
ನವದೆಹಲಿಯಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2026 ಮೆಗಾ ಹರಾಜಿನಲ್ಲಿ (WPL 2026 Auction) ಒಟ್ಟು ಐದು ತಂಡಗಳು ಬರೋಬ್ಬರಿ 40.8 ಕೋಟಿ ರೂಗಳನ್ನು ಖರ್ಚು ಮಾಡಿ 67 ಆಟಗಾರ್ತಿಯರನ್ನು ಖರೀದಿಸಿವೆ. ಈ ಬಾರಿ ಭಾರತೀಯ ಆಟಗಾರ್ತಿಯರಿಗೆ ಹೆಚ್ಚಿನ ಬೇಡಿಕೆಯಿತ್ತು. ಆದರೆ ಇದರ ಹೊರತಾಗಿಯೂ ಆಶ್ಚರ್ಯಕರವಾಗಿ, ಅನೇಕ ಸ್ಟಾರ್ ಆಟಗಾರ್ತಿಯರು ಮಾರಾಟವಾಗಲಿಲ್ಲ. ಅವರುಗಳಲ್ಲಿ ಪ್ರಮುಖರು ಆಸ್ಟ್ರೇಲಿಯಾದ ಅನುಭವಿ ನಾಯಕಿ ಅಲಿಸಾ ಹೀಲಿ (Alyssa Healy) ಕೂಡ ಒಬ್ಬರು. ಇದಲ್ಲದೆ, ಟೀಂ ಇಂಡಿಯಾ 2025 ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಆಟಗಾರ್ತಿಯೂ ಹರಾಜಾಗದೆ ಉಳಿದರು.
ಈ ಬಾರಿಯ ಮೆಗಾ ಹರಾಜಿನಲ್ಲಿ ಒಟ್ಟು 276 ಆಟಗಾರ್ತಿಯರು ಭಾಗವಹಿಸಿದ್ದರು, ಅದರಲ್ಲಿ 209 ಆಟಗಾರ್ತಿಯರು ಮಾರಾಟವಾಗದೆ ಉಳಿದರು. ಮಾರಾಟವಾಗದ ಆಟಗಾರ್ತಿಯರ ಪಟ್ಟಿಯಲ್ಲಿ ಅಲಿಸಾ ಹೀಲಿ ಅತಿದೊಡ್ಡ ಹೆಸರು. ಮೆಗಾ ಹರಾಜು ಅಲಿಸಾ ಹೀಲಿ ಹೆಸರಿನೊಂದಿಗೆ ಪ್ರಾರಂಭವಾಯಿತು, 50 ಲಕ್ಷ ಮೂಲ ಬೆಲೆಯೊಂದಿಗೆ ಹರಾಗಿಗೆ ಬಂದಿದ್ದ ಹೀಲಿ ಅವರನ್ನು ಯಾವುದೇ ತಂಡವು ಖರೀದಿಸಲಿಲ್ಲ. ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಮಾರ್ಕ್ಯೂ ಸೆಟ್‌ನಲ್ಲಿ ಮಾರಾಟವಾಗದೆ ಉಳಿದ ಏಕೈಕ ಆಟಗಾರ್ತಿ ಅವರು.
ಈ ಬಾರಿ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಉಮಾ ಛೆಟ್ರಿ ಕೂಡ ಮಾರಾಟವಾಗಲಿಲ್ಲ. 50 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಯಾವುದೇ ತಂಡ ಖರೀದಿಸುವ ಆಸಕ್ತಿ ತೋರಿಸಲಿಲ್ಲ. ಅಚ್ಚರಿಯ ಸಂಗತಿಯೆಂದರೆ ಉಮಾ ಛೆಟ್ರಿ ಐಸಿಸಿ ವಿಶ್ವಕಪ್‌ಗಾಗಿ ಭಾರತೀಯ ತಂಡದ ಭಾಗವಾಗಿದ್ದರು ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಆಡಿದ್ದರು. ಇದರ ಹೊರತಾಗಿಯೂ, ಛೆಟ್ರಿ ಮಾರಾಟವಾಗದೆ ಉಳಿದರು. ಕಳೆದ ಸೀಸನ್ನಲ್ಲಿ ಯುಪಿ ವಾರಿಯರ್ಸ್ ತಂಡದ ಭಾಗವಾಗಿದ್ದ ಉಮಾ ಅವರು ಈ ಬಾರಿ ಮಾರಾಟವಾಗದೆ ಉಳಿದರು.
WPL 2026: 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ
ಇಂಗ್ಲೆಂಡ್‌ನ ಮಾಜಿ ನಾಯಕಿ ಹೀದರ್ ನೈಟ್ ಕೂಡ ಈ ಬಾರಿ ಮಾರಾಟವಾಗಲಿಲ್ಲ. ಇವರಲ್ಲದೆ, ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್ ಅಲಾನಾ ಕಿಂಗ್ ಕೂಡ ಮಾರಾಟವಾಗಲಿಲ್ಲ. ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಕಿಂಗ್ ದೊಡ್ಡ ಹೆಸರುಗಳಲ್ಲಿ ಒಬ್ಬರಾಗಿದ್ದರು, ಆದರೆ ಯಾವ ತಂಡಕ್ಕೂ ಅವರು ಬೇಕಾಗಲಿಲ್ಲ. ಆಮಿ ಜೋನ್ಸ್, ಇಜ್ಜಿ ಗೇಜ್, ಟ್ಯಾಸ್ಮಿನ್ ಬ್ರಿಟ್ಸ್, ಹೀದರ್ ಗ್ರಹಾಂ ಮತ್ತು ಆಲಿಸ್ ಕ್ಯಾಪ್ಸೆ ಅವರಂತಹ ಆಟಗಾರ್ತಿಯರು ಈ ಬಾರಿ ಹರಾಜಾಗದೆ ಉಳಿದರು.
1. ಅಲಿಸ್ಸಾ ಹೀಲಿ – 50 ಲಕ್ಷ
2. ಎಸ್.ಮೇಘನಾ – 30 ಲಕ್ಷ
3. ತಜ್ಮಿನ್ ಬ್ರಿಟ್ಸ್ – 30 ಲಕ್ಷ
4. ಪ್ರಣವಿ ಚಂದ್ರ – 10 ಲಕ್ಷ
5. ಡೇವಿನಾ ಪೆರಿನ್ – 20 ಲಕ್ಷ
6. ವೃಂದಾ ದಿನೇಶ್ – 10 ಲಕ್ಷ
7. ದಿಶಾ ಕಸತ್ – 10 ಲಕ್ಷ
8. ಅರುಷಿ ಗೋಯೆಲ್ – 10 ಲಕ್ಷ
9. ಸಾನಿಕಾ ಚಲ್ಕೆ – 10 ಲಕ್ಷ
10. ಸ್ನೇಹಾ ದೀಪ್ತಿ – 30 ಲಕ್ಷ
11. ಮೋನಾ ಮೆಶ್ರಮ್ – 30 ಲಕ್ಷ
12. ಪ್ರಿಯಾ ಪುನಿಯಾ – 30 ಲಕ್ಷ
13. ಕರ್ಟ್ನಿ ವೆಬ್ – 10 ಲಕ್ಷ
14. ಹೀದರ್ ನೈಟ್ – 50 ಲಕ್ಷ
1. ಡಾರ್ಸಿ ಬ್ರೌನ್ – 30 ಲಕ್ಷ
2. ಲಾರೆನ್ ಚೀಟಲ್ – 30 ಲಕ್ಷ
3. ಪ್ರಿಯಾ ಮಿಶ್ರಾ – 30 ಲಕ್ಷ
4. ಅಮಂಡಾ-ಜೇಡ್ ವೆಲ್ಲಿಂಗ್ಟನ್ – 30 ಲಕ್ಷ
5. ಅಲನಾ ಕಿಂಗ್ – 40 ಲಕ್ಷ
6. ಕೋಮಲ್‌ಪ್ರೀತ್ ಕೌರ್ – 10 ಲಕ್ಷ
7. ಶಬ್ನಮ್ ಶಕೀಲ್ – 10 ಲಕ್ಷ
8. ಪ್ರಕಾಶಿಕಾ ನಾಯಕ್ – 10 ಲಕ್ಷ
9. ಭಾರತಿ ರಾವಲ್ – 10 ಲಕ್ಷ
10. ಪ್ರಿಯಾಂಕಾ ಕೌಶಾಲ್ – 10 ಲಕ್ಷ
11. ಪರುಣಿಕಾ ಸಿಸೋಡಿಯಾ – 10 ಲಕ್ಷ
12. ಜಾಗರವಿ ಪವಾರ್ – 10 ಲಕ್ಷ
13. ಮಾರುಫಾ ಅಕ್ಟರ್ – 30 ಲಕ್ಷ
14. ಲೀ ತಹುಹು – 30 ಲಕ್ಷ
15. ಈಡನ್ ಕಾರ್ಸನ್ – 30 ಲಕ್ಷ
16. ಫ್ರಾನ್ ಜೋನಾಸ್ – 30 ಲಕ್ಷ
17. ಶುಚಿ ಉಪಾಧ್ಯಾಯ – 30 ಲಕ್ಷ
18. ಕೋಮಲ್ ಝಂಝಾದ್ – 10 ಲಕ್ಷ
19.. ಸಹನಾ ಪವಾರ್ – 10 ಲಕ್ಷ
20. ಶಾನು ಸೇನ್ – 10 ಲಕ್ಷ
21. ಗಾರ್ಗಿ ವಾಂಕರ್ – 10 ಲಕ್ಷ
1. ಹುಮೈರಾ ಕಾಜಿ – 10 ಲಕ್ಷ
2. ಅಮನದೀಪ್ ಕೌರ್ – 20 ಲಕ್ಷ
3. ಜಿಂತಿಮಣಿ ಕಲಿತಾ – 10 ಲಕ್ಷ
4. ಎಸ್.ಯಶಶ್ರೀ – 10 ಲಕ್ಷ
5. ಸಲೋನಿ ಡಂಗೋರ್ – 10 ಲಕ್ಷ
6. ಲಾರಾ ಹ್ಯಾರಿಸ್ – 10 ಲಕ್ಷ
7. ಹೀದರ್ ಗ್ರಹಾಂ – 50 ಲಕ್ಷ
8. ತೇಜಲ್ ಹಸಬ್ನಿಸ್ – 30 ಲಕ್ಷ
9. ರಬೇಯಾ ಖಾನ್ – 30 ಲಕ್ಷ
10. ನಜ್ಮಾ ಖಾನ್ – 10 ಲಕ್ಷ
11. ಆಲಿಸ್ ಕ್ಯಾಪ್ಸಿ – 30 ಲಕ್ಷ
12. ಸೈಮಾ ಠಾಕೋರ್ – 30 ಲಕ್ಷ
13. ಅಶ್ವನಿ ಕುಮಾರಿ – 10 ಲಕ್ಷ
14. ವೈಷ್ಣವಿ ಶರ್ಮಾ – 10 ಲಕ್ಷ
15. ಸಯಾಲಿ ಸತ್ಘರೆ – 30 ಲಕ್ಷ
16. ಇಸ್ಸಿ ವಾಂಗ್ – 30 ಲಕ್ಷ
17. ಪ್ರಗತಿ ಸಿಂಗ್ – 10 ಲಕ್ಷ
18. ಆಯುಷಿ ಶುಕ್ಲಾ – 10 ಲಕ್ಷ
1. ಇಜ್ಜಿ ಗೇಜ್ – 40 ಲಕ್ಷ
2. ಆಮಿ ಜೋನ್ಸ್ – 50 ಲಕ್ಷ
3. ಉಮಾ ಚೆಟ್ರಿ – 50 ಲಕ್ಷ
4. ಖುಷಿ ಭಾಟಿಯಾ – 10 ಲಕ್ಷ
5. ಪ್ರತ್ಯೂಷ ಕುಮಾರ್ – 10 ಲಕ್ಷ
6. ನಂದಿನಿ ಕಶ್ಯಪ್ – 10 ಲಕ್ಷ
7. ನುಝತ್ ಪರ್ವೀನ್ – 30 ಲಕ್ಷ
8. ತೀರ್ಥ ಸತೀಶ್ – 10 ಲಕ್ಷ
9. ಶಿವಾಲಿ ಶಿಂಧೆ – 10 ಲಕ್ಷ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ