ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ಗೆ (WPL 2023) ಅದ್ಧೂರಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಬರೋಬ್ಬರಿ 143 ರನ್ಗಳ ಅಮೋಘ ಗೆಲುವು ಕಂಡಿತು. ಇದೀಗ ಎರಡನೇ ದಿನ ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಇದು ಈ ಟೂರ್ನಿಯ ಮೊದಲ ಡಬಲ್ ಹೆಡರ್ ಆಗಿದ್ದು ಮಧ್ಯಾಹ್ನ ಮತ್ತು ರಾತ್ರಿ ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವನ್ನು (RCB vs DC) ಎದುರಿಸಲಿದೆ. 7:30ಕ್ಕೆ ಶುರುವಾಗಲಿರುವ ದ್ವಿತೀಯ ಪಂದ್ಯ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ (UPZ vs GGT) ನಡುವೆ ಆಯೋಜಿಸಲಾಗಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮಧ್ಯಾಹ್ನ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು ಯಾವರೀತ ಪ್ರದರ್ಶನ ನೀಡುತ್ತಾರೆ ನೋಡಬೇಕಿದೆ. ಆರ್‌ಸಿಬಿ ಇಲ್ಲಿಯವರೆಗೆ ಯಾವುದೇ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಪುರುಷರ ತಂಡದಂತೆ ಮಹಿಳಾ ತಂಡವೂ ಕ್ರಿಕೆಟ್ ಪ್ರಪಂಚದ ದೊಡ್ಡ ಹೆಸರುಗಳ ದಂಡನ್ನೇ ಹೊಂದಿದೆ. ಸ್ಮೃತಿ ಮಂದಾನ ನಾಯಕಿಯಾಗಿದ್ದು, ಎಲಿಸ್ ಪೆರ್ರಿ, ರಿಚಾ ಘೋಷ್, ಸೋಫಿ ಡಿವೈನ್, ರೇಣುಕಾ ಸಿಂಗ್, ಎರಿನ್ ಬರ್ನ್ಸ್ ಅವರಂತಹ ಅಪಾಯಕಾರಿ ಪ್ಲೇಯರ್ಸ್ ಅನ್ನು ಹೊಂದಿದೆ. ಇತ್ತ ಡೆಲ್ಲಿ ತಂಡದಲ್ಲಿ ಲ್ಯಾನಿಂಗ್ ಜೊತೆಗೆ ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ ಅವರಂತಹ ಸ್ಟಾರ್ ಆಟಗಾರ್ತಿಯರಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಡೇನ್ ವ್ಯಾನ್ ನೀಕರ್ಕ್, ಕೋಮಲ್ ಜಂಜಾದ್, ಆಶಾ ಶೋಭನಾ, ಎರಿನ್ ಬರ್ನ್ಸ್, ಪ್ರೀತಿ ಬೋಸ್, ರೇಣುಕಾ ಸಿಂಗ್, ಸೋಫಿ ಡಿವೈನ್, ಹೀದರ್ ನೈಟ್, ಮೇಗನ್ ಶುಟ್, ದೀಕ್ಷಾ, ಇಂದ್ರಾಣಿ ರಾಯ್, ಪೂನಂ ಖೇಮ್ನಾರ್, ಸಹನಾ ಪವಾರ್, ಶ್ರೇಯಾಂಕಾ ಪಾಟೀಲ್.
Nathan Lyon: ಎಲ್ಲರನ್ನು ಹಿಂದಿಕ್ಕಿ ಐತಿಹಾಸಿಕ ದಾಖಲೆ ಬರೆದ ನಾಥನ್ ಲಿಯಾನ್
ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೋಡ್ರಿಗಸ್, ಮೆಗ್ ಲ್ಯಾನಿಂಗ್ (ನಾಯಕಿ), ಮರಿಜನ್ ಕಪ್, ಸ್ನೇಹ ದೀಪ್ತಿ, ಅರುಂಧತಿ ರೆಡ್ಡಿ, ಶಫಾಲಿ ವರ್ಮಾ, ರಾಧಾ ಯಾದವ್, ಆಲಿಸ್ ಕ್ಯಾಪ್ಸೆ, ತಾರಾ ನಾರ್ರಿಸ್, ಲಾರಾ ಹ್ಯಾರಿಸ್, ಶಿಖಾ ಪಾಂಡೆ, ಟಿಟಾಸ್ ಸಾಧು, ಜಸಿಯಾ ಅಖ್ತರ್, ಮಿನ್ನು ಮಣಿ, ತಾನಿಯಾ ಭಾಟಿಯಾ, ಪೂನಮ್ ಯಾದವ್, ಜೆಸ್ ಜಾನ್ಸನ್ ಮತ್ತು ಅಪರ್ಣಾ ಮೊಂಡಲ್.
ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಅಲೈಸಾ ಹೇಲಿ ನಾಯತ್ವದ ಯುಪಿ ವಾರಿಯರ್ಸ್ ಹಾಗೂ ಬೆತ್ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್ ತಂಡ ಮುಖಾಮುಖಿ ಆಗಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಕೇವಲ 69 ರನ್ಗೆ ಆಲೌಟ್ ಆಗಿ ಹೀನಾಯ ಪ್ರದರ್ಶನ ನೀಡಿರುವ ಗುಜರಾತ್ಗೆ ಈ ಪಂದ್ಯ ಮುಖ್ಯವಾಗಿದೆ. ಗುಜರಾತ್ ತಂಡದಲ್ಲಿ ನಾಯಕಿ ಮೂನಿ ಜೊತೆಗೆ ಮೇಘನಾ, ಹರ್ಲಿನ್ ಡಿಯೋಲ್, ಗಾರ್ಡ್ನರ್, ಸ್ನೇಹ್ ರಾಣ, ಮಾನ್ಸಿ ಜೋಶಿ, ತನುಜಾ ಕನ್ವರ್ ಅವಂತರದ ಆಟಗಾರರನ್ನು ಹೊಂದಿದೆ. ಇತ್ತ ಯುಪಿ ತಂಡದಲ್ಲಿ ಹೇಲಿ ಜೊತೆಗೆ ಕಿರಣ್ ನವಗಿರೆ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ತಹ್ಲಿಯಾ ಮೆಗ್ರಾತ್, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್ನಂತರ ಪ್ಲೇಯರ್ಸ್ ಇದ್ದಾರೆ.
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ನಾಯಕಿ), ಕಿರಣ್ ನವಗಿರೆ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ದೀಪ್ತಿ ಶರ್ಮಾ, ತಹ್ಲಿಯಾ ಮೆಗ್ರಾತ್, ಪಾರ್ಶವಿ ಚೋಪ್ರಾ, ಶ್ವೇತಾ ಸೆಹ್ರಾವತ್, ಸೊಪ್ಪದಂಡಿ ಯಶಸ್ರಿ, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಲಾ ಹರ್ರಿಸ್ವಾಯಿಲ್, ರಾಜೇಶ್ವರಿ ಗಾಯಕ್ವಾಡ್, ಅಂಜಲಿ ಸರ್ವಾಣಿ, ಲಕ್ಷ್ಮಿ ಯಾದವ್.
ಗುಜರಾತ್ ಜೈಂಟ್ಸ್: ಕಿಮ್ ಗಾರ್ತ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಆಶ್ಲೀಗ್ ಗಾರ್ಡ್ನರ್, ಸೋಫಿಯಾ ಡಂಕ್ಲಿ, ಬೆತ್ ಮೂನಿ (ನಾಯಕಿ), ಹರ್ಲೀನ್ ಡಿಯೋಲ್, ಹರ್ಲಿ ಗಾಲಾ, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ, ಸ್ನೇಹ್ ರಾಣಾ, ಜಾರ್ಜಿಯಾ ವೇರ್ಹ್ಯಾಮ್, ಮಾನ್ಸಿ ಜೋಶಿ, ಮೋನಿಕಾ, ಅಶ್ವನಿ ಕುಮಾರಿ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ, ತನುಜಾ ಕನ್ವರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:27 am, Sun, 5 March 23