Women’s T20 World Cup 2024: ಮಹಿಳಾ ಟಿ20 ವಿಶ್ವಕಪ್: ಯಾವ ಚಾನೆಲ್ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ
Women's T20 World Cup 2024: 9ನೇ ಆವೃತ್ತಿಯ ಟಿ20 ವಿಶ್ವಕಪ್ಗೆ ವೇದಿಕೆ ಸಿದ್ಧವಾಗಿದೆ. ಯುಎಇನಲ್ಲಿ ಇಂದಿನಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ಕದನದಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಎರಡು ಗ್ರೂಪ್ಗಳಲ್ಲಿ ವಿಂಗಡಿಸಲಾಗಿದ್ದು, ಅದರಂತೆ ಮೊದಲ ಸುತ್ತಿನಲ್ಲಿ ಗುಂಪುಗಳಲ್ಲಿನ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.
ವುಮೆನ್ಸ್ ಟಿ20 ವಿಶ್ವಕಪ್ ಟೂರ್ನಿಯು ಇಂದಿನಿಂದ ಶುರುವಾಗಲಿದೆ. ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ್ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಸಂಜೆ 3.30 ರಿಂದ ಶುರುವಾಗಲಿದ್ದು, 7 ಗಂಟೆ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಶ್ರೀಲಂಕಾ ತಂಡಗಳು ಕಣಕ್ಕಿಳಿಯಲಿದೆ.
ಇನ್ನು ಟೀಮ್ ಇಂಡಿಯಾ ನಾಳೆಯಿಂದ (ಅ.4) ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಭಾರತ ತಂಡವು ತನ್ನ ಮೊದಲ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಹಾಗೆಯೇ ಅಕ್ಟೋಬರ್ 6 ರಂದು ಜರುಗಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ.
ಅಕ್ಟೋಬರ್ 9 ರಂದು ನಡೆಯಲಿರುವ ತನ್ನ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಹಾಗೆಯೇ ಅಕ್ಟೋಬರ್ 13 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ತಂಡವು ತನ್ನ ಮೊದಲ ಸುತ್ತಿನ ಪಂದ್ಯಗಳನ್ನು ಪೂರ್ಣಗೊಳಿಸಲಿದೆ. ಈ ಎಲ್ಲಾ ಪಂದ್ಯಗಳ ಲೈವ್ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಯಾವ ಚಾನೆಲ್ಗಳಲ್ಲಿ ನೇರ ಪ್ರಸಾರ?
ಮಹಿಳಾ ಟಿ20 ವಿಶ್ವಕಪ್ನ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್ಗಳಲ್ಲಿ ಲೈವ್ ವೀಕ್ಷಿಸಬಹುದು.
ಉಚಿತವಾಗಿ ವೀಕ್ಷಿಸುವುದು ಹೇಗೆ?
ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಆ್ಯಪ್ನಲ್ಲಿ ಈ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.
ಅಕ್ಟೋಬರ್ 4, ಶುಕ್ರವಾರ | ಭಾರತ vs ನ್ಯೂಝಿಲೆಂಡ್ | 7:30 PM | ಗುಂಪು ಎ | ದುಬೈ |
ಅಕ್ಟೋಬರ್ 6, ಭಾನುವಾರ | ಭಾರತ vs ಪಾಕಿಸ್ತಾನ್ | 3:30 PM | ಗುಂಪು ಎ | ದುಬೈ |
ಅಕ್ಟೋಬರ್ 9, ಬುಧವಾರ | ಭಾರತ vs ಶ್ರೀಲಂಕಾ | 7:30 PM | ಗುಂಪು ಎ | ದುಬೈ |
ಅಕ್ಟೋಬರ್ 13, ಭಾನುವಾರ | ಭಾರತ vs ಆಸ್ಟ್ರೇಲಿಯಾ | 7:30 PM | ಗುಂಪು ಎ | ಶಾರ್ಜಾ |
ಅಕ್ಟೋಬರ್ 17, ಗುರುವಾರ | ಅರ್ಹತೆ ಪಡೆದ ಬಳಿಕ | 7:30 PM | ಸೆಮಿಫೈನಲ್ 1 | ದುಬೈ |
ಅಕ್ಟೋಬರ್ 18, ಶುಕ್ರವಾರ | ಅರ್ಹತೆ ಪಡೆದ ಬಳಿಕ | 7:30 PM | ಸೆಮಿಫೈನಲ್ 2 | ಶಾರ್ಜಾ |
ಅಕ್ಟೋಬರ್ 20, ಭಾನುವಾರ | ಅರ್ಹತೆ ಪಡೆದ ಬಳಿಕ | 7:30 PM | ಫೈನಲ್ | ದುಬೈ |
ಮಹಿಳಾ ಟಿ20 ವಿಶ್ವಕಪ್ ವಿಜೇತರ ಪಟ್ಟಿ:
ಆವೃತ್ತಿ | ವಿಜೇತ | ಗೆಲುವಿನ ಅಂತರ | ರನ್ನರ್ ಅಪ್ | ಅತಿಥೇಯ ರಾಷ್ಟ್ರ |
2009 | ಇಂಗ್ಲೆಂಡ್ | 6 ವಿಕೆಟ್ | ನ್ಯೂಝಿಲೆಂಡ್ | ಇಂಗ್ಲೆಂಡ್ |
2010 | ಆಸ್ಟ್ರೇಲಿಯಾ | 3 ರನ್ | ನ್ಯೂಝಿಲೆಂಡ್ | ವೆಸ್ಟ್ ಇಂಡೀಸ್ |
2012 | ಆಸ್ಟ್ರೇಲಿಯಾ | 4 ರನ್ | ಇಂಗ್ಲೆಂಡ್ | ಶ್ರೀಲಂಕಾ |
2014 | ಆಸ್ಟ್ರೇಲಿಯಾ | 6 ವಿಕೆಟ್ | ಇಂಗ್ಲೆಂಡ್ | ಬಾಂಗ್ಲಾದೇಶ್ |
2016 | ವೆಸ್ಟ್ ಇಂಡೀಸ್ | 8 ವಿಕೆಟ್ | ಆಸ್ಟ್ರೇಲಿಯಾ | ಭಾರತ |
2018 | ಆಸ್ಟ್ರೇಲಿಯಾ | 8 ವಿಕೆಟ್ | ಇಂಗ್ಲೆಂಡ್ | ವೆಸ್ಟ್ ಇಂಡೀಸ್ |
2020 | ಆಸ್ಟ್ರೇಲಿಯಾ | 85 ರನ್ | ಭಾರತ | ಆಸ್ಟ್ರೇಲಿಯಾ |
2023 | ಆಸ್ಟ್ರೇಲಿಯಾ | 19 ರನ್ | ಸೌತ್ ಆಫ್ರಿಕಾ | ಸೌತ್ ಆಫ್ರಿಕಾ |
Published On - 10:29 am, Thu, 3 October 24