ಮಹಿಳಾ ಟಿ20 ಚಾಲೆಂಜ್ನ 2ನೇ ಪಂದ್ಯದಲ್ಲಿ ವೆಲೋಸಿಟಿ ಹಾಗೂ ಹಾಗೂ ಸೂಪರ್‌ನೋವಾಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಯುವ ಆರಂಭಿಕರಾದ ಶಫಾಲಿ ವರ್ಮಾ (51) ಮತ್ತು ಲಾರಾ ವೂಲ್ವಾರ್ಡ್ಟ್ (ಔಟಾಗದೆ 51) ಅವರ ನೆರವಿನಿಂದ ವೆಲೋಸಿಟಿ ತಂಡವು ಸೂಪರ್‌ನೋವಾಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಶಫಾಲಿ ಅವರ 33 ಎಸೆತಗಳ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳನ್ನು ಬಾರಿಸಿದರೆ, ವೂಲ್ವಾರ್ಡ್ ಅಜೇಯ 35 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 1 ಸಿಕ್ಸರ್ ಬಾರಿಸಿ ಮಿಂಚಿದರು. ಇನ್ನು ಈ ಪಂದ್ಯದದ ಸೋಲಿನ ಹೊರತಾಗಿಯೂ ಸೂಪರ್‌ನೋವಾಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಿಡಿದ ಕ್ಯಾಚ್ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
ವೆಲೋಸಿಟಿ ತಂಡದ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ, ಸೂಪರ್‌ನೋವಾಸ್ ಬೌಲರ್ ಡಿಯಾಂಡ್ರಾ ಡಾಟಿನ್ ಆಫ್-ಸ್ಟಂಪ್‌ನ ಹೊರಗೆ ಶಾರ್ಟ್ ಬಾಲ್ ಬೌಲ್ ಮಾಡಿದರು. ಈ ಚೆಂಡನ್ನು ಶಫಾಲಿ ವರ್ಮಾ ಬಲವಾಗಿ ಹೊಡೆದರು. ಚೆಂಡು ಹರ್ಮನ್‌ಪ್ರೀತ್ ಕೌರ್ ಫೀಲ್ಡಿಂಗ್ ಮಾಡುತ್ತಿದ್ದ ಶಾರ್ಟ್ ಥರ್ಡ್ ಮ್ಯಾನ್ ಕಡೆಗೆ ಚಿಮ್ಮಿತು. ಕ್ಷಣಾರ್ಧದಲ್ಲೇ ಹರ್ಮನ್‌ಪ್ರೀತ್ ಗಾಳಿಯಲ್ಲಿ ಡೈವ್ ಮಾಡುವ ಮೂಲಕ ಅದ್ಭುತವಾಗಿ ಕ್ಯಾಚ್ ಹಿಡಿದರು. ಹರ್ಮನ್‌ಪ್ರೀತ್ ಕೌರ್ ಅವರ ಈ ಅದ್ಭುತ ಕ್ಯಾಚ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Take a Bow …… ??????
Spectacular catch Caps ? ?#Believeinblue #BelieveInWomen #WomensT20Challenge #HarmanpreetKaur pic.twitter.com/4Lfb1Q3fXq— Wild Goat (@WilD__GoaT) May 24, 2022
ಇನ್ನು ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ 51 ಎಸೆತಗಳಲ್ಲಿ 71 ರನ್ ಬಾರಿಸಿ ಮಿಂಚಿದ್ದರು. ಮೊದಲು ಬ್ಯಾಟ್ ಮಾಡಿದ ಸೂಪರ್ ನೋವಾಸ್ ಪರ ನಾಯಕಿ ಹರ್ಮನ್ 7 ಬೌಂಡರಿ ಹಾಗೂ 3 ಸಿಕ್ಸ್ಗಳೊಂದಿಗೆ 71 ರನ್ ಸಿಡಿಸಿದ್ದರು. ಈ ಅರ್ಧಶತಕದ ನೆರವಿನಿಂದ ಸೂಪರ್‌ನೋವಾಸ್ ಐದು ವಿಕೆಟ್ ಕಳೆದುಕೊಂಡು 150 ರನ್ ಗಳಿಸಿತು. ಈ ಗುರಿಯನ್ನು ವೆಲೋಸಿಟಿ ತಂಡ 10 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಚೇಸ್ ಮಾಡಿತು.
What a catch ?? @ImHarmanpreet ??? #My11CircleWT20C pic.twitter.com/rPxCOCVEQw
— Sachin .. (@beallapu) May 24, 2022
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.