AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳ ಸ್ಥಳ ಬದಲು; ಬಿಸಿಸಿಐ ದಿಢೀರ್ ನಿರ್ಧಾರ

ಮಹಿಳಾ ಪ್ರೀಮಿಯರ್ ಲೀಗ್ 2027ರ ಮುಂಬೈ ಪಂದ್ಯಗಳಿಗೆ ಬಿಸಿಸಿಐ ಮಹತ್ವದ ಬದಲಾವಣೆ ಮಾಡಿದೆ. ಜನವರಿ 14ರಂದು ಆರಂಭವಾಗಲಿರುವ ಟೂರ್ನಿಯ ಕೊನೆಯ 11 ಪಂದ್ಯಗಳು ಬ್ರಬೋರ್ನ್ ಕ್ರೀಡಾಂಗಣದ ಬದಲಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿವೆ. ಐಸಿಸಿ ಮನವಿಯ ಮೇರೆಗೆ, ಮುಂಬರುವ ಮಹಿಳಾ ಚಾಂಪಿಯನ್ಸ್ ಟ್ರೋಫಿ ಸಿದ್ಧತೆಗಾಗಿ ಪಿಚ್ ಸಂರಕ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳ ಸ್ಥಳ ಬದಲು; ಬಿಸಿಸಿಐ ದಿಢೀರ್ ನಿರ್ಧಾರ
Wpl 2027
ಪೃಥ್ವಿಶಂಕರ
|

Updated on:Nov 15, 2026 | 4:35 PM

Share

ಮಹಿಳಾ ಪ್ರೀಮಿಯರ್ ಲೀಗ್‌ನ ಐದನೇ ಆವೃತ್ತಿ 2027ರ ಜನವರಿ 14ರಂದು ಆರಂಭವಾಗಲಿದ್ದು, ಫೆಬ್ರವರಿ ಮೊದಲ ವಾರದವರೆಗೆ ನಡೆಯಲಿದೆ. ಈಗಾಗಲೇ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಗಿದಿದ್ದು, ಬಿಸಿಸಿಐ ಟೂರ್ನಿಯ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಆದರೆ, ಟೂರ್ನಿ ಆರಂಭಕ್ಕೆ ಎರಡು ತಿಂಗಳು ಬಾಕಿ ಇರುವಾಗ ಬಿಸಿಸಿಐ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಟೂರ್ನಿಯ ಪಂದ್ಯಗಳು ನಡೆಯಲಿರುವ ಸ್ಥಳಗಳಲ್ಲಿ ಒಂದನ್ನು ಬದಲಾಯಿಸಿದೆ. 2027ರ ಡಬ್ಲ್ಯುಪಿಎಲ್ ಟೂರ್ನಿ ವಡೋದರಾ ಮತ್ತು ಮುಂಬೈನಲ್ಲಿ ನಡೆಯಲಿದೆ. ಇದೀಗ ಬಿಸಿಸಿಐ ಮುಂಬೈನಲ್ಲಿ ಪಂದ್ಯಗಳು ನಡೆಯುವ ಕ್ರೀಡಾಂಗಣವನ್ನು ಬದಲಾಯಿಸಿದೆ. ಅದರಂತೆ, ಮುಂಬೈನಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳು ಬ್ರಬೋರ್ನ್ ಕ್ರೀಡಾಂಗಣದ ಬದಲಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿವೆ.

ಬಿಸಿಸಿಐ ಕ್ರೀಡಾಂಗಣ ಬದಲಾಯಿಸಿದ್ದೇಕೆ?

ನವೆಂಬರ್ 15ರ ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಸಿಸಿಐ ಈ ವಿಷಯವನ್ನು ಖಚಿತಪಡಿಸಿದೆ. ಪ್ರಕಟಣೆಯ ಪ್ರಕಾರ, ಜನವರಿ 14ರಂದು ಆರಂಭವಾಗಲಿರುವ ಡಬ್ಲ್ಯುಪಿಎಲ್ 2027ರ ಕೊನೆಯ 11 ಪಂದ್ಯಗಳು ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಈ ಪಂದ್ಯಗಳು ಜನವರಿ 26ರಿಂದ ಆರಂಭವಾಗಲಿದ್ದವು. ಆದರೆ, ಇದೀಗ ಬ್ರಬೋರ್ನ್ ಕ್ರೀಡಾಂಗಣದ ಬದಲಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ, ಪಂದ್ಯಗಳ ದಿನಾಂಕ ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮನವಿಯ ಮೇರೆಗೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. 2027ರ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಮಹಿಳಾ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಾಗಲಿದೆ. ಈ ಟೂರ್ನಿ ಫೆಬ್ರವರಿ 14ರಿಂದ ಆರಂಭವಾಗಲಿದ್ದು, ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಹೀಗಾಗಿ ಮಹಿಳಾ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬ್ರಬೋರ್ನ್ ಕ್ರೀಡಾಂಗಣದ ಪಿಚ್ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಐಸಿಸಿ ಬಿಸಿಸಿಐಗೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿರುವ ಬಿಸಿಸಿಐ, ಡಬ್ಲ್ಯುಪಿಎಲ್ ಪಂದ್ಯಗಳನ್ನು ವಾಂಖೆಡೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದೆ.

WPL 2027 ವೇಳಾಪಟ್ಟಿ ಪ್ರಕಟ; ಆರ್‌ಸಿಬಿ vs ಮುಂಬೈ ನಡುವೆ ಉದ್ಘಾಟನಾ ಪಂದ್ಯ

WPL 2027 ಯಾವಾಗ ಆರಂಭ?

2027ರ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 14ರಂದು ವಡೋದರಾದಲ್ಲಿ ಆರಂಭವಾಗಲಿದೆ. ಫೆಬ್ರವರಿ 7ರಂದು ಮುಂಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆ ಬೀಳಲಿದೆ. ಟೂರ್ನಿಯ ಮೊದಲ 11 ಲೀಗ್ ಪಂದ್ಯಗಳು ಜನವರಿ 14ರಿಂದ 24ರವರೆಗೆ ವಡೋದರಾದಲ್ಲಿ ನಡೆಯಲಿವೆ. ನಂತರ ಜನವರಿ 26ರಿಂದ ಫೆಬ್ರವರಿ 7ರವರೆಗೆ ನಡೆಯಲಿರುವ ಉಳಿದ 11 ಪಂದ್ಯಗಳಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳೂ ಮುಂಬೈನಲ್ಲೇ ನಡೆಯಲಿವೆ.

ಪಂದ್ಯಗಳ ವೇಳಾಪಟ್ಟಿಯಲ್ಲಿ ಬೇರೆ ಯಾವುದೇ ಬದಲಾವಣೆಗಳಿಲ್ಲ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಆರಂಭವಾಗಲಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಮೂಲಕ ಐದನೇ ಆವೃತ್ತಿಗೆ ಚಾಲನೆ ಸಿಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Sun, 15 November 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ