World Cup 2025: ಏಕದಿನ ವಿಶ್ವಕಪ್‌ಗೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳು ಪ್ರಕಟ
Women's World Cup 2025: 2025ರ ಮಹಿಳಾ ಏಕದಿನ ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಮ್ಮ ತಂಡಗಳನ್ನು ಘೋಷಿಸಿವೆ. 7 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತನ್ನ ನಾಯಕಿ ಅಲಿಸಾ ಹೀಲಿ ನೇತೃತ್ವದಲ್ಲಿ ಟ್ರೋಫಿ ಗೆಲ್ಲಲು ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ಲಾರಾ ವೋಲ್ವಾರ್ಡ್ಟ್ ವಹಿಸಿದ್ದಾರೆ. ಈ ಎರಡೂ ತಂಡಗಳು 15 ಆಟಗಾರ್ತಿಯರನ್ನು ಆಯ್ಕೆ ಮಾಡಿದ್ದು, ಪಂದ್ಯಾವಳಿಗೆ ಕಾತುರವಾಗಿ ಕಾಯುತ್ತಿವೆ.

2025 ರ ಮಹಿಳಾ ಏಕದಿನ ವಿಶ್ವಕಪ್‌ಗೆ (Women’s Cricket World Cup 2025) ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 30 ರಿಂದ ಭಾರತ ಆಯೋಜಿಸಲಿರುವ ಈ ಪಂದ್ಯಾವಳಿಗೆ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ. 7 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಮತ್ತೊಮ್ಮೆ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಿದ್ಧವಾಗಿದೆ. ಆಸ್ಟ್ರೇಲಿಯಾ ಮಾತ್ರವಲ್ಲದೆ ದಕ್ಷಿಣ ಆಪ್ರಿಕಾ ತಂಡವನ್ನು ಸಹ ಈ ಮೊದಲೇ ಪ್ರಕಟಿಸಲಾಗಿದೆ. ಉಭಯ ತಂಡಗಳು ಈ ವಿಶ್ವ ಸಮರಕ್ಕೆ ತಲಾ 15 ಆಟಗಾರ್ತಿಯರ ತಂಡವನ್ನು ಘೋಷಿಸಿವೆ.
ಆಸ್ಟ್ರೇಲಿಯಾ ತಂಡ ಹೀಗಿದೆ
ಆಸ್ಟ್ರೇಲಿಯಾ ತಂಡದ ನಾಯಕತ್ವ ಅಲಿಸ್ಸಾ ಹೀಲಿ ಅವರ ಕೈಯಲ್ಲಿರಲಿದ್ದು, ಆಯ್ಕೆಯಾಗಿರುವ 15 ಆಟಗಾರ್ತಿಯರಲ್ಲಿ 10 ಆಟಗಾರ್ತಿಯರು 2022 ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿದ್ದರು. ಇದೀಗ ಈ ಎಲ್ಲಾ ಆಟಗಾರ್ತಿಯರು ಮತ್ತೊಂದು ಟ್ರೋಫಿಯನ್ನು ಗೆಲ್ಲುವತ್ತ ದೃಷ್ಟಿ ಹಾಯಿಸಿದ್ದಾರೆ. ಆಸ್ಟ್ರೇಲಿಯಾ ತಂಡವು ಅಕ್ಟೋಬರ್ 1 ರಂದು ಇಂದೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
ಆಸ್ಟ್ರೇಲಿಯಾ ತಂಡ: ಅಲಿಸಾ ಹೀಲಿ (ನಾಯಕಿ), ಡಾರ್ಸಿ ಬ್ರೌನ್, ಆಶ್ಲೇ ಗಾರ್ಡ್ನರ್, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್ (ಉಪನಾಯಕಿ), ಸೋಫಿ ಮೊಲಿನ್ಯೂಕ್ಸ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೋಲ್, ಜಾರ್ಜಿಯಾ ವೇರ್‌ಹ್ಯಾಮ್.
ದಕ್ಷಿಣ ಆಪ್ರಿಕಾ ತಂಡ ಹೀಗಿದೆ
ದಕ್ಷಿಣ ಆಫ್ರಿಕಾ ತಂಡದ ನಾಯಕತ್ವವನ್ನು ಸ್ಟಾರ್ ಬ್ಯಾಟರ್ ಲಾರಾ ವೋಲ್ವಾರ್ಡ್ಟ್‌ಗೆ ಹಸ್ತಾಂತರಿಸಲಾಗಿದೆ. ಅದೇ ಸಮಯದಲ್ಲಿ, 17 ವರ್ಷದ ಕರಾಬೊ ಮೆಸೊ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೆಸೊ ಮೊದಲ ಬಾರಿಗೆ ಸೀನಿಯರ್ ವಿಶ್ವಕಪ್‌ನ ಭಾಗವಾಗಲಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡೇನ್ ವ್ಯಾನ್ ನೀಕೆರ್ಕ್ ಈ ತಂಡದಲ್ಲಿ ಆಯ್ಕೆಯಾಗಿಲ್ಲ. ಡೇನ್ ವ್ಯಾನ್ ನೀಕೆರ್ಕ್ ಇತ್ತೀಚೆಗೆ ತಮ್ಮ ನಿವೃತ್ತಿಯನ್ನು ಹಿಂತೆಗೆದುಕೊಂಡರು. ಅಲ್ಲದೆ ವಿಶ್ವಕಪ್‌ಗಾಗಿ ತಂಡದ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದರು. ಆದರೆ ಅವರಿಗೆ ಮುಖ್ಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ದಕ್ಷಿಣ ಆಫ್ರಿಕಾ ಮಹಿಳಾ ತಂಡ: ಲಾರಾ ವೋಲ್ವಾರ್ಡ್ಟ್ (ನಾಯಕಿ), ಅನ್ನೆಕೆ ಬಾಷ್, ತಾಜ್ಮಿನ್ ಬ್ರಿಟ್ಸ್, ನಾಡಿನ್ ಡಿ ಕ್ಲರ್ಕ್, ಆನ್ನೆರಿ ಡೆರ್ಕ್ಸೆನ್, ಸಿನಾಲೋವಾ ಜಫ್ತಾ, ಮರಿಜಾನೆ ಕಪ್, ಅಯಾಬೊಂಗಾ ಖಾಕಾ, ಮಸಾಬಟಾ ಕ್ಲಾಸ್, ಸುನೆ ಲೂಸ್, ಕರಬೊ ಮಾಸೊ, ನಾನ್ಕುಲುಲೆಕೊ ನೊಗಾ ನೊಕ್ಹು, ಮ್ಲಾಬಾ ಕ್ಲೋಯ್ ಟ್ರಯಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:24 pm, Fri, 5 September 25
