ಜಾನಿ ಬೈರ್‌ಸ್ಟೋವ್ ಹೊರಬಿದ್ದಿದ್ದರೆ, ಅವರ ಜಾಗಕ್ಕೆ ಅಲೆಕ್ಸ್ ಹೇಲ್ಸ್ ಆಯ್ಕೆಯಾಗಿದ್ದಾರೆ.
Follow us
TV9 Web
| Updated By: ಪೃಥ್ವಿಶಂಕರ

Updated on:Oct 13, 2022 | 9:59 AM

ಟಿ20 ವಿಶ್ವಕಪ್‌ಗೂ (T20 World Cup) ಮುನ್ನ ಕಾಂಗರೂಗಳು ತನ್ನ ತವರು ನೆಲದಲ್ಲೇ ಮುಖಭಂಗ ಅನುಭವಿಸಿವೆ. ಇಂಗ್ಲೆಂಡ್ ವಿರುದ್ಧ ನಡೆದ 3 ಟಿ20 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ (Australia) ಕಳೆದುಕೊಂಡಿದೆ. ಉಭಯ ತಂಡಗಳ ನಡುವೆ ಕ್ಯಾನ್‌ಬೆರಾದಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು 8 ರನ್‌ಗಳಿಂದ ಗೆಲ್ಲುವ ಮೂಲಕ ಆಂಗ್ಲರು ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿದ್ದಾರೆ. ಈ ಮೊದಲು ನಡೆದಿದ್ದ ಮೊದಲ ಪಂದ್ಯವನ್ನು ಸಹ 8 ರನ್‌ಗಳ ಅಂತರದಿಂದ ಗೆಲ್ಲುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿತ್ತು. ಎರಡನೇ ಟಿ20 ಪಂದ್ಯದ ಕುರಿತು ಮಾತನಾಡುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆತಿಥೇಯರಿಗೆ 179 ರನ್‌ಗಳ ಗುರಿಯನ್ನು ನೀಡಿತು.

ಉತ್ತರವಾಗಿ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 ರನ್ ಗಳಿಸಲಷ್ಟೇ ಶಕ್ತವಾಯಿತು. 49 ಎಸೆತಗಳಲ್ಲಿ 82 ರನ್ ಗಳಿಸಿದ ಡೇವಿಡ್ ಮಲಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರ ತಂಡದ ಆರಂಭ ತೀರಾ ಕಳಪೆಯಾಗಿತ್ತು. ಆಸ್ಟ್ರೇಲಿಯಾ ದಾಳಿಯ ಮುಂದೆ ಪ್ರವಾಸಿ ತಂಡ ಕೇವಲ 54 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಬೆನ್ ಸ್ಟೋಕ್ಸ್ ಮತ್ತು ಹ್ಯಾರಿ ಬ್ರೂಕ್ಸ್ ಬೇಗನೇ ಪೆವಿಲಿಯನ್‌ಗೆ ಮರಳಿದರು. ಇದರ ನಂತರ ಡೇವಿಡ್ ಮಲಾನ್ ಮತ್ತು ಮೊಯಿನ್ ಅಲಿ ತಂಡದ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡು ಮೊತ್ತವನ್ನು 146 ರನ್‌ಗಳಿಗೆ ಕೊಂಡೊಯ್ದರು.

ಮಲಾನ್- ಮೊಯಿನ್ ಅದ್ಭುತ ಜೊತೆಯಾಟ

146 ರನ್​ ಇದ್ದಾಗ ಮೊಯಿನ್ ಅಲಿ ವಿಕೆಟ್ ರೂಪದಲ್ಲಿ ಇಂಗ್ಲೆಂಡ್​ಗೆ ಐದನೇ ಆಘಾತ ಎದುರಾಯಿತು. ಈ ವಿಕೆಟ್ ಬಳಿಕ ಮಲಾನ್​ಗೆ ಬಾಲಂಗೋಚಿಗಳಿಂದ ಯಾವುದೇ ಬೆಂಬಲ ಸಿಗದ ಕಾರಣ ವಿಕೆಟ್ ಪತನದ ಪ್ರಕ್ರಿಯೆ ಮುಂದುವರಿಯಿತ್ತು. ಮಲಾನ್ ರೂಪದಲ್ಲಿ ಇಂಗ್ಲೆಂಡ್ 171 ರನ್‌ಗಳಿಗೆ 7ನೇ ಹೊಡೆತವನ್ನು ಅನುಭವಿಸಿತು. 82 ರನ್​ಗಳ ಬಿರುಸಿನ ಇನಿಂಗ್ಸ್ ಆಡಿದ ಮಲಾನ್, ತಮ್ಮ ಇನ್ನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಆಸ್ಟ್ರೇಲಿಯಾ ಪರ ಮಾರ್ಕಸ್ ಸ್ಟೊಯಿನಿಸ್ 34 ರನ್ ನೀಡಿ 3 ವಿಕೆಟ್ ಪಡೆದರೆ, ಆಡಮ್ ಝಂಪಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಆಸೀಸ್ ಆರಂಭವೂ ಕಳಪೆಯಾಗಿತ್ತು

ಇಂಗ್ಲೆಂಡ್ ನೀಡಿದ ಗುರಿಗೆ ಉತ್ತರವಾಗಿ ಆತಿಥೇಯ ಆಸ್ಟ್ರೇಲಿಯಾ ಆರೋನ್ ಫಿಂಚ್, ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ರೂಪದಲ್ಲಿ 51 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಇದರ ನಂತರ, ಮಿಚೆಲ್ ಮಾರ್ಷ್ 45 ರನ್ ಗಳಿಸಿ ಇನ್ನಿಂಗ್ಸ್ ಅನ್ನು ನಿಭಾಯಿಸಲು ಪ್ರಯತ್ನಿಸಿದರು, ಆದರೆ ಅವರಿಗೆ ಇನ್ನೊಂದು ತುದಿಯಲ್ಲಿ ಬಲವಾದ ಬೆಂಬಲ ಸಿಗಲಿಲ್ಲ.

ಸ್ಯಾಮ್ ಕರನ್ ಮಾರಕ ದಾಳಿ

ಆ ಬಳಿಕ 91 ರನ್ ಇದ್ದಾಗ ಆಸ್ಟ್ರೇಲಿಯಾಕ್ಕೆ ಸ್ಟೊಯಿನಿಸ್ ರೂಪದಲ್ಲಿ ನಾಲ್ಕನೇ ಹೊಡೆತ ಬಿದ್ದಿತು. ಇದಾದ ನಂತರ ಟಿಮ್ ಡೇವಿಡ್ ಬೆಂಬಲ ಪಡೆದ ಮಾರ್ಷ್, ತಂಡದ ಸ್ಕೋರ್ 114 ರನ್ ಇದ್ದಾಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಮಾರ್ಷ್ ವಿಕೆಟ್ ಬಳಿಕ ಕೊಂಚ ಹೊತ್ತು ಪ್ರತಿರೋಧ ತೋರಿದ ಡೇವಿಡ್ ತಂಡದ ಮೊತ್ತ 145 ರನ್ ಇದ್ದಾಗ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ವೇಡ್ 10 ಮತ್ತು ಪ್ಯಾಟ್ ಕಮ್ಮಿನ್ಸ್ 18 ರನ್ ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್‌ ಪರ ಮಾರಕ ದಾಳಿ ನಡೆಸಿದ ಸ್ಯಾಮ್ ಕರನ್ 25 ರನ್‌ ನೀಡಿ ಪ್ರಮುಖ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

Published On - 9:34 am, Thu, 13 October 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ