AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL Auction 2026: ಆರ್​ಸಿಬಿ ಸೇರಿದ 12 ಆಟಗಾರ್ತಿರು ಇವರೇ.. ಇಲ್ಲಿದೆ ಪೂರ್ಣ ತಂಡ

RCB Team WPL 2026 Players List: ನವದೆಹಲಿಯಲ್ಲಿ ನಡೆದ WPL ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಹೊಸ ಆಟಗಾರ್ತಿಯರನ್ನು ಸೇರಿಸಿಕೊಂಡಿದೆ. 2024ರ ಚಾಂಪಿಯನ್ ಆಗಿದ್ದ ಆರ್​ಸಿಬಿ, 6.15 ಕೋಟಿ ಬಜೆಟ್ ಬಳಸಿ ಸ್ಮೃತಿ ಮಂಧಾನಾ, ಎಲ್ಲಿಸ್ ಪೆರ್ರಿ ಸೇರಿದಂತೆ ಪ್ರಮುಖರನ್ನು ಉಳಿಸಿಕೊಂಡು ಪ್ರಬಲ ತಂಡ ರಚಿಸಿದೆ. ಹರಾಜಿನಲ್ಲಿ ಖರೀದಿಸಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ.

WPL Auction 2026: ಆರ್​ಸಿಬಿ ಸೇರಿದ 12 ಆಟಗಾರ್ತಿರು ಇವರೇ.. ಇಲ್ಲಿದೆ ಪೂರ್ಣ ತಂಡ
Rcb Women
ಪೃಥ್ವಿಶಂಕರ
|

Updated on: Nov 27, 2025 | 10:17 PM

Share

ನವದೆಹಲಿಯಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಮೆಗಾಹರಾಜಿನಲ್ಲಿ (WPL Auction 2026) ಒಟ್ಟು 276 ಆಟಗಾರ್ತಿಯರು ಹರಾಜಿನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಖಾಲಿ ಇದ್ದ 73 ಸ್ಥಾನಗಳಿಗೆ 67 ಆಟಗಾರ್ತಿರು ಭರ್ತಿಯಾಗಿದ್ದಾರೆ. ಅದರಲ್ಲೂ ಪ್ರಮುಖವಾಗಿ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಏಕೆಂದರೆ 2024 ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಆರ್​ಸಿಬಿ ಹರಾಜಿಗೂ ಮುನ್ನ ಕೇವಲ ನಾಲ್ವರನ್ನು ತಂಡದಲ್ಲಿ ಉಳಿಸಿಕೊಂಡು ಉಳಿದವರನ್ನು ತಂಡದಿಂದ ಕೈಬಿಟ್ಟಿತ್ತು. ಕೈಬಿಟ್ಟ ಆಟಗಾರ್ತಿಯರಲ್ಲಿ ಹಲವರು ಸ್ಟಾರ್ ಆಟಗಾರ್ತಿಯರೇ ಸೇರಿದ್ದರು. ಹೀಗಾಗಿ ಹರಾಜಿನಲ್ಲಿ ಆರ್​ಸಿಬಿ ಯಾವ ಆಟಗಾರ್ತಿಯರ ಹಿಂದೆ ಬೀಳಬಹುದು ಎಂಬ ನಿರೀಕ್ಷೆ ಇತ್ತು. ಅದರಂತೆ 6.15 ಕೋಟಿ ರೂಪಾಯಿ ಬಜೆಟ್​ನೊಂದಿಗೆ ಹರಾಜಿಗೆ ಬಂದಿದ್ದ ಆರ್​ಸಿಬಿ ಒಟ್ಟು 12 ಆಟಗಾರ್ತಿಯರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಹರಾಜಿಗೆ ಮುನ್ನ ಆರ್‌ಸಿಬಿ ಉಳಿಸಿಕೊಂಡಿದ್ದ ಆಟಗಾರ್ತಿಯರು

  1. ಸ್ಮೃತಿ ಮಂಧಾನ- 3.5 ಕೋಟಿ
  2. ಎಲ್ಲಿಸ್ ಪೆರ್ರಿ- 2 ಕೋಟಿ
  3. ರಿಚಾ ಘೋಷ್- 2.4 ಕೋಟಿ
  4. ಶ್ರೇಯಾಂಕ ಪಾಟೀಲ್- 60 ಲಕ್ಷ

ಹರಾಜಿನಲ್ಲಿ ಖರೀದಿಸಿದ ಆಟಗಾರ್ತಿಯರು

  1. ಜಾರ್ಜಿಯಾ ವೋಲ್-60 ಲಕ್ಷ
  2. ನಡಿನ್ ಡಿ ಕ್ಲರ್ಕ್-65 ಲಕ್ಷ
  3. ರಾಧಾ ಯಾದವ್- 65 ಲಕ್ಷ
  4. ಲಾರೆನ್ ಬೆಲ್- 90 ಲಕ್ಷ
  5. ಲೆನ್ಸಿ ಸ್ಮಿತ್- 30 ಲಕ್ಷ
  6. ಪ್ರೇಮಾ ರಾವತ್- 20 ಲಕ್ಷ (ರೈಟ್ ಮ್ಯಾಚ್ ಕಾರ್ಡ್​)
  7. ಅರುಂಧತಿ ರೆಡ್ಡಿ- 75 ಲಕ್ಷ
  8. ಪೂಜಾ ವಸ್ತ್ರಕರ್- 85 ಲಕ್ಷ
  9. ಗ್ರೇಸ್ ಹ್ಯಾರಿಸ್- 75 ಲಕ್ಷ
  10. ಗೌತಮಿ ನಾಯ್ಕ್- 10 ಲಕ್ಷ
  11. ಪ್ರತ್ಯೂಷಾ ಕುಮಾರ್- 10 ಲಕ್ಷ
  12. ಡಿ ಹೇಮಲತಾ- 30 ಲಕ್ಷ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೂರ್ಣ ತಂಡ

ಸ್ಮೃತಿ ಮಂಧಾನ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಲಾರೆನ್ ಬೆಲ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಗ್ರೇಸ್ ಹ್ಯಾರಿಸ್, ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಗೌತಮಿ ನಾಯಕ್, ಪ್ರತ್ಯೂಷ ಕುಮಾರ್, ದಯಾಲನ್ ಹೇಮಲತಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ