ಏಕದಿನ ವಿಶ್ವಕಪ್​ಗೆ ಭಾರತ, ಪಾಕಿಸ್ತಾನ್ ತಂಡಗಳು ಪ್ರಕಟ

 ICC Women's World Cup 2025: ಭಾರತದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ಸೆಪ್ಟೆಂಬರ್ 30 ರಿಂದ ಶುರುವಾಗಲಿದೆ. ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಬಾಂಗ್ಲಾದೇಶ್, ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಕಣಕ್ಕಿಳಿಯಲಿವೆ.

ಏಕದಿನ ವಿಶ್ವಕಪ್​ಗೆ ಭಾರತ, ಪಾಕಿಸ್ತಾನ್ ತಂಡಗಳು ಪ್ರಕಟ
India Vs Pakistan

Updated on: Aug 25, 2025 | 2:15 PM

ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ಗಾಗಿ (Women’s World Cup 2025) ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಹರ್ಮನ್​ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕಿಯಾಗಿ ಸ್ಮೃತಿ ಮಂಧಾನ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 30 ರಿಂದ ಶುರುವಾಗಲಿರುವ ಈ ಟೂರ್ನಿಗೆ ಪಾಕಿಸ್ತಾನ್ ತಂಡವನ್ನು ಸಹ ಘೋಷಿಸಲಾಗಿದೆ.

ಹೈಬ್ರಿಡ್ ಮಾದರಿಯಲ್ಲಿ ಏಕದಿನ ವಿಶ್ವಕಪ್ ಟೂರ್ನಿ:

ಮಹಿಳಾ ಏಕದಿನ ವಿಶ್ವಕಪ್​ 2025ರ ಎಲ್ಲಾ ಬಹುತೇಕ ಮ್ಯಾಚ್​ಗಳು ಭಾರತದಲ್ಲೇ ನಡೆಯಲಿದೆ. ಇದಾಗ್ಯೂ ಪಾಕಿಸ್ತಾನ್ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತದೆ. ಭಾರತದಲ್ಲಿ ಪಂದ್ಯಗಳನ್ನಾಡಲು ಪಾಕಿಸ್ತಾನ್ ನಿರಾಕರಿಸಿದ್ದು, ಹೀಗಾಗಿ ಬಿಸಿಸಿಐ ಹೈಬ್ರಿಡ್ ಮಾದರಿಯಲ್ಲಿ ಮಹಿಳಾ ಏಕದಿನ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ.

ಮಹಿಳಾ ಏಕದಿನ ವಿಶ್ವಕಪ್​ಗೆ ಭಾರತ, ಪಾಕಿಸ್ತಾನ್ ತಂಡಗಳು:

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿಕೆಟ್ ಕೀಪರ್), ಕ್ರಾಂತಿ ಗೌಡ್, ಅಮನ್​ಜೋತ್ ಕೌರ್, ರಾಧಾ ಯಾದವ್, ಶ್ರೀ ಚಾರಣಿ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸ್ನೇಹ್ ರಾಣಾ.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ  ಶಾಕಿಬ್ ಅಲ್ ಹಸನ್..!

ಪಾಕಿಸ್ತಾನ್ ತಂಡ: ಫಾತಿಮಾ ಸನಾ (ನಾಯಕಿ), ಮುನೀಬಾ ಅಲಿ ಸಿದ್ದಿಕಿ (ಉಪನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಐಮನ್ ಫಾತಿಮಾ, ನಶ್ರಾ ಸುಂಧು, ನತಾಲಿಯಾ ಪರ್ವೇಝ್, ಒಮೈಮಾ ಸೊಹೈಲ್, ರಮೀನ್ ಶಮೀಮ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಶಾವಾಲ್ ಝುಲ್ಫಿಕರ್, ಸಿದ್ರಾ ಅಮಿನ್, ಸಿದ್ರಾ ಅಮಿನ್, ಸಿದ್ರಾ ನವಾಝ್, ಸೈದಾ ಅರೂಬ್ ಶಾ.

ಮಹಿಳಾ ಏಕದಿನ ವಿಶ್ವಕಪ್ 2025 ವೇಳಾಪಟ್ಟಿ:

  • ಮಂಗಳವಾರ, ಸೆಪ್ಟೆಂಬರ್ 30 ಭಾರತ vs ಶ್ರೀಲಂಕಾ ಗುವಾಹಟಿ ಮಧ್ಯಾಹ್ನ 3 ಗಂಟೆ
  • ಬುಧವಾರ, ಅಕ್ಟೋಬರ್ 1ಆಸ್ಟ್ರೇಲಿಯಾ vs ನ್ಯೂಜಿಲೆಂಡ್ಇಂದೋರ್ಮಧ್ಯಾಹ್ನ 3 ಗಂಟೆ
  • ಗುರುವಾರ, ಅಕ್ಟೋಬರ್ 2ಬಾಂಗ್ಲಾದೇಶ್ vs ಪಾಕಿಸ್ತಾನ್ಕೊಲಂಬೊಮಧ್ಯಾಹ್ನ 3 ಗಂಟೆ
  • ಶುಕ್ರವಾರ, ಅಕ್ಟೋಬರ್ 3 ಇಂಗ್ಲೆಂಡ್ vs ಸೌತ್ ಆಫ್ರಿಕಾ ಗುವಾಹಟಿ  ಮಧ್ಯಾಹ್ನ 3 ಗಂಟೆಗೆ
  • ಶನಿವಾರ, ಅಕ್ಟೋಬರ್ 4ಆಸ್ಟ್ರೇಲಿಯಾ vs ಶ್ರೀಲಂಕಾಕೊಲಂಬೊಮಧ್ಯಾಹ್ನ 3 ಗಂಟೆ
  • ಭಾನುವಾರ, ಅಕ್ಟೋಬರ್ 5ಭಾರತ vs ಪಾಕಿಸ್ತಾನ್ಕೊಲಂಬೊಮಧ್ಯಾಹ್ನ 3 ಗಂಟೆ
  • ಸೋಮವಾರ, ಅಕ್ಟೋಬರ್ 6ನ್ಯೂಝಿಲೆಂಡ್ vs ಸೌತ್ ಆಫ್ರಿಕಾಇಂದೋರ್ಮಧ್ಯಾಹ್ನ 3 ಗಂಟೆ
  • ಮಂಗಳವಾರ, ಅಕ್ಟೋಬರ್ 7 ಇಂಗ್ಲೆಂಡ್ vs ಬಾಂಗ್ಲಾದೇಶ್ ಗುವಾಹಟಿ ಮಧ್ಯಾಹ್ನ 3 ಗಂಟೆ
  • ಬುಧವಾರ, ಅಕ್ಟೋಬರ್ 8ಆಸ್ಟ್ರೇಲಿಯಾ vs ಪಾಕಿಸ್ತಾನ್ಕೊಲಂಬೊಮಧ್ಯಾಹ್ನ 3 ಗಂಟೆ
  • ಗುರುವಾರ, ಅಕ್ಟೋಬರ್ 9 ಭಾರತ vs ಸೌತ್ ಆಫ್ರಿಕಾ ವಿಶಾಖಪಟ್ಟಣ ಮಧ್ಯಾಹ್ನ 3 ಗಂಟೆ
  • ಶುಕ್ರವಾರ, ಅಕ್ಟೋಬರ್ 10ನ್ಯೂಝಿಲೆಂಡ್ vs ಬಾಂಗ್ಲಾದೇಶ್ವಿಶಾಖಪಟ್ಟಣಮಧ್ಯಾಹ್ನ 3 ಗಂಟೆ
  • ಶನಿವಾರ, ಅಕ್ಟೋಬರ್ 11 ಇಂಗ್ಲೆಂಡ್ vs ಶ್ರೀಲಂಕಾ ಗುವಾಹಟಿ ಮಧ್ಯಾಹ್ನ 3 ಗಂಟೆ
  • ಭಾನುವಾರ, ಅಕ್ಟೋಬರ್ 12ಭಾರತ vs ಆಸ್ಟ್ರೇಲಿಯಾವಿಶಾಖಪಟ್ಟಣಮಧ್ಯಾಹ್ನ 3 ಗಂಟೆ
  • ಸೋಮವಾರ, ಅಕ್ಟೋಬರ್ 13 ಸೌತ್ ಆಫ್ರಿಕಾ vs ಬಾಂಗ್ಲಾದೇಶ್ ವಿಶಾಖಪಟ್ಟಣ  ಮಧ್ಯಾಹ್ನ 3 ಗಂಟೆ
  • ಮಂಗಳವಾರ, ಅಕ್ಟೋಬರ್ 14ನ್ಯೂಝಿಲೆಂಡ್ vs ಶ್ರೀಲಂಕಾಕೊಲಂಬೊಮಧ್ಯಾಹ್ನ 3 ಗಂಟೆ
  • ಬುಧವಾರ, ಅಕ್ಟೋಬರ್ 15ಇಂಗ್ಲೆಂಡ್ vs ಪಾಕಿಸ್ತಾನ್ಕೊಲಂಬೊಮಧ್ಯಾಹ್ನ 3 ಗಂಟೆ
  • ಗುರುವಾರ, ಅಕ್ಟೋಬರ್ 16ಆಸ್ಟ್ರೇಲಿಯಾ vs ಬಾಂಗ್ಲಾದೇಶ್ವಿಶಾಖಪಟ್ಟಣಮಧ್ಯಾಹ್ನ 3 ಗಂಟೆ
  • ಶುಕ್ರವಾರ, ಅಕ್ಟೋಬರ್ 17ಸೌತ್ ಆಫ್ರಿಕಾ vs ಶ್ರೀಲಂಕಾಕೊಲಂಬೊಮಧ್ಯಾಹ್ನ 3 ಗಂಟೆ
  • ಶನಿವಾರ, ಅಕ್ಟೋಬರ್ 18ನ್ಯೂಝಿಲೆಂಡ್ vs ಪಾಕಿಸ್ತಾನ್ಕೊಲಂಬೊಮಧ್ಯಾಹ್ನ 3 ಗಂಟೆ
  • ಭಾನುವಾರ, ಅಕ್ಟೋಬರ್ 19ಭಾರತ vs ಇಂಗ್ಲೆಂಡ್ಇಂದೋರ್ಮಧ್ಯಾಹ್ನ 3 ಗಂಟೆ
  • ಸೋಮವಾರ, ಅಕ್ಟೋಬರ್ 20ಶ್ರೀಲಂಕಾ vs ಬಾಂಗ್ಲಾದೇಶ್ಕೊಲಂಬೊಮಧ್ಯಾಹ್ನ 3 ಗಂಟೆ
  • ಮಂಗಳವಾರ, ಅಕ್ಟೋಬರ್ 21ಸೌತ್ ಆಫ್ರಿಕಾ vs ಪಾಕಿಸ್ತಾನ್ಕೊಲಂಬೊಮಧ್ಯಾಹ್ನ 3 ಗಂಟೆ
  • ಬುಧವಾರ, ಅಕ್ಟೋಬರ್ 22ಆಸ್ಟ್ರೇಲಿಯಾ vs ಇಂಗ್ಲೆಂಡ್ಇಂದೋರ್ಮಧ್ಯಾಹ್ನ 3 ಗಂಟೆ
  • ಗುರುವಾರ, ಅಕ್ಟೋಬರ್ 23 ಭಾರತ vs ನ್ಯೂಝಿಲೆಂಡ್ ಗುವಾಹಟಿ ಮಧ್ಯಾಹ್ನ 3 ಗಂಟೆ
  • ಶುಕ್ರವಾರ, ಅಕ್ಟೋಬರ್ 24ಪಾಕಿಸ್ತಾನ್ vs ಶ್ರೀಲಂಕಾಕೊಲಂಬೊಮಧ್ಯಾಹ್ನ 3 ಗಂಟೆ
  • ಶನಿವಾರ, ಅಕ್ಟೋಬರ್ 25ಆಸ್ಟ್ರೇಲಿಯಾ v ಶ್ರೀಲಂಕಾಇಂದೋರ್ಮಧ್ಯಾಹ್ನ 3 ಗಂಟೆ
  • ಭಾನುವಾರ, ಅಕ್ಟೋಬರ್ 26 ಇಂಗ್ಲೆಂಡ್ vs ನ್ಯೂಝಿಲೆಂಡ್ ಗುವಾಹಟಿ ಬೆಳಿಗ್ಗೆ 11
  • ಭಾನುವಾರ, ಅಕ್ಟೋಬರ್ 26ಭಾರತ vs ಬಾಂಗ್ಲಾದೇಶ್—ನವಿ ಮುಂಬೈಮಧ್ಯಾಹ್ನ 3 ಗಂಟೆ
  • ಬುಧವಾರ, ಅಕ್ಟೋಬರ್ 29ಸೆಮಿಫೈನಲ್ 1ಗುವಾಹಟಿ/ಕೊಲಂಬೊಮಧ್ಯಾಹ್ನ 3 ಗಂಟೆ
  • ಗುರುವಾರ, ಅಕ್ಟೋಬರ್ 30ಸೆಮಿಫೈನಲ್ 2ನವಿ ಮುಂಬೈಮಧ್ಯಾಹ್ನ 3 ಗಂಟೆ
  • ಭಾನುವಾರ, ನವೆಂಬರ್ 2ಅಂತಿಮಕೊಲಂಬೊ/ನವಿ ಮುಂಬೈಮಧ್ಯಾಹ್ನ 3 ಗಂಟೆಗೆ