ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗೆ ನ್ಯೂಝಿಲೆಂಡ್ ಎಂಟ್ರಿ

|

Updated on: Oct 19, 2024 | 7:22 AM

Women’s T20 World Cup 2024: ವುಮೆನ್ಸ್ ಟಿ20 ವರ್ಲ್ಡ್​ಕಪ್​ನಲ್ಲಿ ನ್ಯೂಝಿಲೆಂಡ್ ತಂಡವು ಮೂರನೇ ಬಾರಿಗೆ ಫೈನಲ್​ಗೆ ಪ್ರವೇಶಿಸಿದೆ. 2009 ರಲ್ಲಿ ಮತ್ತು 2010 ರಲ್ಲಿ ಫೈನಲ್ ಆಡಿದ್ದ ಕಿವೀಸ್ ಪಡೆ ಅಂತಿಮ ಹಣಾಹಣಿಯಲ್ಲಿ ಸೋಲನುಭವಿಸಿದ್ದರು. ಇದೀಗ 2024 ರಲ್ಲಿ ಫೈನಲ್​ಗೆ ಪ್ರವೇಶಿಸಿರುವ ನ್ಯೂಝಿಲೆಂಡ್ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ.

ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗೆ ನ್ಯೂಝಿಲೆಂಡ್ ಎಂಟ್ರಿ
NZ vs WI
Follow us on

ಮಹಿಳಾ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್​ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ನ್ಯೂಝಿಲೆಂಡ್ ಫೈನಲ್‌ಗೆ ಪ್ರವೇಶಿಸಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕಿ ಸೋಫಿ ಡಿವೈನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಕಿವೀಸ್ ಪಡೆಗೆ ಸುಝಿ ಬೆಟ್ಸ್ (26) ಹಾಗೂ ಜಾರ್ಜಿಯಾ ಪ್ಲಿಮ್ಮರ್ (33) ಉತ್ತಮ ಆರಂಭ ಒದಗಿಸಿದ್ದರು. ಆದರೆ ಆ ಬಳಿಕ ಬಂದ ಅಮೆಲಿಯಾ ಕೆರ್ (7), ಸೋಫಿ ಡಿವೈನ್ (12) ಹಾಗೂ ಬ್ರೂಕ್ ಹಲ್ಲಿಡೆ (18) ಬೇಗನೆ ಔಟಾದರು.

ಇನ್ನು ಕೊನೆಯ ಹಂತದಲ್ಲಿ ಕಣಕ್ಕಿಳಿದ ಇಸಾಬೆಲ್ಲೆ 20 ರನ್ ಗಳ ಕೊಡುಗೆ ನೀಡಿದರು. ಈ ಮೂಲಕ ನ್ಯೂಝಿಲೆಂಡ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 128 ರನ್ ಕಲೆಹಾಕಿತು.

ಕೇವಲ 129 ರನ್ ಗಳ ಗುರಿ:

20 ಓವರ್‌ಗಳಲ್ಲಿ 129 ರನ್ ಗಳ ಸುಲಭ ಗುರಿ ಪಡೆದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಹೇಲಿ ಮ್ಯಾಥ್ಯೂಸ್‌ (15) ಹಾಗೂ ಕಿಯಾನಾ ಜೋಸೆಫ್ (12) ಬೇಗನೆ ನಿರ್ಗಮಿಸಿದರೆ, ಆ ಬಳಿಕ ಬಂದ ಶೆಮೈನ್ (3) ಹಾಗೂ ಸ್ಟಾಫನಿ ಟೇಲರ್ (13) ಬಂದ ವೇಗದಲ್ಲೇ ಹಿಂತಿರುಗಿದರು.

ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನುಭವಿ ಆಟಗಾರ್ತಿ ಡಿಯಾಂಡ್ರಾ ಡಾಟಿನ್ 22 ಎಸೆತಗಳಲ್ಲಿ 33 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್ ಗಳಿಂದ ಉತ್ತಮ ಸಾಥ್ ದೊರೆತಿರಲಿಲ್ಲ.

ಇದಾಗ್ಯೂ ಕೊನೆಯ ಓವರ್‌ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು ಕೇವಲ 15 ರನ್ ಗಳ ಅವಶ್ಯಕತೆಯಿತ್ತು. ಅಂತಿಮ ಓವರ್ ಎಸೆದ ಸುಝಿ ಬೆಟ್ಸ್ ಕೇವಲ 6 ರನ್ ಮಾತ್ರ ನೀಡಿದರು. ಈ ಮೂಲಕ ವೆಸ್ ಇಂಡೀಸ್ ತಂಡವನ್ನು 20 ಓವರ್‌ಗಳಲ್ಲಿ 128/8 ರನ್ ಗಳಿಗೆ ನಿಯಂತ್ರಿಸಿ ನ್ಯೂಝಿಲೆಂಡ್ ತಂಡ 8 ರನ್ ಗಳ ರೋಚಕ ಜಯ ಸಾಧಿಸಿದೆ.

ಈ ರೋಚಕ ಗೆಲುವಿನೊಂದಿಗೆ ನ್ಯೂಝಿಲೆಂಡ್ ಫೈನಲ್‌ಗೆ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಹೇಲಿ ಮ್ಯಾಥ್ಯೂಸ್ (ನಾಯಕಿ) , ಕಿಯಾನಾ ಜೋಸೆಫ್ , ಸ್ಟಾಫನಿ ಟೇಲರ್ , ಶೆಮೈನ್ ಕ್ಯಾಂಪ್ಬೆಲ್ಲೆ (ವಿಕೆಟ್ ಕೀಪರ್) , ಡಿಯಾಂಡ್ರಾ ಡಾಟಿನ್ , ಚಿನೆಲ್ಲೆ ಹೆನ್ರಿ , ಜೈದಾ ಜೇಮ್ಸ್ , ಅಶ್ಮಿನಿ ಮುನಿಸರ್ , ಆಲಿಯಾ ಅಲೀನ್ , ಅಫಿ ಫ್ಲೆಚರ್ , ಕರಿಷ್ಮಾ ರಾಮ್​​ಹರಕ್.

ಇದನ್ನೂ ಓದಿ: IPL 2025: ಮೂವರು ಆಟಗಾರರಿಗೆ 55 ಕೋಟಿ ರೂ. ನೀಡಿದ SRH

ನ್ಯೂಝಿಲೆಂಡ್ ಪ್ಲೇಯಿಂಗ್ 11: ಸುಝಿ ಬೇಟ್ಸ್ , ಜಾರ್ಜಿಯಾ ಪ್ಲಿಮ್ಮರ್ , ಅಮೆಲಿಯಾ ಕೆರ್ , ಸೋಫಿ ಡಿವೈನ್ (ನಾಯಕಿ) ಬ್ರೂಕ್ ಹ್ಯಾಲಿಡೆ, ಮ್ಯಾಡಿ ಗ್ರೀನ್ , ಇಸಾಬೆಲ್ಲಾ ಗೇಜ್ (ವಿಕೆಟ್ ಕೀಪರ್) , ರೋಸ್ಮರಿ ಮೈರ್ , ಲೀ ತಹುಹು , ಈಡನ್ ಕಾರ್ಸನ್ , ಫ್ರಾನ್ ಜೋನಾಸ್.

 

Published On - 7:21 am, Sat, 19 October 24