ಆರ್‌ಸಿಬಿ ಅಭಿಮಾನಿಗಳೇ ಸಿದ್ಧರಾಗಿ; WPL 2027ರಲ್ಲಿ ನಿಮ್ಮ ತಂಡದ ಪಂದ್ಯಗಳ ದಿನಾಂಕ ಪ್ರಕಟ
ಮಹಿಳಾ ಪ್ರೀಮಿಯರ್ ಲೀಗ್ 2027ರ ಐದನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದೆ. ಜನವರಿ 14 ರಿಂದ ಫೆಬ್ರವರಿ 7ರವರೆಗೆ ವಡೋದರಾ ಮತ್ತು ಮುಂಬೈನಲ್ಲಿ ಪಂದ್ಯಗಳು ನಡೆಯಲಿವೆ. ಹಾಲಿ ಚಾಂಪಿಯನ್ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧ ಉದ್ಘಾಟನಾ ಪಂದ್ಯ ಆಡಲಿದೆ. ಸಂಪೂರ್ಣ ವೇಳಾಪಟ್ಟಿ, ತಂಡದ ಮಾಹಿತಿ ಇಲ್ಲಿ ಲಭ್ಯ.

ಮಹಿಳಾ ಪ್ರೀಮಿಯರ್ ಲೀಗ್‌ನ ಐದನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದೆ. 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ಮುಂದಿನ ಆವೃತ್ತಿಯ ಪಂದ್ಯಾವಳಿ ನಡೆಯಲಿದೆ. ಈ ಬಾರಿ ವಡೋದರಾ ಮತ್ತು ಮುಂಬೈ ಆತಿಥ್ಯ ವಹಿಸಲಿದ್ದು, ಎರಡೂ ನಗರಗಳಲ್ಲಿ ತಲಾ 11 ಪಂದ್ಯಗಳು ನಡೆಯಲಿವೆ. ಜನವರಿ 14ರಂದು ವಡೋದರಾದಲ್ಲಿ ಐದನೇ ಆವೃತ್ತಿಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹೀಗಾಗಿ ಮೊದಲ ಪಂದ್ಯದಲ್ಲೇ ಎರಡು ಬಲಿಷ್ಠ ತಂಡಗಳ ನಡುವಿನ ರೋಚಕ ಹಣಾಹಣಿ ಅಭಿಮಾನಿಗಳಿಗೆ ಸಿಗಲಿದೆ.
ವಡೋದರಾದಲ್ಲಿ ಜನವರಿ 14ರಿಂದ 24ರವರೆಗೆ ಒಟ್ಟು 11 ಪಂದ್ಯಗಳು ನಡೆಯಲಿವೆ. ಬಳಿಕ ಪಂದ್ಯಾವಳಿಯ ಉಳಿದ ಪಂದ್ಯಗಳು ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಜನವರಿ 26ರಂದು ಮುಂಬೈನಲ್ಲಿ ಪಂದ್ಯಗಳು ಆರಂಭವಾಗಲಿವೆ. ಲೀಗ್ ಹಂತದ ಪಂದ್ಯಗಳು ಫೆಬ್ರವರಿ 3ರವರೆಗೆ ನಡೆಯಲಿದ್ದು, ಬಳಿಕ ಪ್ಲೇಆಫ್ ಪಂದ್ಯಗಳ ಮೂಲಕ ಫೈನಲ್‌ಗೆ ಅರ್ಹತೆ ಪಡೆಯುವ ತಂಡಗಳು ನಿರ್ಧಾರವಾಗಲಿವೆ. ಫೆಬ್ರವರಿ 7ರಂದು ಫೈನಲ್ ಪಂದ್ಯ ನಡೆಯಲಿದೆ.
ಆರ್ಸಿಬಿಗೆ ನಾಲ್ವರು ಹೊಸಬರು
ಹಾಲಿ ಚಾಂಪಿಯನ್ ಆಗಿರುವ ಆರ್‌ಸಿಬಿ ಈ ಬಾರಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯವೇ ಟೂರ್ನಿಯ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆಯಿದೆ. ಇದರ ಜೊತೆಗೆ ಆರ್‌ಸಿಬಿ, ಮಿನಿ ಹರಾಜಿನಲ್ಲಿ ನಾಲ್ವರು ಆಟಗಾರ್ತಿಯರನ್ನು ಖರೀದಿಸುವ ಮೂಲಕ ಈಗಾಗಲೇ ಬಲಿಷ್ಠವಾಗಿದ್ದ ತಂಡವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಹೀಗಾಗಿ ಪ್ಲೇಯಿಂಗ್ 11 ನಲ್ಲಿ ಯಾರಿಗೆಲ್ಲ ಅವಕಾಶ ನೀಡಿ ಕಣಕ್ಕಿಳಿಸುತ್ತದೆ? ಅವರ ಪ್ರದರ್ಶನ ಹೇಗಿರಲಿದೆ ಎಂಬುದನ್ನು ನೋಡುವುದು ಕುತೂಹಲ ಮೂಡಿಸಿದೆ.
The fixtures are out, the fire is waiting to be unleashed, and we’re coming to #PlayBold in the 2️⃣0️⃣2️⃣7️⃣ #TATAWPL, RCB Nation. 😎❤️🔥
#PlayBold #WPL2027 https://t.co/FPoZ64zTgj
— Royal Challengers Bengaluru (@RCBTweets) November 4, 2026
ಆರ್‌ಸಿಬಿ ತಂಡದ ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿ
- ಜನವರಿ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್
- ಜನವರಿ 16: ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಜನವರಿ 19: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್
- ಜನವರಿ 22: ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಜನವರಿ 26: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಜನವರಿ 29: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್
- ಜನವರಿ 31: ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಫೆಬ್ರವರಿ 2: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಅರುಂಧತಿ ರೆಡ್ಡಿ, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೋಲ್, ಲಾರೆನ್ ಬೆಲ್, ನಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಪ್ರತ್ಯೂಷಾ ಕುಮಾರ್, ಪ್ರೇಮಾ ರಾವತ್, ರಾಧಾ ಯಾದವ್, ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಜೆಸ್ ಜೊನಾಸೆನ್, ತೇಜಲ್ ಹಸಬ್ನಿಸ್, ವೃಂದಾ ದಿನೇಶ್ ಮತ್ತು ಕ್ಲೋಯ್ ಟ್ರಯಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 pm, Wed, 4 November 26




