AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2026: 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ

WPL 2026 schedule: ಮಹಿಳಾ ಪ್ರೀಮಿಯರ್ ಲೀಗ್ 2026 ವೇಳಾಪಟ್ಟಿ ಪ್ರಕಟಗೊಂಡಿದೆ. ಜನವರಿ 9 ರಿಂದ ಫೆಬ್ರವರಿ 5 ರವರೆಗೆ ನವಿ ಮುಂಬೈ ಮತ್ತು ವಡೋದರಾದಲ್ಲಿ ಪಂದ್ಯಗಳು ನಡೆಯಲಿವೆ. ಈ ನಾಲ್ಕನೇ ಆವೃತ್ತಿಯ ಲೀಗ್ ಮೆಗಾ ಹರಾಜಿನಲ್ಲಿ ದೀಪ್ತಿ ಶರ್ಮಾಗೆ 3.2 ಕೋಟಿ ರೂ. ಬಿಡ್ ಆಗಿದ್ದು, ಯುಪಿ ವಾರಿಯರ್ಸ್ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಅವರನ್ನು ಉಳಿಸಿಕೊಂಡಿದೆ. ಮಹಿಳಾ ಕ್ರಿಕೆಟ್ ಜನಪ್ರಿಯತೆ ಹೆಚ್ಚುತ್ತಿದೆ.

WPL 2026: 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ
Wpl 2026
ಪೃಥ್ವಿಶಂಕರ
|

Updated on:Nov 27, 2025 | 4:38 PM

Share

ವಿಶ್ವದ ಅತಿದೊಡ್ಡ ಮಹಿಳಾ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಮಹಿಳಾ ಪ್ರೀಮಿಯರ್ ಲೀಗ್​ 2026 ರ (Women’s Premier League 2026) ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಮೆಗಾ ಹರಾಜಿಗೆ ಸ್ವಲ್ಪ ಮೊದಲು ಬಿಸಿಸಿಐ (BCCI) ನಾಲ್ಕನೇ ಆವೃತ್ತಿಯ ಈ ಲೀಗ್​ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿಯ ಪಂದ್ಯಾವಳಿಯನ್ನು ನವಿ ಮುಂಬೈ ಮತ್ತು ವಡೋದರಾದಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಘೋಷಿಸಿದೆ. ವೇಳಾಪಟ್ಟಿಯ ಪ್ರಕಾರ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 9 ರಂದು ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಫೆಬ್ರವರಿ 5 ರಂದು ನಡೆಯಲಿದೆ. ಮೊದಲ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದರೆ, ಪ್ರಶಸ್ತಿ ಪಂದ್ಯ ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.

ಯಶಸ್ವಿಯಾಗಿ ನಡೆದಿವೆ 3 ಆವೃತ್ತಿಗಳು

ಭಾರತದ ವಿಶ್ವಕಪ್ ಗೆಲುವಿನ ನಂತರ, ಮಹಿಳಾ ಪ್ರೀಮಿಯರ್ ಲೀಗ್ ಇನ್ನಷ್ಟು ಜನಪ್ರಿಯವಾಗುವ ನಿರೀಕ್ಷೆಯಿದೆ. ಕಳೆದ ಮೂರು ಸೀಸನ್​ಗಳಲ್ಲಿ ಈ ಪಂದ್ಯಾವಳಿಯ ಜನಪ್ರಿಯತೆ ಸ್ಥಿರವಾಗಿ ಬೆಳೆಯುತ್ತಿದೆ. 2023 ರ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್ ಅನ್ನು ಮುಂಬೈ ಇಂಡಿಯನ್ಸ್ ಗೆದ್ದುಕೊಂಡರೆ, ಆ ಬಳಿಕ ಅಂದರೆ 2024 ರಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿತ್ತು. ಹಾಗೆಯೇ 2025 ರಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತೆ ಚಾಂಪಿಯನ್ ಆಯಿತು. ಈ ಬಾರಿ ಯಾವ ತಂಡ ಗೆಲ್ಲುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ.

ದೀಪ್ತಿ ಮೇಲೆ ಹಣದ ಮಳೆ

ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಘೋಷಣೆಯಾದ ನಂತರ, ಮೆಗಾ ಹರಾಜು ಪ್ರಾರಂಭವಾಗಿದ್ದು, ಭಾರತದ ವಿಶ್ವಕಪ್ ವಿಜೇತ ಆಲ್‌ರೌಂಡರ್ ದೀಪ್ತಿ ಶರ್ಮಾಗೆ ಭಾರಿ ಬಿಡ್ ನಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ 3.2 ಕೋಟಿಗೆ ಖರೀದಿಸಲು ಪ್ರಯತ್ನಿಸಿತು, ಆದರೆ ಯುಪಿ ವಾರಿಯರ್ಸ್​ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಮತ್ತೊಮ್ಮೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಕುತೂಹಲಕಾರಿಯಾಗಿ ದೀಪ್ತಿ ಶರ್ಮಾ ಕಳೆದ ಸೀಸನ್​ನಲ್ಲಿ 2.6 ಕೋಟಿಗೆ ಇದೇ ತಂಡದಲ್ಲಿ ಆಡುತ್ತಿದ್ದರು. ಆದರೆ ಯುಪಿ ವಾರಿಯರ್ಸ್ ಅವರನ್ನು ಹರಾಜಿಗೂ ಮುನ್ನವೇ ಬಿಡುಗಡೆ ಮಾಡಿ ಈಗ ಹೆಚ್ಚುವರಿಯಾಗಿ 60 ಲಕ್ಷ ರೂ. ಪಾವತಿಸಿ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ತಂಡವು ಸೋಫಿ ಡಿವೈನ್ ಅವರನ್ನು 2 ಕೋಟಿ ರೂ.ಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.

Published On - 4:34 pm, Thu, 27 November 25