Womens T20 World Cup: ಎರಡಂಕಿ ದಾಟದ 8 ಬ್ಯಾಟರ್​ಗಳ ಸ್ಕೋರ್: ಟಿ20 ವಿಶ್ವಕಪ್​ ಅಭ್ಯಾಸ ಪಂದ್ಯದಲ್ಲೇ ಭಾರತ ಹೀನಾಯ ಪ್ರದರ್ಶನ

| Updated By: Vinay Bhat

Updated on: Feb 07, 2023 | 11:12 AM

India Women vs Australia Women: ಮಹಿಳಾ ಟಿ20 ವಿಶ್ವಕಪ್​ಗು ಮುನ್ನ ಆಸ್ಟ್ರೇಲಿಯಾ ವನಿತೆಯರ ವಿರುದ್ಧದ ಮೊದಲ ಅಭ್ಯಾಸ ಮ್ಯಾಚ್​ನಲ್ಲೇ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಭಾರತದ ಬ್ಯಾಟರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿ ಹೀನಾಯ ಪ್ರದರ್ಶನ ತೋರಿದ್ದಾರೆ.

Womens T20 World Cup: ಎರಡಂಕಿ ದಾಟದ 8 ಬ್ಯಾಟರ್​ಗಳ ಸ್ಕೋರ್: ಟಿ20 ವಿಶ್ವಕಪ್​ ಅಭ್ಯಾಸ ಪಂದ್ಯದಲ್ಲೇ ಭಾರತ ಹೀನಾಯ ಪ್ರದರ್ಶನ
INDW vs AUS W T20 World Cup
Follow us on

ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆ ಆಗಿರುವ ಬಹುನಿರೀಕ್ಷಿತ ಐಸಿಸಿ ಮಹಿಳಾ ಟಿ20 ವಿಶ್ವಕಪ್ (Womens T20 World Cup) ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಫೆಬ್ರವರಿ 10 ರಂದು ಚುಟುಕು ವಿಶ್ವಕಪ್​ಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ (SAW vs SLW) ಮಹಿಳಾ ತಂಡಗಳು ಮುಖಾಮುಖಿ ಆಗಲಿದೆ. ಇದಕ್ಕೂ ಮುನ್ನ ಎಲ್ಲ ತಂಡಗಳಿಗೆ ಎರಡು ಅಭ್ಯಾಸ ಪಂದ್ಯವನ್ನು ಏರ್ಪಡಿಸಲಾಗಿದೆ. ಹರ್ಮನ್​ಪ್ರೀತ್ ನಾಯಕತ್ವದ ಭಾರತ ಮಹಿಳಾ ತಂಡ ಕೂಡ ಪ್ರ್ಯಾಕ್ಟೀಸ್ ಮ್ಯಾಚ್ ಆಡಿದೆ. ಆದರೆ, ಆಸ್ಟ್ರೇಲಿಯಾ ವನಿತೆಯರ ವಿರುದ್ಧದ ಮೊದಲ ಅಭ್ಯಾಸ ಮ್ಯಾಚ್​ನಲ್ಲೇ ಟೀಮ್ ಇಂಡಿಯಾ (Team India) ಹೀನಾಯ ಸೋಲು ಕಂಡಿದೆ. ಭಾರತದ ಬ್ಯಾಟರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿ ಹೀನಾಯ ಪ್ರದರ್ಶನ ತೋರಿದ್ದಾರೆ.

ನ್ಯೂಲೆಂಡ್ಸ್​ನ ಕೇಪ್​ಟೌನ್​ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಕಣಕ್ಕಿಳಿದ ಆಸ್ಟ್ರೇಲಿಯಾ 10 ರನ್ ಆಗುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡಿತಾದರೂ ಬಳಿಕ ಚೇತರಿಕೆ ಕಂಡು ಉತ್ತಮ ಬ್ಯಾಟ್ ಬೀಸಿತು. ನಾಯಕಿ ಮೆಗ್ ಲ್ಯಾನಿಂಗ್ ಸೊನ್ನೆ ಸುತ್ತಿದರೆ, ತಹಿಲಾ ಮೆಘ್ರಾತ್ 2 ಹಾಗೂ ಎಲಿಸ್ಸಾ ಪೆರಿ 1 ರನ್​ಗೆ ಬೇಗನೆ ನಿರ್ಗಮಿಸಿದರು. ಈ ಸಂದರ್ಭ ಜೊತೆಯಾದ ಬೆತ್ ಮೋನೆ ಹಾಗೂ ಆಶ್ಲೆಗ್ ಗಾರ್ಡನರ್ ತಂಡಕ್ಕೆ ಆಸರೆಯಾದರು. ತಂಡದ ಮೊತ್ತವನ್ನು 50 ರನ್ ಗಡಿ ದಾಟಿಸಿ ಈ ಜೋಡಿ ಔಟಾಯಿತು.

Tagenarine Chanderpaul: ತಂದೆಯ ಹಾದಿಯಲ್ಲಿ ಮಗ..ದ್ವಿಶತಕ ಸಿಡಿಸಿ ಮಿಂಚಿದ ಮಾಜಿ ಕ್ರಿಕೆಟಿಗನ ಪುತ್ರ

ಇದನ್ನೂ ಓದಿ
Aaron Finch retirement: ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಡಿಢೀರ್ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ಟಿ20 ನಾಯಕ ಆ್ಯರೋನ್ ಫಿಂಚ್
WPL 2023: ಬಹುನಿರೀಕ್ಷಿತ ಮಹಿಳಾ ಐಪಿಎಲ್ ವೇಳಾಪಟ್ಟಿ ಪ್ರಕಟ: ಎಷ್ಟು ತಂಡಗಳು?, ಹರಾಜು ಪ್ರಕ್ರಿಯೆ ಯಾವಾಗ?
ವೆಸ್ಟ್ ಇಂಡೀಸ್ ಆರಂಭಿಕರಿಂದ ಟೆಸ್ಟ್​ ಕ್ರಿಕೆಟಿಗನಲ್ಲಿ ಹೊಸ ಇತಿಹಾಸ ಸೃಷ್ಟಿ
Heinrich Klaasen: ಕ್ಲಾಸೆನ್ ಕ್ಲಾಸ್…43 ಎಸೆತಗಳಲ್ಲಿ ಸ್ಪೋಟಕ ಶತಕ

33 ಎಸೆತಗಳಲ್ಲಿ ಮೋನೆ 28 ರನ್ ಬಾರಿಸಿದರೆ, ಗಾರ್ಡನರ್ 17 ಎಸೆತಗಳಲ್ಲಿ 22 ರನ್ ಕಲೆಹಾಕಿದರು. ಕೊನೆಯಲ್ಲಿ ಅಬ್ಬರಿಸಿದ ಜಾರ್ಜಿಯ ವರೆಹಮ್ ಹಾಗೂ ಜೆಸ್ ಜಾನ್ಸನ್ ಉತ್ತಮ ಮೊತ್ತ ಕಲೆಹಾಕಲು ನೆರವಾದರು. ವರೆಹಮ್ ಕೇವಲ 17 ಎಸೆತಗಳಲ್ಲಿ 1 ಫೋರ್, 3 ಸಿಕ್ಸರ್ ಸಿಡಿಸಿ ಅಜೇಯ 32 ರನ್ ಚಚ್ಚಿದರೆ, ಜಾನ್ಸನ್ 14 ಎಸೆತಗಳಲ್ಲಿ ಅಜೇಯ 22 ರನ್ ಬಾರಿಸಿದರು. ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಕಲೆಹಾಕಿತು. ಭಾರತ ಪರ ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್ ಹಾಗೂ ರಾಧಾ ಯಾದವ್ ತಲಾ 2 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಕಿತ್ತರು.

ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ ಮೊದಲ ಓವರ್​ನಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಡಾರ್ಸಿ ಡೌನ್ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ 50 ರನ್​ಗು ಮೊದಲೇ 6 ವಿಕೆಟ್ ಕಳೆದುಕೊಂಡಿತು. ಜೆಮಿ ರೋಡ್ರಿಗಸ್ ಹಾಗೂ ಸ್ಮೃತಿ ಮಂದಾನ ಶೂನ್ಯಕ್ಕೆ ಔಟಾದರೆ, ಶಫಾಲಿ ವರ್ಮಾ 2 ಹಾಗೂ ರಿಚ್ಚಾ ಘೋಷ್ 5 ರನ್​ಗೆ ಬ್ಯಾಟ್ ಕೆಳಗಿಟ್ಟರು. ಹರ್ಲೀನ್ ಡಿಯೊನ್ 12, ಯಸ್ತಿಕಾ ಭಾಟಿಯ 7, ಪೂಜಾ ವಸ್ತ್ರಾಕರ್ 9, ಶಿಖಾ ಪಾಂಡೆ ಹಾಗೂ ರಾಧಾ ಯಾದವ್ ತಲಾ 1 ರನ್​ಗೆ ಸುಸ್ತಾದರಯ.

ದೀಪ್ತಿ ಶರ್ಮಾ 22 ಎಸೆತಗಳಲ್ಲಿ 19 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂಜಲಿ ಶರ್ವನಿ 11 ರನ್​ ಗಳಿಸಿದರು. ಭಾರತ ಪರ ಎರಡಂಕಿ ಸ್ಕೋರ್ ದಾಟಿದ್ದು ಮೂವರು ಬ್ಯಾಟರ್​ಗಳದ್ದು ಮಾತ್ರ. 15 ಓವರ್​ಗಳಲ್ಲಿ ಟೀಮ್ ಇಂಡಿಯಾ 85 ರನ್​ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಡಾರ್ಸಿ ಡೌನ್ 3 ಓವರ್​ಗೆ 17 ರನ್ ನೀಡಿ 4 ವಿಕೆಟ್ ಕಿತ್ತರೆ, ಆಶ್ಲೆಗ್ ಗಾರ್ಡನರ್ 2, ಕಿಮ್ ಗರ್ಥ್, ಎಲಿಸ್ಸಾ ಪೆರಿ ಹಾಗೂ ಜೆಸ್ ಜಾನ್ಸನ್ ತಲಾ 1 ವಿಕೆಟ್ ಪಡೆದರು. ಆಸ್ಟ್ರೇಲಿಯಾ ಮಹಿಳಾ ತಂಡ 44 ರನ್​ಗಳ ಭರ್ಜರಿ ಜಯ ಸಾಧಿಸಿತು. ಭಾರತ ತನ್ನ ಎರಡನೇ ಅಭ್ಯಾಸ ಪಂದ್ಯವನ್ನು ಫೆಬ್ರವರಿ 8 ರಂದು ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:12 am, Tue, 7 February 23