AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s T20 World Cup 2024: ಮಹಿಳಾ ಟಿ20 ವಿಶ್ವಕಪ್​ಗೆ 10 ತಂಡಗಳು ಪ್ರಕಟ

Women's T20 World Cup 2024: ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ಮಹಿಳಾ ಟಿ20 ವಿಶ್ವಕಪ್​ ಅನ್ನು ಯುಎಇ ದೇಶಕ್ಕೆ ಸ್ಥಳಾಂತರಿಸಲಾಗಿದೆ. ಅಕ್ಟೋಬರ್ 3 ರಿಂದ ಆರಂಭವಾಗಲಿರುವ 10 ತಂಡಗಳ ನಡುವಣ ವುಮೆನ್ಸ್ ಟಿ20 ವರ್ಲ್ಡ್ ಕಪ್ ಟೂರ್ನಿಯು ಅಕ್ಟೋಬರ್ 20 ರವರೆಗೆ ನಡೆಯಲಿದೆ. ಈ ಟೂರ್ನಿಗಾಗಿ ಇದೀಗ ಎಲ್ಲಾ ತಂಡಗಳನ್ನು ಘೋಷಿಸಲಾಗಿದೆ.

Women's T20 World Cup 2024: ಮಹಿಳಾ ಟಿ20 ವಿಶ್ವಕಪ್​ಗೆ 10 ತಂಡಗಳು ಪ್ರಕಟ
T20 World Cup 2024
TV9 Web
| Updated By: ಝಾಹಿರ್ ಯೂಸುಫ್|

Updated on: Sep 24, 2024 | 9:55 AM

Share

ಅಕ್ಟೋಬರ್ 3 ರಿಂದ ಯುಎಇ ನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್​ಗಾಗಿ ಎಲ್ಲಾ ತಂಡಗಳನ್ನು ಪ್ರಕಟಿಸಲಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿದ್ದು, ಈ ಟೀಮ್​ಗಳನ್ನು ಗ್ರೂಪ್-ಎ ಮತ್ತು ಗ್ರೂಪ್-ಬಿ ಎಂದು ವಿಂಗಡಿಸಲಾಗಿದೆ. ಇಲ್ಲಿ ಗ್ರೂಪ್-ಎ ನಲ್ಲಿ  ಆಸ್ಟ್ರೇಲಿಯಾ, ಭಾರತ, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ ತಂಡಗಳು ಕಾಣಿಸಿಕೊಂಡರೆ, ಗ್ರೂಪ್​-ಬಿ ನಲ್ಲಿ ಸೌತ್ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ್ ಮತ್ತು ಸ್ಕಾಟ್ಲೆಂಡ್ ತಂಡಗಳು ಕಣಕ್ಕಿಳಿಯಲಿವೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿರುವ 10 ತಂಡಗಳ ಆಟಗಾರ್ತಿಯರ ಪಟ್ಟಿ ಈ ಕೆಳಗಿನಂತಿದೆ…

ಆಸ್ಟ್ರೇಲಿಯಾ ತಂಡ: ಅಲಿಸ್ಸಾ ಹೀಲಿ (ನಾಯಕಿ), ಡಾರ್ಸಿ ಬ್ರೌನ್, ಆಶ್ ಗಾರ್ಡ್ನರ್, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್ (ಉಪನಾಯಕಿ), ಸೋಫಿ ಮೊಲಿನೆಕ್ಸ್, ಬೆತ್ ಮೂನಿ, ಎಲ್ಲಿಸ್ ಪೆರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಟೈಲಾ ವ್ಲೇಮಿನ್ , ಜಾರ್ಜಿಯಾ ವೇರ್ಹ್ಯಾಮ್.

ನ್ಯೂಝಿಲೆಂಡ್ ತಂಡ: ಸೋಫಿ ಡಿವೈನ್ (ನಾಯಕಿ), ಸುಜಿ ಬೇಟ್ಸ್, ಈಡನ್ ಕಾರ್ಸನ್, ಇಜ್ಜಿ ಗೇಜ್, ಮ್ಯಾಡಿ ಗ್ರೀನ್, ಬ್ರೂಕ್ ಹ್ಯಾಲಿಡೇ, ಫ್ರಾನ್ ಜೊನಾಸ್, ಲೀ ಕಾಸ್ಪರೆಕ್, ಅಮೆಲಿಯಾ ಕೆರ್, ಜೆಸ್ ಕೆರ್, ರೋಸ್ಮರಿ ಮೈರ್, ಮೊಲ್ಲಿ ಪೆನ್‌ಫೋಲ್ಡ್, ಜಾರ್ಜಿಯಾ ಪ್ಲಿಮ್ಮರ್, ಹನ್ನಾ ರೋವ್, ಲಿಯಾ ತಹುಹು.

ಪಾಕಿಸ್ತಾನ್ ತಂಡ:  ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಗುಲ್ ಫಿರೋಜಾ, ಇರಾಮ್ ಜಾವೇದ್, ಮುನೀಬಾ ಅಲಿ, ನಶ್ರಾ ಸುಂಧು, ನಿದಾ ದಾರ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಸಿದ್ರಾ ಅಮೀನ್, ಸೈಯದಾ ಅರೂಬ್ ಶಾ , ತಸ್ಮಿಯಾ ರುಬಾಬ್, ತುಬಾ ಹಸನ್.

ಶ್ರೀಲಂಕಾ ತಂಡ:  ಚಾಮರಿ ಅಥಾಪತ್ತು (ನಾಯಕಿ), ಅನುಷ್ಕಾ ಸಂಜೀವನಿ, ಹರ್ಷಿತಾ ಮಾಧವಿ, ನೀಲಾಕ್ಷಿಕಾ ಡಿ ಸಿಲ್ವಾ, ಇನೋಕಾ ರಣವೀರ, ಹಾಸಿನಿ ಪೆರೇರಾ, ಕವಿಶಾ ದಿಲ್ಹಾರಿ, ಸಚಿನಿ ನಿಸಂಸಲಾ, ವಿಶ್ಮಿ ಗುಣರತ್ನೆ, ಉದೇಶಿಕಾ ಪ್ರಬೋಧನಿ, ಅಚಿನಿ ಕುಲಸೂರಿಯಾ, ಪ್ರಿಯದರ್ಶಿನಿ, ಸುಗಂದ್ಶಿಕಾ ಕುಮಾರಿ, ಅಮ ಕಾಂಚನಾ.

ಬಾಂಗ್ಲಾದೇಶ್ ತಂಡ: ನಿಗರ್ ಸುಲ್ತಾನಾ ಜೋಟಿ (ನಾಯಕಿ), ನಹಿದಾ ಅಕ್ಟರ್, ಮುರ್ಷಿದಾ ಖಾತುನ್, ಶೋರ್ನಾ ಅಕ್ಟರ್, ಮಾರುಫಾ ಅಕ್ಟರ್, ರಬೆಯಾ, ಶ್ರೀಮತಿ. ರಿತು ಮೋನಿ, ಸೋಭಾನಾ ಮೊಸ್ತರಿ, ದಿಲಾರಾ ಅಕ್ಟರ್ (ವಿಕೆಟ್ ಕೀಪರ್), ಸುಲ್ತಾನಾ ಖಾತುನ್, ಜಹನಾರಾ ಆಲಂ, ಫಾಹಿಮಾ ಖಾತುನ್, ತಾಜ್ ನೆಹರ್, ದಿಶಾ ಬಿಸ್ವಾಸ್, ಶತಿ ರಾಣಿ.

ಇಂಗ್ಲೆಂಡ್ ತಂಡ:  ಹೀದರ್ ನೈಟ್ (ನಾಯಕಿ), ಡ್ಯಾನಿ ವ್ಯಾಟ್, ಸೋಫಿಯಾ ಡಂಕ್ಲಿ, ನ್ಯಾಟ್ ಸಿವರ್-ಬ್ರಂಟ್, ಆಲಿಸ್ ಕ್ಯಾಪ್ಸಿ, ಆಮಿ ಜೋನ್ಸ್ (ವಿಕೆಟ್ ಕೀಪರ್), ಸೋಫಿ ಎಕ್ಲೆಸ್ಟೋನ್, ಚಾರ್ಲಿ ಡೀನ್, ಸಾರಾ ಗ್ಲೆನ್, ಲಾರೆನ್ ಬೆಲ್, ಮಾಯಾ ಬೌಚಿಯರ್, ಲಿನ್ಸೆ ಸ್ಮಿತ್, ಫ್ರೇಯಾ ಕೆಂಪ್, ಡ್ಯಾನಿ ಗಿಬ್ಸನ್, ಬೆಸ್ ಹೀತ್.

ಸ್ಕಾಟ್ಲೆಂಡ್ ತಂಡ:  ಕ್ಯಾಥರಿನ್ ಬ್ರೈಸ್ (ನಾಯಕಿ), ಸಾರಾ ಬ್ರೈಸ್ (ಉಪನಾಯಕಿ), ಲೋರ್ನಾ ಜ್ಯಾಕ್-ಬ್ರೌನ್, ಅಬ್ಬಿ ಐಟ್ಕೆನ್-ಡ್ರಮಂಡ್, ಅಬ್ತಾಹಾ ಮಕ್ಸೂದ್, ಸಾಸ್ಕಿಯಾ ಹಾರ್ಲೆ, ಕ್ಲೋಯ್ ಅಬೆಲ್, ಪ್ರಿಯಾನಾಜ್ ಚಟರ್ಜಿ, ಮೇಗನ್ ಮೆಕ್‌ಕಾಲ್, ಡಾರ್ಸಿ ಕಾರ್ಟರ್, ಐಲ್ಸಾ ಲಿಸ್ಟೆರಿ, , ರಾಚೆಲ್ ಸ್ಲೇಟರ್, ಕ್ಯಾಥರೀನ್ ಫ್ರೇಸರ್, ಒಲಿವಿಯಾ ಬೆಲ್.

ಸೌತ್ ಆಫ್ರಿಕಾ ತಂಡ: ಲಾರಾ ವೊಲ್ವಾರ್ಡ್ಟ್ (ನಾಯಕಿ), ಅನ್ನೆಕೆ ಬಾಷ್, ತಜ್ಮಿನ್ ಬ್ರಿಟ್ಸ್, ನಡಿನ್ ಡಿ ಕ್ಲರ್ಕ್, ಅನ್ನೇರಿ ಡೆರ್ಕ್ಸೆನ್, ಮೈಕೆ ಡಿ ರಿಡ್ಡರ್, ಅಯಂಡಾ ಹ್ಲುಬಿ, ಸಿನಾಲೊ ಜಫ್ತಾ, ಮರಿಜಾನ್ನೆ ಕಪ್, ಅಯಾಬೊಂಗಾ ಖಾಕಾ, ಸುನೆ ಲೂಸ್, ನಾನ್ಕುಲುಲೆಕೊ ನಾಯ್ಡು ಮ್ಲಾಬಾ, ಸ್ಮಿನ್ ಸೆಖ್ನಿ ನಾಯ್ಡು , ಕ್ಲೋಯ್ ಟ್ರಯಾನ್.

ವೆಸ್ಟ್ ಇಂಡೀಸ್ ತಂಡ:  ಹೇಲಿ ಮ್ಯಾಥ್ಯೂಸ್ (ನಾಯಕಿ), ಆಲಿಯಾ ಅಲೀನ್, ಶಾಮಿಲಿಯಾ ಕಾನೆಲ್, ಡಿಯಾಂಡ್ರಾ ಡಾಟಿನ್, ಶೆಮೈನ್ ಕ್ಯಾಂಪ್‌ಬೆಲ್ಲೆ (ಉಪನಾಯಕಿ/ವಿಕೆಟ್ ಕೀಪರ್), ಅಶ್ಮಿನಿ ಮುನಿಸಾರ್, ಅಫಿ ಫ್ಲೆಚರ್, ಸ್ಟಾಫನಿ ಟೇಲರ್, ಚಿನೆಲ್ಲೆ ಹೆನ್ರಿ, ಚೆಡಿಯನ್ ಜೋಸೆಫ್, ಚೀಡಿಯನ್ ನೇಷನ್ ಕರಿಷ್ಮಾ ರಾಮ್ಹರಾಕ್, ಮ್ಯಾಂಡಿ ಮಾಂಗ್ರು, ನೆರಿಸ್ಸಾ ಕ್ರಾಫ್ಟನ್.

ಇದನ್ನೂ ಓದಿ: IPL 2025: CSK ತಂಡ ಉಳಿಸಿಕೊಳ್ಳುವ ಐವರು ಆಟಗಾರರು ಇವರಂತೆ..!

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ (ಫಿಟ್‌ನೆಸ್‌ ಟೆಸ್ಟ್ ಬಳಿಕ), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯದ್, ಶ್ರೇಯಾಂಕಾ ಪಾಟೀಲ್ (ಫಿಟ್​ನೆಸ್ ಟೆಸ್ಟ್ ಬಳಿಕ), ಸಜನಾ ಸಜೀವನ್.

ಮೀಸಲು ಆಟಗಾರ್ತಿಯರು: ಉಮಾ ಚೆಟ್ರಿ (ವಿಕೆಟ್ ಕೀಪರ್), ತನುಜಾ ಕನ್ವರ್, ಸೈಮಾ ಠಾಕೂರ್.