AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs SL: ಟಿ20 ಯಲ್ಲಿ ಅತಿ ಹೆಚ್ಚು ಸೊನ್ನೆ; ಮತ್ತೊಂದು ಬೇಡದ ದಾಖಲೆ ಬರೆದ ಬಾಬರ್

Babar Azam's T20 Duck Streak: ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಇತ್ತೀಚಿನ ಟಿ20 ಪಂದ್ಯಗಳಲ್ಲಿ ಅವರು ಸತತವಾಗಿ ಶೂನ್ಯಕ್ಕೆ ಔಟಾಗುತ್ತಿದ್ದು, ಶ್ರೀಲಂಕಾ ವಿರುದ್ಧವೂ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ. ಇದು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಪಾಕಿಸ್ತಾನದ ಬೇಡದ ದಾಖಲೆಯಾಗಿದೆ. ರೋಹಿತ್ ಶರ್ಮಾ ಅವರ ತವರಿನಲ್ಲಿ ಡಕ್ ಔಟ್ ದಾಖಲೆಯನ್ನೂ ಬಾಬರ್ ಮುರಿದಿದ್ದಾರೆ.

ಪೃಥ್ವಿಶಂಕರ
|

Updated on: Nov 28, 2025 | 5:44 PM

Share
ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಪ್ರಸ್ತುತ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ತಮ್ಮ ಶತಕದ ಬರವನ್ನು ಕೊನೆಗೊಳಿಸಿದ್ದ ಬಾಬರ್ ಇದರ ಹೊರತಾಗಿಯೂ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಬರ್ 0 ರನ್ ಗಳಿಸುವ ಮೂಲಕ ಮುಜುಗರದ ದಾಖಲೆಯನ್ನು ಸೃಷ್ಟಿಸಿದ್ದಾರೆ. ಪಾಕಿಸ್ತಾನ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಬೇಡದ ದಾಖಲೆ ಬಾಬರ್ ಪಾಲಾಗಿದೆ.

1 / 5
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಆರನೇ ಪಂದ್ಯದಲ್ಲಿ 185 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡದ ಪರ ಬಾಬರ್ ಆಝಂ ನಾಲ್ಕನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದರು. ಆದರೆ, ಅದೇ ಓವರ್‌ನಲ್ಲಿ ವೇಗಿ ದುಷ್ಮಂತ ಚಮೀರ ಅವರ ಎಸೆತದಲ್ಲಿ ಕೇವಲ ಎರಡು ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು.

2 / 5
ಇತ್ತೀಚೆಗಷ್ಟೇ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಮತ್ತು ಅರ್ಧಶತಕಗಳನ್ನು ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದ ಬಾಬರ್, ಈ ಬಾರಿ ತಮ್ಮ ಖಾತೆಯನ್ನು ತೆರೆಯಲೂ ವಿಫಲರಾದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಪಾಕಿಸ್ತಾನ ಆಟಗಾರರ ಪಟ್ಟಿಯಲ್ಲಿ ಬಾಬರ್ ಜಂಟಿಯಾಗಿ ಮೊದಲ ಸ್ಥಾನಕ್ಕೇರಿದ್ದಾರೆ. ಬಾಬರ್ ಜೊತೆಗೆ ಸೈಮ್ ಅಯೂಬ್ ಮತ್ತು ಉಮರ್ ಗುಲ್ ಕೂಡ ತಲಾ 10 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

3 / 5
ಈ ಸರಣಿಯಲ್ಲಿ ಬಾಬರ್ ಶೂನ್ಯಕ್ಕೆ ಔಟಾಗಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಜಿಂಬಾಬ್ವೆ ವಿರುದ್ಧವೂ ಅವರು ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಕಳೆದ 30 ದಿನಗಳಲ್ಲಿ ಇದು ಮೂರನೇ ಬಾರಿ ಮತ್ತು ಕಳೆದ 10 ಟಿ20ಐಗಳಲ್ಲಿ ನಾಲ್ಕನೇ ಬಾರಿ ಅವರು ಶೂನ್ಯಕ್ಕೆ ಔಟಾಗಿದ್ದಾರೆ.

4 / 5
ಏತನ್ಮಧ್ಯೆ, ಬಾಬರ್ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ತವರಿನಲ್ಲಿ ಅತಿ ಹೆಚ್ಚು ಡಕ್ ಔಟ್ ಆದ ಅಗ್ರ ಏಳು ಬ್ಯಾಟ್ಸ್‌ಮನ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾ ತವರಿನಲ್ಲಿ ಐದು ಬಾರಿ ಡಕ್ ಔಟ್ ಆಗಿದ್ದಾರೆ. ಇದೀಗ ಬಾಬರ್ ತವರಿನಲ್ಲಿ ಆರನೇ ಬಾರಿಗೆ ಡಕ್ ಔಟ್ ಆಗುವ ಮೂಲಕ ಹಿಟ್​ಮ್ಯಾನ್ ದಾಖಲೆ ಮುರಿದಿದ್ದಾರೆ. ದಾಸುನ್ ಶನಕ ಏಳು ಡಕ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಬಾಬರ್ ಶೀಘ್ರದಲ್ಲೇ ಈ ದಾಖಲೆಯನ್ನು ಸರಿಗಟ್ಟಬಹುದು.

5 / 5
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?

ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ

ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ

ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!

ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ