IPL 2025: ಐಪಿಎಲ್ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಅತ್ತ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಈಗಾಗಲೇ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ.
ಇಲ್ಲಿ ಎಸ್ಆರ್ಹೆಚ್ ತಂಡ ಮೊದಲ ರಿಟೈನ್ ಸ್ಪೋಟಕ ದಾಂಡಿಗ ಹೆನ್ರಿಕ್ ಕ್ಲಾಸೆನ್. ಕಳೆದೆರಡು ಸೀಸನ್ಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ಸೌತ್ ಆಫ್ರಿಕಾ ಆಟಗಾರ ಕ್ಲಾಸೆನ್ ಅವರನ್ನು ಬರೋಬ್ಬರಿ 23 ಕೋಟಿ ರೂ. ನೀಡಿ ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ.
ಇನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಎರಡನೇ ರಿಟೈನ್ ನಾಯಕ ಪ್ಯಾಟ್ ಕಮಿನ್ಸ್. ಕಳೆದ ಸೀಸನ್ನಲ್ಲಿ ಎಸ್ಆರ್ಹೆಚ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿರುವ ಆಸ್ಟ್ರೇಲಿಯಾ ಆಟಗಾರನಿಗೆ 18 ಕೋಟಿ ರೂ. ನೀಡಲು ಎಸ್ಆರ್ಹೆಚ್ ಫ್ರಾಂಚೈಸಿ ಮುಂದಾಗಿದೆ.
ಹಾಗೆಯೇ ಮೂರನೇ ರಿಟೈನ್ ಆಗಿ ಅಭಿಷೇಕ್ ಶರ್ಮಾ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ. ಕಳೆದ ಸೀಸನ್ನಲ್ಲಿ ಎಸ್ಆರ್ಹೆಚ್ ಪರ ಆರಂಭಿಕನಾಗಿ ಕಣಕ್ಕಿಳಿದಿರುವ ಅಭಿಷೇಕ್ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದಿದ್ದರು. ಹೀಗಾಗಿ ಅವರನ್ನು 14 ಕೋಟಿ ರೂ. ರಿಟೈನ್ ಮಾಡಿಕೊಳ್ಳಲು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಿರ್ಧರಿಸಿದೆ.
ಅಂದರೆ ಇಲ್ಲಿ ಮೂವರು ಆಟಗಾರರಿಗಾಗಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಒಟ್ಟು 55 ಕೋಟಿ ರೂ. ಅನ್ನು ವ್ಯಯಿಸಿದೆ. ಈ 55 ಕೋಟಿ ರೂ. ಅನ್ನು ಒಟ್ಟು ಹರಾಜು ಮೊತ್ತ 120 ಕೋಟಿ ರೂ.ಯಿಂದ ಕಡಿತ ಮಾಡಲಾಗುತ್ತದೆ. ಅದರಂತೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಳಿ ಸದ್ಯ ಉಳಿದಿರುವುದು 65 ಕೋಟಿ ರೂ. ಮಾತ್ರ.
ಇತ್ತ ಐಪಿಎಲ್ ಮೆಗಾ ಹರಾಜು ನಿಯಮದ ಪ್ರಕಾರ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಇದಕ್ಕಾಗಿ ಒಟ್ಟು 79 ಕೋಟಿ ರೂ. ಅನ್ನು ವ್ಯಯಿಸಬೇಕಾಗುತ್ತದೆ. ಅದರಂತೆ ಇದೀಗ 55 ಕೋಟಿ ರೂ. ಖರ್ಚು ಮಾಡಿರುವ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಇನ್ನುಳಿದ 24 ಕೋಟಿಯಲ್ಲಿ ಮತ್ತೆ ಮೂವರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಹಿಗಾಗಿ ಮೆಗಾ ಹರಾಜಿಗೂ ಮುನ್ನ SRH ತಂಡದಲ್ಲಿ ಸ್ಟಾರ್ ಆಟಗಾರರ ರಿಟೈನ್ ಅನ್ನು ನಿರೀಕ್ಷಿಸಬಹುದು.
Published On - 10:23 am, Thu, 17 October 24